Advertisement

ಜೀವನ ನಿಂತ ನೀರಂತಾಗದಿರಲಿ

08:00 PM Dec 29, 2019 | mahesh |

ನೀರು ಹರಿಯುತ್ತಿರಬೇಕು. ಅದು ಕೊಳಚೆಯಾದರೂ ಸರಿ ಪವಿತ್ರ ಜಾಗವಾದರೂ ಸರಿ. ಇಲ್ಲದಿದ್ದರೆ ನೀರಿನಲ್ಲಿ ಹುಳುವಾಗಲು ಆರಂಭವಾಗುತ್ತದೆ. ಜೀವನವೂ ಹಾಗೆಯೆ ನಿಂತ ನೀರಂತಾದರೆ ಅಲ್ಲಿ ಕೆಟ್ಟ ಯೋಚನೆಗಳಿಗೆ ಅವಕಾಶ ದೊರೆತಂತಾಗುತ್ತದೆ.

Advertisement

ಹೊಸ ಅನುಭವಗಳಿಗೆ ತೆರೆದುಕೊಳ್ಳಿ
ಮನುಷ್ಯ ಹೊಸ ಹೊಸ ಅನುಭವಗಳಿಗೆ ತನ್ನನ್ನು ತಾನು ತೆರೆದುಕೊಳ್ಳಬೇಕು. ಹೊಸ ಅನುಭವಗಳೂ ಬದುಕಿಗೆ ಸ್ಪೂರ್ತಿ ನೀಡುತ್ತದೆ. ಹೊಸ ಪ್ರಯತ್ನಗಳು ನಡೆಯುತ್ತಲೇ ಇರಬೇಕು. ಪ್ರಯತ್ನದಲ್ಲಿ ಗೆಲುವು‘ಸಿಗುವುದಿಲ್ಲ ಎನ್ನುವ ಭಯಕ್ಕೆ ಪ್ರಯತ್ನವನ್ನೇ ಮಾಡದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಜೀವನದಲ್ಲಿ ಯಾವುದೇ ಅನುಭವ ಸಿಗಲೂ ಸಾಧ್ಯವಿಲ್ಲ.

ನಾವು ನಿನ್ನೆಯಷ್ಟೇ ಇವತ್ತು ಯೋಚನೆ ಮಾಡುವ ಶಕ್ತಿ ಹೊಂದಿದ್ದೇವೆ ಎಂದರೆ ಒಂದು ದಿನ ನಾವೇನನ್ನೂ ಪ್ರಯತ್ನಿಸಲೇ ಇಲ್ಲ ಎಂದರ್ಥ. ನಾವಿಡುವ ಹೆಜ್ಜೆ ಸುಲಭವಾಗಿಲ್ಲ ಎಂದು ಗೊತ್ತಿದ್ದರೂ ಅದಕ್ಕಾಗಿ ಮಾಡುವ ಪ್ರಯತ್ನ ಮಾಡಿದರೆ ನಮ್ಮ ಅನುಭವ ಹೆಚ್ಚಾಗುತ್ತದೆ. ಈ ಅನುಭವಗಳೇ ಮುಂದೊಂದು ದಿನ ಗೆಲುವಿಗೆ ಕಾರಣವಾಗುತ್ತದೆ. ಬದಲಾಗಿ ನಾವು ಪ್ರಯತ್ನವೆ ಮಾಡದಿದ್ದರೆ ಜೀವನ ನಿಂತ ನೀರಂತಾಗುತ್ತದೆ.

ಪ್ರತಿದಿನ ಕಲಿಯುವ ತುಡಿತವಿರಲಿ
ಪ್ರತಿದಿನ ಹೊಸತೊಂದನ್ನು ಕಲಿಯುವ ತುಡಿತ ನಮ್ಮಲ್ಲಿರಲಿ. ಇದರಿಂದ ಜೀವನದಲ್ಲಿ ಏನಾದರೂ ಸಾಧನೆ ಸಾಧ್ಯ. ಜೀವನದಲ್ಲಿ ಕಲಿಕೆಗೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಎಲ್ಲ ವಯಸ್ಸಿನಲ್ಲೂ ಜೀವನದಲ್ಲಿ ಕಲಿಯಲು ಅವಕಾಶವಿರುತ್ತದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕಷ್ಟೇ.

ಪ್ರಯತ್ನಗಳು ನಿರಂತರವಾಗಿರಲಿ
ಮೊದಲ ಪ್ರಯತ್ನದಲ್ಲೆ ಗೆಲ್ಲಬೇಕು ಎನ್ನುವುದು ಇತ್ತೀಚಿನ ಯುವಜನಾಂಗದ ಮನೋಸ್ಥಿತಿ. ಆದರೆ ಮೊದಲ ಪ್ರಯತ್ನದಲ್ಲೇ ಗೆದ್ದರೆ ಅದು ನಿಜವಾದ ಗೆಲುವಲ್ಲ. ಗೆಲುವಿನ ಹಾದಿಯಲ್ಲಿ ಪ್ರಯತ್ನಗಳು ನಿರಂತರವಾಗಿರಬೇಕು. ಸೋತರೂ ಮತ್ತೆ ಗೆಲ್ಲಬೇಕೆನ್ನುವ ಹಠವಿದ್ದರೆ ಮಾತ್ರ ಗೆಲವು ದೊರೆಯಲು ಸಾಧ್ಯ. ಜೀವನದಲ್ಲಿ ಕಲಿಕೆಯಿಲ್ಲದಿದ್ದರೆ, ಹೊಸ ಹೊಸ ಪ್ರಯತ್ನಗಳಿಲ್ಲದೆ ಇದ್ದರೆ ಜೀವನ ನಿಂತ ನೀರಂತಾಗುತ್ತದೆ. ಕಲಿಕೆಯಿಲ್ಲದೆ ಬದುಕು ವ್ಯರ್ಥವಾಗುತ್ತದೆ.

Advertisement

ಉತ್ಸಾಹದ ಬತ್ತದಿರಲಿ
ಜೀವನದಲ್ಲಿ ಉತ್ಸಾಹವಿದ್ದರೆ ಏನನ್ನಾದರೂ ಮಾಡಲು ಸಾಧ್ಯ. ವಯಸ್ಸು ಅಥವಾ ಬೇರೇನೋ ಮಿತಿಯು ಉತ್ಸಾಹವನ್ನು ತಡೆಹಿಡಿಯಲು ಸಾಧ್ಯವಿಲ್ಲ. ಉತ್ಸಾಹವೊಂದಿದ್ದರೆ ಜೀವನದಲ್ಲಿ ಏನನ್ನೂ ಮಾಡಲು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next