Advertisement
ಅಭಿವೃದ್ಧಿಶೀಲ ಭಾರತ ದೇಶದಲ್ಲಿ ವಿಜ್ಞಾನ- ತಂತ್ರಜ್ಞಾನವೂ ದೇಶದ ಅಭಿವೃದ್ಧಿಗೆ ಪೂರಕ ವಾಗಿ ಬೆಳ ವಣಿಗೆಯಾಗುತ್ತಿದೆ. ದಿನಕ್ಕೊಂದು ನವನವೀನ ಆವಿಷ್ಕಾರ ನಡೆಯುತ್ತಿರುವುದರಿಂದಾಗಿ ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಆಚರಿಸುವುದು ಯೋಗ್ಯ ಎನಿಸುತ್ತದೆ.
ಭಾರತವೂ ವಿಜ್ಞಾನ-ತಂತ್ರಜ್ಞಾನಕ್ಕೆ ಪೂರಕವಾದ ಅಭಿವೃದ್ಧಿ ಅಂಶಗಳನ್ನು ಅಳವಡಿಸಿಕೊಳ್ಳುತ್ತಾ ಬಂದಿದೆ. ಜೀವ ವೈವಿಧ್ಯ, ಭೌತ, ರಸಾಯನ, ಖಗೋಲಕ್ಕೆ ಸಂಬಂಧಿಸಿದ ಸಂಶೋಧನೆ, ಆವಿಷ್ಕಾರದ ಮೂಲಕ ಜಗತ್ತಿಗೆ ತನ್ನ ಸಾಮರ್ಥ್ಯವನ್ನು ಪರಿಚಯಿಸುತ್ತ ಬಂದಿದೆ. ಆದರೆ ಅಣು ಪರೀಕ್ಷೆಯ ಕ್ಷೇತ್ರದಲ್ಲಿ ಮಾತ್ರ ಹಲವಾರು ರೀತಿಯಲ್ಲಿ ಪ್ರಯತ್ನ ಮಾಡಿದ್ದರೂ ಕೂಡ ಯಶಸ್ವಿಯಾಗಿರಲಿಲ್ಲ. 1974ರಲ್ಲಿ ಮೊದಲ ಬಾರಿಗೆ ಪೋಖ್ರಾನ್‌ನಲ್ಲಿ ಸ್ಮೈಲಿಂಗ್ ಬುದ್ಧ ಎಂಬ ರಹಸ್ಯ ಸೂಚಕ ಹೆಸರಿನ ಮೇಲೆ ಅಣುಬಾಂಬ್ ಪರೀಕ್ಷೆಯನ್ನು ಮಾಡಲಾಗಿತ್ತು. ಆದರೆ ಜಗತ್ತಿಗೆ ಭಾರತ ಅಣ್ವಸ್ತ್ರ ದೇಶ ಎಂದು ಬಿಂಬಿತವಾಗಿರಲಿಲ್ಲ. ಮುಂದೆ ಇದೇ ಆಧಾರದಲ್ಲಿ ಮೇಲೆ 1998, ಮೇ 11ರಂದು ರಾಜಸ್ಥಾನದ ಪೋಖ್ರಾನ್‌ನಲ್ಲಿ ಆಪರೇಶನ್ ಶಕ್ತಿ ಎಂಬ ರಹಸ್ಯ ಸೂಚಕ ಹೆಸರಿನ ಮೇಲೆ ಎರಡನೇ ಬಾರಿಗೆ ಯಶಸ್ವಿಯಾಗಿ ಅಣ್ವಸ್ತ್ರವನ್ನು ಪ್ರಯೋಗಿಸಲಾಯಿತು. ಈ ಮೂಲಕ ಜಗತ್ತಿನ ಅಣ್ವಸ್ತ್ರ ಪರೀಕ್ಷೆ ನಡೆಸಿದ ಆರನೇ ದೇಶವಾಗಿ ಭಾರತ ಗುರುತಿಸಿಕೊಂಡಿತು. ಈಅಣ್ವಸ್ತ್ರ ಪರೀಕ್ಷೆಯಲ್ಲಿ ಪ್ರಯೋಗಿಸಿದ ಐದು ಅಣುಬಾಂಬ್‌ಗಳು ಯಶಸ್ವಿಯಾಗಿದ್ದವು. ಈ ಅಣ್ವಸ್ತ್ರ ಪ್ರಯೋಗದ ಕೀರ್ತಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಅಬ್ದುಲ್ ಕಲಾಂ ಅವರ ಪರಿಶ್ರಮಕ್ಕೆ ಸಂದ ಜಯವಾಗಿತ್ತು. ಈ ದಿನದ ಸ್ಮರಣಾರ್ಥವಾಗಿ ದೇಶದಲ್ಲಿ ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಕೇಂದ್ರ ವಿಜ್ಞಾನ-ತಂತ್ರಜ್ಞಾನ ಸಚಿವಾಲಯದ ಸಹಯೋಗದಲ್ಲಿ ಆಚರಿಸಲಾಗುತ್ತದೆ.
Related Articles
ಆಚರಿಸಲಾಗುತ್ತಿದೆ.
Advertisement
ಎಲ್ಲ ಕ್ಷೇತ್ರಗಳಲ್ಲಿ ತಂತ್ರಜ್ಞಾನವೂ ಇಂದು ಪಾರಮ್ಯ ಸಾಧಿಸಿದೆ. ಈ ಬಗ್ಗೆ ಸಾಧಕ-ಬಾಧಕವಾದ ಚರ್ಚೆ ಕೂಡ ಸಕಾಲಿಕವಾದುದು. ಮೇ 11ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಆಚರಿಸಲಾಗುತ್ತದೆ. ಅಭಿವೃದ್ಧಿಗೆ ಪೂರಕವಾಗಿ ತಂತ್ರಜ್ಞಾನ ಅಳವಡಿಕೆ ಅಭಿವೃದ್ಧಿಶೀಲ ಭಾರತ ದೇಶಕ್ಕೆ ಅಗತ್ಯ ಎಂಬುದು ತಿಳಿಯಬಹುದು.
ತಂತ್ರಜ್ಞಾನ ಬಳಕೆ ಅಗತ್ಯಇಂದು ತಂತ್ರಜ್ಞಾನವೂ ಎಲ್ಲ ಕ್ಷೇತ್ರಗಳಿಗೆ ವಿಸ್ತರಿಸಿಕೊಂಡಿದೆ. ಇದರಿಂದ ಅಭಿವೃದ್ಧಿಗೆ
ಸಹಕಾರಿಯಾಗಿದೆ ಎಂದು ಹೇಳಬಹುದು. ಕೃಷಿ ಸಹಿತ ಇನ್ನು ಹಲವಾರು ಕ್ಷೇತ್ರಗಳಲ್ಲಿ
ಕೂಡ ತಂತ್ರಜ್ಞಾನದ ಬಳಕೆ ಸೂಕ್ತವಾದುದು. ದೇಶವೂ ಸುಸ್ಥಿರ ಭವಿಷ್ಯವನ್ನು ಇಟ್ಟುಕೊಂಡು ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕಿದೆ. ಇದು ಅಭಿವೃದ್ಧಿಗೆ ಪೂರಕವಾಗಲಿದೆ. •ಶಿವ ಸ್ಥಾವರಮಠ