Advertisement

“ಎಚ್‌ಐವಿ ಸೋಂಕಿನ ತಪ್ಪು ಕಲ್ಪನೆ ದೂರವಾಗಲಿ’

01:52 AM Jan 23, 2020 | sudhir |

ಮಡಿಕೇರಿ: ಸದೃಢ‌ ಯುವ ಜನರನ್ನು ರೂಪಿಸುವುದು ಮುಖ್ಯ ಗುರಿಯಾಗಿದ್ದು, ಎಚ್‌ಐವಿ ಸೋಂಕಿನ ಬಗ್ಗೆ ಇರುವ ತಪ್ಪು ಕಲ್ಪನೆ ಮತ್ತು ತಾರತಮ್ಯ ಜನರಿಂದ ದೂರವಾಗಬೇಕು ಎಂದು ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ ಸುನಿತಾ ಮುತ್ತಣ್ಣ ಅವರು ಹೇಳಿದ್ದಾರೆ.

Advertisement

ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರೆಡ್‌ ರಿಬ್ಬನ್‌, ರೆಡ್‌ ಕ್ರಾಸ್‌, ರಾ.ಸೇ.ಯೋಜನಾ ಘಟಕದ ವತಿಯಿಂದ ಏಡ್ಸ್‌ ಜಾಗೃತಿ ಉಪನ್ಯಾಸ ಕಾರ್ಯಕ್ರಮವು ಸೋಮವಾರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕುತೂಹಲದ ಲೈಂಗಿಕ ಕ್ರಿಯೆಯ ಕಾರಣಕ್ಕಾಗಿ ಯುವ ಜನತೆ ಏಡ್ಸ್‌ ರೋಗಕ್ಕೆ ತುತ್ತಾಗುತ್ತಿದೆೆ. ವಿದ್ಯಾರ್ಥಿಗಳು ಸ್ವಯಂ ನಿಯಂತ್ರಣ, ಸ್ವಯಂ ಅರಿವು ಮತ್ತು ಸ್ವಯಂ ನಿರ್ಧಾರ ತೆಗೆದುಕೊಂಡು ಕೆಟ್ಟಚಟಗಳಿಂದ ದೂರವಿರಬೇಕು ಎಂದರು.

ಎಚ್‌.ಐ.ವಿ ಮತ್ತು ಏಡ್ಸ್‌ ಪೀಡಿತರ ವಿರುದ್ಧ ಉದ್ಯೋಗ, ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸೇವೆಗಳು, ಸಾರ್ವಜನಿಕ ಅಥವಾ ಖಾಸಗಿ ಕಚೇರಿಯಲ್ಲಿ ತಾರತಮ್ಯ ಮಾಡುವಂತಿಲ್ಲ ಎಂಬುದರ ಬಗ್ಗೆ ಇರುವ ವಿವಿಧ ಕಾನೂನುಗಳು ಮತ್ತು ಅದನ್ನು ನಿರಾಕರಿಸಿದರೆ ದಂಡ ಮತ್ತು ಜೈಲುವಾಸದ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.

ಏಡ್ಸ್‌ ಎಚ್‌.ಐ.ವಿ.ಯ ಕೊನೆಯ ಹಂತವಾಗಿದ್ದು ಬಿಳಿ ರಕ್ತ ಕಡಿಮೆಯಾಗುವುದರಿಂದ ಬೇರೆ ಬೇರೆ ರೋಗಗಳು ಬರುವ ಸಾಧ್ಯತೆ ಹೆಚ್ಚಿದೆ. ಮುಖ್ಯವಾಗಿ ಕ್ಷಯರೋಗವು ಸಾಮಾನ್ಯವಾಗಿ ಕಂಡುಬರುತ್ತದೆ. ಬಹು ಸಂಗಾತಿಗಳೊಂದಿಗೆ ಅಸುರಕ್ಷಿತ ಲೈಂಗಿಕ ಸಂಪರ್ಕ, ಪರೀಕ್ಷೆ ಮಾಡದ ರಕ್ತ ಪಡೆಯುವುದರಿಂದ, ಎಚ್‌.ಐ.ವಿ ಸೋಂಕಿತ ಸೂಜಿ, ಸಿರೆಂಜ್‌ಗಳನ್ನು ಸಂಸ್ಕರಿಸದೆ ಬಳಸುವುದರಿಂದ, ಎಚ್‌ಐವಿ ಸೋಂಕಿತ ತಾಯಿಯಿಂದ ಹುಟ್ಟುವ ಮಗುವಿನ ಗರ್ಭಾವಸ್ಥೆಯಲ್ಲಿ ಹಾಗೂ ಹೆರಿಗೆ ಸಮಯದಲ್ಲಿ ಅಥವಾ ಎದೆ ಹಾಲಿನ ಮುಖಾಂತರ ಎಚ್‌.ಐ.ವಿ ಸೋಂಕು ಹರಡುತ್ತದೆ ಎಂದು ಸುನಿತಾ ಮುತ್ತಣ್ಣ ವಿವರಿಸಿದರು.

Advertisement

ತೂಕ ಕಡಿಮೆ, ಜ್ವರ, ಸರ್ಪಸುತ್ತು, ಬಾಯಲ್ಲಿ ಬಿಳಿ ಮಚ್ಚೆ, ಕ್ಷಯರೋಗ, ಕೆಮ್ಮು ಶ್ವಾಸಕೋಶದ ತೊಂದರೆ ಇವುಗಳು ಎಚ್‌ಐವಿ, ಏಡ್ಸ್‌ ವ್ಯಕ್ತಿಯಲ್ಲಿ ಕಂಡುಬರುವ ರೋಗದ ಲಕ್ಷಣಗಳು. ಇಂತಹ ಲಕ್ಷಣಗಳು ಕಂಡುಬಂದರೆ ಜಿಲ್ಲಾ ಆಸ್ಪತ್ರೆಯಲ್ಲಿ ಮತ್ತು ಪ್ರಾಥಮಿಕ ಆಸ್ಪತ್ರೆಗಳಲ್ಲಿ ರಕ್ತ ಪರೀಕ್ಷೆ ಮಾಡಿಸಬೇಕು. ಎಚ್‌ಐವಿ ಸೋಂಕಿತರು ಕಂಡುಬಂದಲ್ಲಿ ಸಮಾಲೋಚನೆಯ ಅನಂತರ ಉಚಿತವಾಗಿ ಸರ್ಕಾರ ಚಿಕಿತ್ಸೆ ನೀಡುತ್ತದೆ ಎಂದು ಅವರು ಸಲಹೆ ನೀಡಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಪ್ರಕಾಶ್‌ ಅಧ್ಯಕ್ಷತೆ ವಹಿಸಿ ಮಾತನಾಡಿದದರು.
ವಿದೇಶದಲ್ಲಿ ಮಾರಕರೋಗವಾದ ಏಡ್ಸ್‌ ಹುಟ್ಟಿದರೂ, ನಮ್ಮ ದೇಶದಲ್ಲಿ ಅದರ ಪ್ರಭಾವ ವ್ಯಾಪಕವಾಗಿದೆ. ಜನಸಾಮಾನ್ಯರು ಅರಿವಿಲ್ಲದೆ ಏಡ್ಸ್‌ ರೋಗಕ್ಕೆ ತುತ್ತಾಗುತ್ತಿದ್ದಾರೆ ಈ ರೋಗಕ್ಕೆ ತುತ್ತಾದವರನ್ನು ಸಂಪೂರ್ಣ ಗುಣಪಡಿಸಲು ಸಾಧ್ಯವಿಲ್ಲ.ಎಂ¨ವರು ಹೇಳಿದ‌ರು.

ಸಾಮಾಜಿಕ ಜವಾಬ್ದಾರಿಯುತವಾಗಿ ವಿದ್ಯಾರ್ಥಿಗಳು ಸಮಾಜವನ್ನು ಬೆಳೆಸುವ ದೃಷ್ಠಿಯಿಂದ ಏಡ್ಸ್‌ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅವರು ಹೇಳಿದರು.

ಪ್ರಾಧ್ಯಾಪಕರಾದ ರಾಘವೆಂದ್ರ ಅವರು ಮಾತನಾಡಿ ಯುವ ಜನತೆಯು ಸೇವಾ ಮನೋಭಾವವನ್ನು ಬೆಳೆ‌ಸಿಕೊಳ್ಳುವುದರಿಂದ ಮನಸ್ಸನ್ನು ಸದೃಢವಾಗಿ ಇಟ್ಟುಕೊಳ್ಳಬಹುದು. ಯುವ ಜನರು ಹದಿಹರೆಯದ ವಯಸ್ಸಿನಲ್ಲಿ ಮಾರಕ ರೋಗಕ್ಕೆ ತುತ್ತಾಗುತ್ತಿದ್ದಾರೆ, ಎಚ್‌ಐವಿ ಏಡ್ಸ್‌ ನಂತಹ ರೋಗಕ್ಕೆ ತುತ್ತಾಗದಂತೆ ಯುವಕ ಯುವತಿಯರು ಭವ್ಯವಾದ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ| ಕೆ.ಸಿ. ದಯಾನಂದ, ಮತ್ತಿತರರು ಪಾಲ್ಗೊಂಡಿ ದ್ದರು. ವಿದ್ಯಾರ್ಥಿ ಶಿವ ಪ್ರಾರ್ಥಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next