ಗಂಗಾವತಿ: ಸಾಕು ಪ್ರಾಣಿ ಪಕ್ಷಗಳಿಂದ ಬರುವ ರೋಗಗಳ ಕುರಿತು ಜನರು ಜಾಗೃತರಾಗಿರಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ|ನಾಗರಾಜ ಹೇಳಿದರು. ಅವರು ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಮತ್ತು ಕೃಷಿವಿಜ್ಞಾನ ಕೇಂದ್ರದ ಆಶ್ರಯದಲ್ಲಿ ಆಯೋಜಿಸಿದ್ದ ಪ್ರಾಣಿ ಪಕ್ಷಿ ಜನ್ಯ ರೋಗಗಳ ನಿಯಂತ್ರಣ ಕುರಿತು ತಾಂತ್ರಿಕ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸಾಕು ಪ್ರಾಣಿಗಳು ಮತ್ತು ಪಕ್ಷಿಗಳಿಂದ ಅನೇಕ ರೋಗಗಳು ಬರುತ್ತಿದ್ದು, ಪ್ರಾಣಿ ಪಕ್ಷಿಗಳಿರುವ ಜಾಗವನ್ನು ಸ್ವತ್ಛತೆಯಿಂದ ಮತ್ತು ರೋಗ ನಿರೋಧಕವಾಗಿಡಬೇಕು. ಪಶುಸಂಗೋಪನೆ ದೇಶದ ಸಂಪತ್ತು ಹಾಗೂ ಸಾವಯವ ಕೃಷಿಗೆ ಅತ್ಯಗತ್ಯವಾಗಿದ್ದು, ಅವುಗಳ ನಿರ್ವಹಣೆಯನ್ನು ವೈಜ್ಞಾನಿಕ ರೀತಿಯಿಂದ ಮಾಡಬೇಕೆಂದರು. ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಎಂ.ವಿ. ರವಿ ಮಾತನಾಡಿ, ಇಲಾಖೆಯ ಸಿಬ್ಬಂದಿಗೆ ನಿಯತಕಾಲಿಕವಾಗಿ ತಾಂತ್ರಿಕ ಕಾರ್ಯಾಗಾರ ನಡೆಸಿಕೊಟ್ಟು ಅವರ ತಾಂತ್ರಿಕತೆಯನ್ನು ಪುನಶ್ಚೇತನಗೊಳಿಸಬೇಕು ಎಂದರು.
ಇದನ್ನೂ ಓದಿ:ಉಡುಪಿ ಜಿಲ್ಲೆಯಲ್ಲಿ ಕೋವಿಶೀಲ್ಡ್ ಲಸಿಕೆ ಪ್ರಯೋಗ; ಕೋವಿಡ್ ನಿರ್ಮೂಲನೆಯತ್ತ ಪ್ರಥಮ ಹೆಜ್ಜೆ
ಕೋಳಿ ಶೀತ ಜ್ವರದ ಬಗ್ಗೆ ಡಾ| ಪ್ರಕಾಶಚೂರಿ ಮತ್ತು ಕೃಷಿ ವಿಜ್ಞಾನಕೇಂದ್ರದ ಪಶು ವಿಜ್ಞಾನಿ ಡಾ| ಮಹಾಂತೇಶ್‌ಎಂ.ಟಿ ಹುಚ್ಚು ನಾಯಿ ರೋಗ , ಪ್ರಾಣಿಜನ್ಯ ರೋಗಗಳ ನಿಯಂತ್ರಣ ಕುರಿತು ಉಪನ್ಯಾಸ ನೀಡಿದರು.
ಡಾ|ಮಲ್ಲಯ್ಯ, ರಾಜ್ಯ ಪಶು ವೈದ್ಯಕೀಯ ಪರೀಕ್ಷಕರ ಸಂಘದ ಅಧ್ಯಕ್ಷ ಎಂ.ಎಚ್. ವೆಂಕಟರಾಜು, ಉಪಾಧ್ಯಕ್ಷ ಎಸ್.ಎಚ್. ಘಂಟಿ, ಕೆ.ಸಿ.ಸೋಮಶೇಖ ಇದ್ದರು.