Advertisement

ರಾಮನಗರವನ್ನು ದೆಹಲಿ ಎಂದು ಬೇಕಾದರೆ ಮಾಡಲಿ: ಡಿಕೆಶಿಗೆ ಕುಮಾರಸ್ವಾಮಿ ವ್ಯಂಗ್ಯ

06:53 PM Nov 10, 2023 | Team Udayavani |

ರಾಮನಗರ: ರಾಮನಗರಕ್ಕೆ ಬೆಂಗಳೂರು ದಕ್ಷಿಣ ಅಲ್ಲದಿದ್ದರೆ ದೆಹಲಿ ಎಂದು ಬೇಕಾದರೆ ಮರುನಾಮಕರಣ ಮಾಡಲಿ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ದೆಹಲಿ ಎಂದು ನಾಮಕರಣ ಮಾಡಿದರೆ ಪ್ರಪಂಚದ ಮೂಲೆಮೂಲೆಯಿಂದ ಎಲ್ಲಾ ಬರುತ್ತಾರೆ. ರಾಮನಗರವನ್ನು ಬೆಂಗಳೂರು ಮಾಡುವುದು ಬೇಡ, ದೆಹಲಿ ಅಥವಾ ದುಬೈ ಎಂದು ಹೆಸರಿಡಿ. ಹೆಸರು ಬದಲಾವಣೆ ಮಾಡುವುದರಿಂದ ಯಾರೂ ಬರುವುದಿಲ್ಲ. ನೀವು ಯಾವ ಮೂಲಭೂತ ಸೌಕರ್ಯ ಕೊಡುತ್ತೀರಿ, ಅಭಿವೃದ್ಧಿ ಮಾಡುತ್ತೀರಿ ಅದರ ಮೇಲೆ ಜನಬರುತ್ತಾರೆ. ಅವರಿಗೆ ಬೇರೆ ಕೆಲಸ ಇಲ್ಲ, ಜನರ ಕೆಲಸ ಮಾಡಲ್ಲ. ಜನರ ಗಮನ ಸೆಳೆಯಲು ಹೀಗೆ ಮಾತನಾಡುತ್ತಾರೆ ಎಂದರು.

ಇಂತಹ ಇನ್ನೂ ಇಪ್ಪತ್ತು ಘೋಷಣೆ ಮಾಡಲಿ. ನನ್ನ ಜಿಲ್ಲೆಗೆ ಅಭಿವೃದ್ಧಿಗೆ ಯಾವುದೇ ತಕರಾರಿಲ್ಲ. ಏನ್ ಗ್ರೇಟರ್ ಬೆಂಗಳೂರು ಮಾಡುತ್ತಾರೋ ಮಾಡಲಿ. ಮಳೆ ಬಂದಾಗ ಬೆಂಗಳೂರು ಏನಾಗುತ್ತಿದೆ ಎಂದು 2004ರಲ್ಲಿ ಬೆಂಗಳೂರನ್ನು ಸಿಂಗಾಪುರ ಮಾಡುತ್ತೇವೆ ಅಂದಿದ್ದರು. ಮಳೆ ಬಂದಾಗ ಏನಾಯ್ತೆಂದು ನೀವೆ ತೋರಿಸಿದರಲ್ಲಾ. ಕಂದಾಯ ಸಚಿವ ಕ್ಷೇತ್ರದಲ್ಲೇ ಏನಾಯ್ತೆಂದು ನೋಡಿದ್ದೇವಲ್ಲ, ಇದೇ ಗ್ರೇಟರ್ ಬೆಂಗಳೂರು. ನಾನ್ ಕಾಣದೆ ಇರುವುದಾ ಇದೆಲ್ಲಾ ಎಂದರು.

ಹೆಚ್ಡಿಕೆ ಫೋನ್ ಕದ್ದಾಲಿಕೆಯಾಗುತ್ತಿದೆ ಎಂಬ ವಿಚಾರಕ್ಕೆ ಮಾತನಾಡಿದ ಅವರು, ಎಲ್ಲಾ ಸರ್ಕಾರದಲ್ಲೂ ಅಧಿಕಾರಿಗಳ ಮಟ್ಟದಲ್ಲಿ ಇದೆಲ್ಲಾ ನಡೆಯುತ್ತದೆ. ಫೋನ್ ಕದ್ದಾಲಿಕೆ ಮಾಡಿ ಏನು ಪ್ರಯೋಜನ. ಅವರಿಗೆ ಅನುಕೂಲವಾಗುತ್ತದೆ ಎಂದರೆ ಮಾಡಲಿ ಬಿಡಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next