Advertisement
ದೇಶಕ್ಕೆ ಶಾಪವಾದ ಭ್ರಷ್ಟಾಚಾರದಂತಹ ಪಿಡುಗು ನಿವಾರಣೆಗಾಗಿ ಹುಟ್ಟಿಕೊಂಡಿರುವ ಸಂಸ್ಥೆಗಳು ದುರ್ಬಲವಾದರೆ ಜನಸಾಮಾನ್ಯರ ನಂಬಿಕೆಗೆ ಕುತ್ತು ಹಾಗೂ ಇಡೀ ವ್ಯವಸ್ಥೆ ಬಗ್ಗೆ ಜನರಿಗೆ ವಿಶ್ವಾಸ ಇರುವುದಿಲ್ಲ. ಇದು ಯಾವುದೇ ಸರಕಾರಕ್ಕೂ ಶೋಭೆ ತರುವಂತದ್ದಲ್ಲ.
Related Articles
Advertisement
ರಾಜ್ಯದಲ್ಲಿ ಒಂದೆಡೆ ಬಹುತೇಕ ಇಲಾಖೆಗಳಲ್ಲಿ ಅನಗತ್ಯ ಸಿಬಂದಿಯೇ ದೊಡ್ಡ ಹೊರೆಯಾಗಿದೆ. ಇದರ ನಡುವೆ ಭ್ರಷ್ಟಾಚಾರ ನಿಗ್ರಹದಂತಹ ಎಸಿಬಿ, ಲೋಕಾಯುಕ್ತದಲ್ಲಿರುವ ಸಿಬಂದಿಗೆ ಕೆಲಸವೇ ಇಲ್ಲದಂತಾಗಿ ರುವುದು ವ್ಯವಸ್ಥೆಯ ದೌರ್ಬಲ್ಯ. ಇದಕ್ಕೆ ಯಾರು ಹೊಣೆ, ಇದನ್ನು ಗಮನಿಸಬೇಕಾದವರು ಯಾರು ಎಂಬ ಪ್ರಶ್ನೆ ಮೂಡುತ್ತದೆ.
ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ಲೋಕಾಯುಕ್ತಕೆೆR ಪರ್ಯಾಯವೆಂದು ಅಸ್ತಿತ್ವಕ್ಕೆ ಬಂದಿರುವ ಭ್ರಷ್ಟಾಚಾರ ನಿಗ್ರಹ ದಳ ದಾಳಿಗಷ್ಟೇ ಸೀಮಿತವಾಗಿದ್ದು, ಸಣ್ಣ-ಪುಟ್ಟ ಟ್ರ್ಯಾಪ್ ಕೇಸ್‌ಗಳಲ್ಲಿ ಮಾತ್ರ ಚಾರ್ಜ್‌ಶೀಟ್ ಸಲ್ಲಿಸಿ, ಕೋಟ್ಯಂತರ ರೂ. ಅಕ್ರಮ ಆಸ್ತಿ ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸದಿರುವುದು ಅಂಕಿ-ಅಂಶಗಳಿಂದ ಸಾಬೀತಾಗಿದೆ.
ಎಸಿಬಿಯಲ್ಲಿ 2,211 ಪ್ರಕರಣಗಳ ಪೈಕಿ 99 ಪ್ರಕರಣಗಳಲ್ಲಿ ಸಾಕ್ಷ್ಯಗಳಿಲ್ಲದೆ ಕೋರ್ಟ್‌ಗೆ “ಬಿ’ ವರದಿ ಸಲ್ಲಿಸಲಾಗಿದ್ದು 70 ಪ್ರಕರಣಗಳ ವಿಚಾರಣೆ ನ್ಯಾಯಾಲಯದಲ್ಲಿ ಮುಕ್ತಾಯಗೊಂಡಿದ್ದು ಶೇ.3ರಷ್ಟು ಪ್ರಮಾಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದೆ. ಇದರಲ್ಲೂ 9 ಮಂದಿ ಆರೋಪಗಳಿಂದ ಮುಕ್ತಿ ಹೊಂದಿದ್ದಾರೆ. ಸೂಕ್ತ ತನಿಖೆ ನಡೆಸದೇ 39 ಪ್ರಕರಣ ನ್ಯಾಯಾಲಯದಲ್ಲಿ ಖುಲಾಸೆಗೊಂಡಿದೆ ಎಂಬ ಅಂಶ ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹಕ್ಕೆ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಕ್ರಮ ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಂತಿದೆ.