Advertisement

ಪ್ರಕಾಶಕರು ಆರ್ಥಿಕವಾಗಿ ಸದೃಢರಾಗಲಿ

04:07 PM Oct 24, 2021 | Team Udayavani |

ಕೊಪ್ಪಳ: ಪ್ರಕಾಶಕರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದೇ ನಮ್ಮ ಪ್ರಕಾಶನ ಸಂಘದ ಉದ್ದೇಶವಾಗಿದೆ. ಅವರು ಆರ್ಥಿಕವಾಗಿ ಸದೃಢರಾಗಬೇಕು. ಅವರ ಪುಸ್ತಕಗಳಿಗೆ ಮನ್ನಣೆ ಸಿಗಬೇಕು, ಅವರಿಗೆ ಲಾಭವಾಗಬೇಕು ಎನ್ನುವ ಉದ್ದೇಶದಿಂದ ನೂತನವಾಗಿ ಹೈಕ ಪುಸ್ತಕ ಪ್ರಕಾಶಕರ, ಮುದ್ರಕರ, ಮಾರಾಟಗಾರರ ಸಂಘ ಸ್ಥಾಪಿಸಿದ್ದೇವೆ ಎಂದು ಸಂಘದ ಸಂಚಾಲಕ ಮಹೇಶಬಾಬು ಸುರ್ವೆ ಹೇಳಿದರು.

Advertisement

ನಗರದ ಪದಕಿ ಲೇಔಟ್‌ನ ಬಸವ ಸದನದಲ್ಲಿ ಪ್ರಕಾಶಕರ ಸಮ್ಮೇಳನದ ಅಧ್ಯಕ್ಷ ಜಿ.ಎಸ್‌. ಗೋನಾಳ ಅವರನ್ನು ಸಮ್ಮೇಳನಕ್ಕೆ ಅಧಿಕೃತವಾಗಿ ಆಹ್ವಾನಿಸಿ ಅವರು ಮಾತನಾಡಿದರು.

ಈ ಸಂಘದ ವತಿಯಿಂದ ಹೈದರಾಬಾದ್‌ ಕರ್ನಾಟಕದಲ್ಲೇ ಪ್ರಪ್ರಥಮ ಬಾರಿಗೆ ಪ್ರಕಾಶಕರ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮ್ಮೇಳನಾಧ್ಯಕ್ಷರಾಗಿ ಜಿ.ಎಸ್‌. ಗೋನಾಳ ಅವರನ್ನು ಆಯ್ಕೆ ಮಾಡಿದೆ. ಅವರನ್ನು ಸಮ್ಮೇಳನಕ್ಕೆ ಅಧಿಕೃತವಾಗಿ ಆಹ್ವಾನ ನೀಡಲಾಗುತ್ತಿದೆ ಎಂದರು.

ಸಮ್ಮೇಳನಾಧ್ಯಕ್ಷ ಜಿ.ಎಸ್‌. ಗೋನಾಳ ಮಾತನಾಡಿ, ಮಹೇಶಬಾಬು ಸುರ್ವೆ ಅವರು ನನ್ನ ಬಿಂಬ ಕವನ ಸಂಕಲನಕ್ಕೆ ರುಕ್ಮೀಣಿಬಾಯಿ ಸ್ಮಾರಕ ಪ್ರಶಸ್ತಿ ನೀಡುವ ಮೂಲಕ ನನ್ನ ಪ್ರತಿಭೆಗೆ ಪ್ರೋತ್ಸಾಹ ನೀಡಿದರು.

ಇದನ್ನೂ ಓದಿ: ಗ್ರಾಮಸ್ಥರಿಂದಲೇ ತಲೆಯೆತ್ತುತ್ತಿವೆ ಶಾಲಾ ಕೊಠಡಿಗಳು

Advertisement

ಪ್ರತಿಭೆಗಳಿಗೆ ಪ್ರೋತ್ಸಾಹದ ಅವಶ್ಯಕತೆ ಇರುತ್ತದೆ. ನನ್ನಂತಹ ಬಹಳಷ್ಟು ಪ್ರತಿಭಾವಂತರನ್ನು ಬೆಳಕಿಗೆ ತಂದ ಮಹೇಶಬಾಬು ಸುರ್ವೆ ಅವರಿಗೆ ಸಲ್ಲುತ್ತದೆ. ಅವರು ನನ್ನನ್ನು ಈ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕೆ ಅವರಿಗೆ ಚಿರಋಣಿ ಎಂದರು.

ಜಿಲ್ಲಾ ಚುಸಾಪ ಅಧ್ಯಕ್ಷ ಹನುಮಂತಪ್ಪ ಅಂಡಗಿ, ಮುಖಂಡರಾದ ಎಂ. ಸಾದೀಕ್‌ ಅಲಿ, ಎಂ.ಬಿ. ಅಳವಂಡಿ, ಎಚ್‌.ಎಸ್‌. ಹರೀಶ, ಬಸವರಾಜ ಗುಡ್ಲಾನೂರ, ಶಿವಕುಮಾರ ಹಿರೇಮಠ, ಉಮೇಶ ಪೂಜಾರ, ಚಿನ್ನಪ್ಪ ಗುಳಗುಳಿ, ಮಹಾಂತೇಶ ನೆಲಾಗಣಿ, ಶ್ರೀನಿವಾಸ ಚಿತ್ರಗಾರ, ಗವಿಸಿದ್ದಪ್ಪ ಬಾರಕೇರ, ಶಾರದಾಸಿಂಗ ರಜಪೂತ, ರತ್ನಮ್ಮ ಗೋನಾಳ, ಡಿ. ಜಗನ್ನಾಥಶೆಟ್ಟಿ ಜನಾದ್ರಿ, ಶ್ಯಾವಮ್ಮ ನೆಲ್ಲುಡಿ, ಸೌಮ್ಯ ಬಡಿಗೇರ ಸೇರಿ ಇತರರು ಪಾಲ್ಗೊಂಡಿದ್ದರು. ಉಮೇಶ ಸುರ್ವೆ ನಿರೂಪಿಸಿದರು. ಸೋಮರಾಜರೆಡ್ಡಿ ಗೋನಾಳ ಸ್ವಾಗತಿಸಿದರು. ಬಸವರಾಜ ಗೋನಾಳ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next