Advertisement
12ನೇ ಶತಮಾನದ ತತ್ವಾದರ್ಶ ಅರಿತವರು ಶಿವಮೂರ್ತಿ ಮುರುಘರಾಜೇಂದ್ರ ಶರಣರು. ಪ್ರತಿಯೊಂದು ಕಾಯಕ ಸಮಾಜಕ್ಕೂ ತಮ್ಮ ಕರ್ತವ್ಯ ಅರಿತು ಮಾರ್ಗದರ್ಶನ ನೀಡಲು ಪ್ರತಿಯೊಂದು ಸಮಾಜಕ್ಕೂ ಗುರುಗಳನ್ನು ಕೊಡುಗೆಯಾಗಿ ನೀಡಿದವರು. ಚಿತ್ರದುರ್ಗ ಶ್ರೀಗಳು 12ನೇ ಶತಮಾನದಲ್ಲಿ ನಡೆದ ಬಸವಣ್ಣನವರ ತತ್ವಾದರ್ಶಗಳನ್ನು ಕಲ್ಯಾಣದಲ್ಲಿ ನಡೆದ ಚರ್ಚೆಗಳನ್ನು ಪ್ರತಿಯೊಬ್ಬರಿಗೆ ಮಾದರಿಯಾಗಿದೆ ಎಂದು ತಿಳಿಸಿದರು.
Related Articles
Advertisement
ಮುರುಘಾ ಮಠದ ಮೋಕ್ಷಪತಿ ಸ್ವಾಮೀಜಿ ಮಾತನಾಡಿ, ಸ್ವಾಭಿಮಾನದ ಬದುಕು ನಡೆಸಲು ಬೇರೆಯವರನ್ನು ಆಶ್ರಯಿಸದೇ ತಮ್ಮ ಬದುಕನ್ನು ತಾವೇ ಮುನ್ನಡೆಸಲು ಕಲಿಯಬೇಕು. ಮಡಿವಾಳ ಮಾಚಿದೇವರು ಸ್ವತ್ಛತೆಯ ಜೊತೆ ಅವರಲ್ಲಿರುವ ಅಂಧಕಾರ ಹೋಗಲಾಡಿಸುವ ಮಹಾನ್ ವ್ಯಕ್ತಿಯಾಗಿದ್ದರು ಎಂದರು. ಮೈಮುಲ್ ನಿರ್ದೇಶಕ ಪಿ.ಎಂ.ಪ್ರಸನ್ನ ಉಪನ್ಯಾಸಕ ಬಿ.ಎಂ.ಶಿವಸ್ವಾಮಿ, ವರ್ತಕರ ಸಂಘದ ಅಧ್ಯಕ್ಷ ಮಣಿ, ಮುಖಂಡರಾದ ಆರ್. ಮಹೇಶ್, ರಮೇಶ್ ನಾಯಕ್ ಮಾತನಾಡಿದರು.
ಸಮಾರಂಭಕ್ಕೂ ಮೊದಲು ವೀರಮಡಿವಾಳ ಮಾಚಿದೇವರ ಮತ್ತು ಮೋಕ್ಷಪತಿ ಸ್ವಾಮೀಜಿಯವರನ್ನು ವಿಶೇಷ ಅಲಕಾಂರದಿಂದ ಕಂಗೊಳಿಸುತ್ತಿದ್ದ ಬೆಳ್ಳಿ ರಥದಲ್ಲಿ ಪೂರ್ಣ ಕುಂಭದೊಂದಿಗೆ ಹಾಗೂ ವಿವಿಧ ರಾವಂದೂರು ಮತ್ತು ಎಸ್. ಕೊಪ್ಪಲು ಗ್ರಾಮಗಳ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಗ್ರಾಪಂ ಸದಸ್ಯೆ ಹೇಮಾವತಿ, ಆರ್.ವಿ.ನಂದಿಶ್, ಉಪ ತಹಶೀಲ್ದಾರ್ ಕೇಚಪ್ಪ, ಆರ್.ಡಿ. ದಶರಥ, ನಂಜಶೆಟ್ಟಿ, ಪದ್ಮನಾಭ, ಮಹದೇವ, ಆರ್.ಜೆ. ಸುರೇಶ್, ಬಸವಣ್ಣ, ಮಂಜುನಾಥ, ಆರ್.ಎಸ್. ಪ್ರಕಾಶ್, ಇಂಡೇನ್ ಗ್ಯಾಸ್ ವಿತರಕ ಆರ್.ಎಸ್.ವಿಜಯ ಕುಮಾರ್, ಉಪನ್ಯಾಸಕ ಲಕ್ಷ್ಮೀಕಾಂತ್ ಹಾಗೂ ಜನಾಂಗದ ಮುಖಂಡರು ಯುವಕರು, ಮಹಿಳೆಯರು ಹಾಜರಿದ್ದರು.