Advertisement

ಗ್ರಾಮೀಣ ಯುವಕರು ಕ್ರೀಡೆಗಳಲ್ಲಿ ಪಾಲ್ಗೊಳ್ಳಲಿ

04:08 PM Dec 29, 2019 | Suhan S |

ಬೇತಮಂಗಲ: ಗ್ರಾಮೀಣ ಯುವಕರು ಹೆಚ್ಚಾಗಿ ಕ್ರೀಡೆಗಳಲ್ಲಿ ಭಾಗವಹಿಸಿ, ಉತ್ತಮ ಆರೋಗ್ಯ ಹಾಗೂ ದೈಹಿಕವಾಗಿ ಸದೃಢರಾಗಬೇಕು ಎಂದು ಸಮಾಜ ಸೇವಕ ಡಾ.ಸುರೇಶ್‌ ಹೇಳಿದರು.

Advertisement

ಪಟ್ಟಣದ ಪಾಲಾರ್‌ ಕೆರೆ ಅಂಗಳದಲ್ಲಿ ಟಿಸಿಸಿ ಬಳಗ ಏರ್ಪಡಿಸಿದ್ದ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಕ್ರಿಕೆಟ್‌ ಆಟಗಾರರಿಗೆ ಶುಭ ಹಾರೈಸಿ ಮಾತನಾಡಿದರು.

ಕ್ರೀಡೆಗಳಿಂದ ದೂರ ಸರಿಯುತ್ತಿರುವ ಯುವಕರು: ಗ್ರಾಮೀಣ ಯುವಕರು ಕ್ರೀಡೆಗಳಿಂದ ದೂರ ಸರಿಯುತ್ತಿರುವುದು ಬೇಸರ ತಂದಿದೆ. ವರ್ಷಕ್ಕೊಮ್ಮೆ ಕ್ರಿಕೆಟ್‌, ಕಬಡ್ಡಿ, ವಾಲಿಬಾಲ್‌ ಇತರೆ ಕ್ರೀಡೆಗಳನ್ನು ಏರ್ಪಡಿಸಿ ತಮ್ಮಲ್ಲಿರುವ ಪ್ರತಿಭೆ ಗುರುತಿ ಸುವ ಅವಶ್ಯಕತೆ ಹೆಚ್ಚಿದೆ. ಇಂದಿನ ದಿನಗಳಲ್ಲಿ ಹೆಚ್ಚಾಗಿ ಮೊಬೈಲ್‌, ಸಾಮಾ ಜಿಕ ಜಾಲತಾಣ ಗಳಲ್ಲಿ ಕಾಲಹರಣ ಮಾಡಿ, ಕ್ರೀಡಾ ಸಂಸ್ಕೃತಿ ನಶಿಸುವಿಕಗೆ ಕಾರಣವಾಗುತ್ತಿದ್ದಾರೆ. ಯುವಕರು ದುಷcಟಗಳಿಗೂ ಬಲಿಯಾಗುತ್ತಾರೆ. ಇದಕ್ಕೆಲ್ಲಾ ಬ್ರೇಕ್‌ ಹಾಕಲು ಕ್ರೀಡೆಗಳು ಅಗತ್ಯವಾಗಿವೆ ಎಂದರು.

ಕ್ಷೇತ್ರದಲ್ಲಿ ಹೆಚ್ಚಾಗಿ ಬಡವರಿದ್ದು, ಯುವಕರು ತಮ್ಮ ಜೀವನ ರೂಪಿಸಿಕೊಳ್ಳಲು ಇಂತಹ ಕ್ರೀಡಾ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಾ ತಮ್ಮ ಪ್ರತಿಭೆಯನ್ನು ಹೊರ ತಂದರೆ ಅವರು ಆಸಕ್ತಿ ಹೊಂದುವ ಕ್ಷೇತ್ರದಲ್ಲಿ ಜೀವನ ರೂಪಿಸಿ ಕೊಳ್ಳಬಹುದು ಮತ್ತು ತಾವು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಬಡವರ ಸೇವೆಗೆ ಸಿದ್ದ: ಕ್ಷೇತ್ರದಲ್ಲಿ ಪಕ್ಷ ಭೇದವಿಲ್ಲದೆ ತಾವು ಸಮಾಜ ಸೇವೆ ಮಾಡಲು ಇಚ್ಛಿಸಿದ್ದೇನೆ. ನನಗೆ ಬಡವರ, ಶ್ರಮಿಕರ ಸೇವೆ ಮುಖ್ಯ ಹೊರತು ರಾಜಕೀಯ ಲಾಭಕ್ಕೆ ಬಂದಿಲ್ಲವೆಂದು ಸ್ಪಷ್ಟನೆ ನೀಡಿದರು. ಬಡವರು ಮಕ್ಕಳಿಗೆ ಉನ್ನತ ವಿದ್ಯಾಭ್ಯಸ ನೀಡಲು ಸಾಧ್ಯ ವಾಗದೆ ಮಕ್ಕಳನ್ನು ನಿಲ್ಲಿಸುತ್ತಾರೆ. ಆದರೆ ಅವರಿಗೆ ಓದುವ ಆಸೆ ಇದ್ದರೂ ಈಡೇರಿಸಲು ಸಾಧ್ಯವಾಗುವುದಿಲ್ಲ. ಇಂತಹ ಮಕ್ಕಳಿಗೆ ತಾವು ಸಾಧ್ಯವಾದಷ್ಟು ಸಹಾಯ ಮಾಡಲು ತಯಾರಿದ್ದೇವೆ. ಈಗಾಗಲೇ ಒಬ್ಬ ವಿದ್ಯಾರ್ಥಿನಿಗೆ ಶಿಕ್ಷಣ ಒದಗಿಸಲಾಗಿದೆ ಎಂದರು.

Advertisement

ಗ್ರಾಮ ಪಂಚಾಯಿತಿ ಅಧ್ಯಕ್ಷ ಕಿರಣ್‌ ಕುಮಾರ್‌, ಗ್ರಾಮ ಪಂಚಾಯಿತಿ ಸದಸ್ಯ ಎನ್‌.ಡಿ. ಶಿವ ಪ್ರಸಾದ್‌, ಮುಖಂಡರಾದ ರಾಧಾಕೃಷ್ಣ, ವಿಶ್ವ ನಾಥ್‌, ವಿ.ಆರ್‌. ಲಕ್ಷ್ಮೀ ನಾರಾಯಣ್‌, ರಮೇಶ್‌, ವಿಶ್ವ, ರೇಶನ್‌ ನಂಜುಡಪ್ಪ, ಗಾಂಧಿನಗರ ರಘು, ರಾಮು, ಕೊತ್ತಿಮೀರಿ ವೆಂಕಟೇಶ್‌ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಅಭಿಮಾನಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next