Advertisement

ಕಾಲಘಟ್ಟ ತಕ್ಕಂತೆ ಕವಿತೆ ಸೃಷ್ಟಿಯಾಗಲಿ

09:47 PM Dec 30, 2019 | Lakshmi GovindaRaj |

ಮೈಸೂರು: ಕವಿಯು ಬರೆಯುತ್ತಾನೆ, ಸಹೃದಯ ಓದುಗ ಓದುತ್ತಾನೆ. ಆದರೆ, ಇತ್ತೀಚಿನ ದಿನಗಳಲ್ಲಿ ಓದುಗರ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದು ಕೊಡಗಿನ ನಾಪೋಕ್ಲು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ| ಕಾವೇರಿ ಪ್ರಕಾಶ್‌ ತಿಳಿಸಿದರು. ಹೊಮ್ಮರಗಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಸೋಮವಾರ ಆಯೋಜಿಸಿದ್ದ 5ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಕವಿಗೋಷ್ಠಿಯಲ್ಲಿ ಮಾತನಾಡಿದ ಅವರು,

Advertisement

ಕಾಲಘಟ್ಟದಲ್ಲಿ ನಡೆದ ಘಟನಾವಳಿಗಳಿಗೆ ಅನುಸಾರವಾಗಿ ಕವಿತೆ ಕವನಗಳನ್ನು ರಚಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಓದುಗರನ್ನು ತಲುಪಬಹುದು ಎಂದು ಅಭಿಪ್ರಾಯಪಟ್ಟರು. ಜಗತ್ತಿನ ಸೃಷ್ಟಿ ಪಡೆದಿರುವ ಮಹತ್ವದಂತೆ ಕವಿತೆ ಜನ್ಮವು ಕೂಡ ಮಹತ್ವದ ಪಾತ್ರ ವಹಿಸಿದೆ. ಇತ್ತೀಚಿನ ದಿನಗಳಲ್ಲಿ ಯುವ ಜನತೆ ಹೆಚ್ಚಿನ ಪ್ರಮಾಣದಲ್ಲಿ ಕವಿತೆಗಳನ್ನು ಬರೆಯುತ್ತಿರುವುದು ಹರ್ಷ ತಂದಿದೆ ಎಂದು ತಿಳಿಸಿದರು.

ಕವಿಗೋಷ್ಠಿಯಲ್ಲಿ ಸಮ್ಮೇಳನಾಧ್ಯಕ್ಷೆ ಪ್ರೊ.ನೀ.ಗಿರಿಗೌಡ, ಡಾಕ್ಟರ್‌ ಕೆ.ಗೋವಿಂದೇಗೌಡ, ಬಿ.ಕೆ.ಮೀನಾಕ್ಷಿ,, ರವಿಶಂಕರ್‌ ಗುರು, ರಾಘವೇಂದ್ರ, ಚೇತನ, ಶರ್ಮಾ ಹೇಮಮಾಲಿನಿ, ಕಿರಣ್‌ ಮಂಜುಳಾ, ನರಸಿಂಹನಾಯಕ ಸೇರಿದಂತೆ ಮತ್ತಿತರರನ್ನು ಸನ್ಮಾನಿಸಲಾಯಿತು.

ಗೋಷ್ಠಿ 1: ಜೆಡಿಎಸ್‌ ತಾಲೂಕು ಅಧ್ಯಕ್ಷ ರಾಜೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿ-1ರಲ್ಲಿ ಶ್ರೀರಂಗಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಪ್ರೊ.ಎಚ್‌.ಕೆ.ಅನ್ನಪೂರ್ಣ ಜೀವನ ಮೌಲ್ಯಗಳು ಮತ್ತು ದಾಸ ಸಾಹಿತ್ಯ ಕುರಿತು ವಿಚಾರ ಮಂಡನೆ ಮಾಡಿದರೆ, ಪ್ರಾಧ್ಯಾಪಕಿ ಡಾ.ಜ್ಯೋತಿ ಶಂಕರ್‌ ಜೀವನ ಮೌಲ್ಯಗಳು ಮತ್ತು ವಚನ ಸಾಹಿತ್ಯ ಕುರಿತು ವಿಚಾರ ಮಂಡಿಸಿದರು. ಸಂಸ್ಕೃತಿ ಚಿಂತಕ ಡಾ.ಎಂ.ಎನ್‌.ರವಿಶಂಕರ್‌ ವರ್ತಮಾನ ಕನ್ನಡದ ಆತಂಕಗಳು ಮತ್ತು ಮಾರ್ಗೋಪಾಯಗಳನ್ನು ಕುರಿತು ಮಾಹಿತಿ ನೀಡಿದರು.

ಗ್ರಾಮೀಣ ಪ್ರದೇಶದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ಮಿನಿ ದಸರಾದಂತೆ ನಡೆಯಿತು. ಶಾಲಾ ಮಕ್ಕಳು ವಿವಿಧ ಬಗೆಯ ವೇಷಭೂಷಣ ಧರಿಸಿ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಒಟ್ಟಾರೆ ಹೊಮ್ಮರಗಳ್ಳಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next