Advertisement

Bangalore: ಎಲ್‌ಇಟಿ ಉಗ್ರ ಜುನೈದ್‌ ಸಹಚರನ ಬಂಧನ

02:59 PM Aug 30, 2023 | Team Udayavani |

ಬೆಂಗಳೂರು: ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಲಷ್ಕರ್‌-ಎ-ತೊಯ್ಬಾ ಸಂಘಟನೆ ಐವರು ಸದಸ್ಯರ ಮಾಸ್ಟರ್‌ ಮೈಂಡ್‌, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್‌ನ ಸಹಚರನಾದ ರೌಡಿಶೀಟರ್‌ ಮೊಹಮ್ಮದ್‌ ಅರ್ಷದ್‌ ಖಾನ್‌ನನ್ನು ಆರ್‌.ಟಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಅರ್ಷದ್‌ ಖಾನ್‌ 2017ರಲ್ಲಿ ಜುನೈದ್‌ ಜತೆ ಸೇರಿ ನೂರ್‌ ಅಹಮ್ಮದ್‌ ಎಂಬಾತನ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ. ಬಳಿಕ ಜಾಮೀನು ಪಡೆದು ಬಿಡುಗಡೆಯಾಗಿದ್ದ. ಆ ಬಳಿ ಕವೂ ಕೊಲೆ, ಕೊಲೆ ಯತ್ನ, ರಾಬರಿ, ಜೀವ ಬೆದರಿಕೆ ಸೇರಿ 17 ಪ್ರಕರಣಗಳಲ್ಲಿ ಆರೋಪಿ ಯಾಗಿದ್ದಾನೆ. ಆರ್‌.ಟಿ.ನಗರ ಠಾಣೆಯಲ್ಲಿ ಈತನ ವಿರುದ್ಧ ರೌಡಿಪಟ್ಟಿ ತೆರೆಯಲಾಗಿದೆ. ಕೆಲ ಪ್ರಕರಣಗಳಲ್ಲಿ ಕೋರ್ಟ್‌ಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಹೀಗಾಗಿ ಕೋರ್ಟ್‌ ವಾರೆಂಟ್‌ ಹೊರಡಿಸಿತ್ತು ಎಂದು ಪೊಲೀಸರು ಹೇಳಿದರು.

ಪೊಲೀಸರ ಮೇಲೆ ಹಲ್ಲೆಗೆ ಯತ್ನ: ಆರೋಪಿಯ ವಿರುದ್ಧ 8 ವಾರೆಂಟ್‌ಗಳಿದ್ದ ಕಾರಣ ಈತನ ಬಂಧನಕ್ಕೆ ಕೋರ್ಟ್‌ ಸೂಚಿಸಿತ್ತು. ಹೀಗಾಗಿ ಆರೋ ಪಿಯ ಮಾಹಿತಿ ಸಂಗ್ರಹಿಸಿ ಆ.27ರಂದು ಮುಂಜಾನೆ 5 ಗಂಟೆ ಸುಮಾರಿಗೆ ಆರ್‌ .ಟಿ.ನಗರದಲ್ಲಿರುವ ಆತನ ಮನೆ ಮೇಲೆ ದಾಳಿ ಮಾಡಲಾಗಿತ್ತು. ಆಗ ಚಾಕುವನ್ನು ಕುತ್ತಿಗೆಗೆ ಹಿಡಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೈಡ್ರಾಮಾ ಮಾಡಿದ್ದ. ಬಳಿಕ ಅದನ್ನು ತಡೆಯಲು ಹೋದ ಪೊಲೀಸರ ಮೇಲೂ ಚಾಕು ಬೀಸಿದ್ದು, ಪೊಲೀಸರಿಗೆ ಸಣ್ಣ ಪ್ರಮಾಣದ ಗಾಯವಾಗಿತ್ತು. ಆನಂತರ ಪೊಲೀಸರನ್ನು ತಳ್ಳಿ ಎರಡನೇ ಮಹಡಿಯಲ್ಲಿರುವ ತನ್ನ ಮನೆಯಿಂದ ಜಿಗಿದು ಪರಾರಿಯಾಗಲು ಯತ್ನಿಸಿದ್ದ. ಆದರೆ, ಹಿಂಬಾಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಈ ಹಿಂದೆ ಇದೇ ಮಾದರಿಯಲ್ಲಿ ಹೈಡ್ರಾಮಾ ಮಾಡಿದ್ದ. ಉಗ್ರ ಲಿಂಕ್‌ ಸದ್ಯಕ್ಕಿಲ್ಲ: ಆರೋಪಿಯ ವಿಚಾರಣೆಯಲ್ಲಿ 2017ರ ನೂರ್‌ ಅಹಮದ್‌ ಅಪಹರಣ ಮತ್ತು ಕೊಲೆ ಪ್ರಕರಣ ದಲ್ಲಿ ಜುನೈದ್‌ ಜತೆ ಬಂಧನ ಕ್ಕೊಳಗಾಗಿದ್ದ. ಆ ನಂತರ ಆತನ ಸಂಪರ್ಕ ಇಟ್ಟುಕೊಂಡಿಲ್ಲ. ಹೀಗಾಗಿ ಉಗ್ರ ಸಂಘ ಟನೆ ಎಲ್‌ಇಟಿ ಲಿಂಕ್‌ ಇಲ್ಲ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next