Advertisement

ಮೋದಿ ಮತೊಮ್ಮೆ ಪ್ರಧಾನಿಯಾಗಲಿ; ಚಕ್ರವರ್ತಿ ಸೂಲಿಬೆಲೆ

05:06 PM Feb 15, 2024 | Team Udayavani |

ಉದಯವಾಣಿ ಸಮಾಚಾರ
ಚನ್ನಮ್ಮನ ಕಿತ್ತೂರು: ಐತಿಹಾಸಿಕ ಕಿತ್ತೂರು ಹೋರಾಟದ ನೆಲ. 1857ರಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕಿಂತ 25 ವರ್ಷಗಳ ಮೊದಲು ಈ ನೆಲದಲ್ಲಿ ರಾಣಿ ಚನ್ನಮ್ಮ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿ ಕ್ರಾಂತಿಯ ಕಹಳೆ ಊದಿದ್ದಳು ಎಂದು ವಾಗ್ಮಿ, ಚಿಂತಕ ಚಕ್ರವರ್ತಿ ಸೂಲಿಬೆಲೆ  ಹೇಳಿದರು.

Advertisement

ಪಟ್ಟಣದ ಶ್ರೀ ಗುರುಸಿದ್ದೇಶ್ವರ ಪ್ರೌಢಶಾಲೆ ಆವರಣದಲ್ಲಿ ನಡೆದ ಜೈ ಶ್ರೀರಾಮ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ
ಮಾಡಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೂರನೇ ಬಾರಿ ಮತ್ತೆ ಪ್ರಧಾನಿಯಾಗಬೇಕು. ಅವರ ನೇತೃತ್ವದಲ್ಲಿ ಭಾರತ ವಿಶ್ವಗುರುವಾಗಬೇಕು. ಅದಕ್ಕಾಗಿ ನಮ್ಮ ನಮೋ ಬ್ರಿಗೇಡ್‌ ಹಗಲಿರಳು ಶ್ರಮ ವಹಿಸುತ್ತಿದೆ. ಕಳೆದ 60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ ಸರ್ಕಾರ ದೇಶದ ಅಭಿವೃದ್ಧಿ ಮಾಡಲಿಲ್ಲ, ಬದಲಾಗಿ ತಮ್ಮ ತಮ್ಮ ಕುಟುಂಬಗಳ ಅಭಿವೃದ್ಧಿ ಮಾಡಿಕೊಂಡಿತು.

ಮೊದಲು ಭಾರತಕ್ಕೆ ಆಗಮಿಸಿದ ವಿದೇಶಿಗರು ತಾಜ್‌ ಮಹಲ್‌ ನೋಡಲು ಹೋಗುತ್ತಿದ್ದರು. ಆದರೆ ಇಂದು ಅವರು ಅಯೋಧ್ಯೆಗೆ ಹೋಗುವಂತೆ ಪ್ರಧಾನಿ ಮೋದಿ ಮಾಡಿದ್ದಾರೆ ಎಂದರು.

ನಿಚ್ಚಣಕಿ ಮಡಿವಾಳೇಶ್ವರ ಮಠದ ಶ್ರೀ ಪಂಚಾಕ್ಷರಿ ಸ್ವಾಮಿಗಳು, ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೇಂದ್ರ ಸ್ವಾಮಿಗಳು ಮಾತನಾಡಿ, ಜಗತ್ತಿನಲ್ಲಿ ಪ್ರಧಾನಿ ಮೋದಿ ಹಾಗೂ ಅಯೋಧ್ಯೆಯ ಶ್ರೀ ರಾಮನ ಹೆಸರುಗಳು ಮೇಲಿಂದ ಮೇಲೆ ಕೇಳಿ ಬರುತ್ತಿದ್ದು, ಭಾರತ ದೇಶ ಉಳಿದು, ಬೆಳೆಯಬೇಕಾದರೆ ನರೇಂದ್ರ ಮೋದಿ ಅವರು ಮತ್ತೂಮ್ಮೆ ಪ್ರಧಾನ ಮಂತ್ರಿ ಆಗಬೇಕು ಎಂದರು.

Advertisement

ನಮೋ ಬ್ರಿಗೇಡ್‌ ಸಂಚಾಲಕ ವರ್ಧಮಾನ ತ್ಯಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ ಮಾದರ ಓಂಕಾರ ಮಂತ್ರ ಹೇಳಿದರು. ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಕೆಎಮ್‌ಎಫ್‌ ನಿರ್ದೇಶಕ ಡಾ ಬಸವರಾಜ ಪರವಣ್ಣವರ, ಬಿಜೆಪಿ ಮುಖಂಡರು, ವಿಶ್ವ ಹಿಂದೂ ಪರಿಷತ್‌, ಆರ್‌ಎಸ್‌ಎಸ್‌, ಶ್ರೀ ರಾಮ ಸೇನೆ, ನಮೋ ಬ್ರಿಗೇಡ್‌ ಹಾಗೂ ಭಜರಂಗ ದಳದ
ಕಾರ್ಯಕರ್ತರು, ಪಟ್ಟಣದ ನಾಗರಿಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next