Advertisement

ವಕೀಲರು ಸಮಾಜ ಸೇವೆಗೂ ಮುಂದಾಗಲಿ

01:36 PM Sep 24, 2019 | Team Udayavani |

ಚಿಕ್ಕಮಗಳೂರು: ವಕೀಲರು ತಮ್ಮ ವೃತ್ತಿ ಜೀವನದ ನಡುವೆಯೂ ಸಮಾಜ ಸೇವೆಗೆ ಸಮಯನೀಡಬೇಕೆಂದು ಹಿರಿಯ ವಕೀಲ ಟಿ.ಎಂ. ಕೃಷ್ಣಮೂರ್ತಿ ಕರೆ ನೀಡಿದರು.

Advertisement

ನಗರದ ಮಧುವನ ಬಡಾವಣೆಯ ಸಮರ್ಪಣಾ ಸಭಾಂಗಣದಲ್ಲಿ ನಡೆದ ಅಖೀಲ ಭಾರತೀಯ ಅಧಿವಕ್ತಾ ಪರಿಷತ್‌ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ಯಾವುದೇ ಪ್ರತಿಫಲಾಪೇಕ್ಷೆ ನಿರೀಕ್ಷಿಸದೆ ರಾಷ್ಟ್ರ ಸೇವೆಗೆ ಮುಂದಾಗಬೇಕು. ಭ್ರಷ್ಟಾಚಾರವನ್ನು ತೊಲಗಿಸುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಹಿಂದೆ ರಾಷ್ಟ್ರೀಯ ಸ್ವಯಂಸೇವಕರು ಆಜನ್ಮ ಭ್ರಹ್ಮಚಾರಿಗಳಾಗಿದ್ದರು. ಅವರ ಜೀವನವನ್ನು ರಾಷ್ಟ್ರ ಸೇವೆಗೆ ಮಾತ್ರ ಮುಡಿಪಾಗಿಟ್ಟಿದ್ದರು ಎಂದು ತಿಳಿಸಿದರು.

ಹಿಂದೆ ಹಲವು ಸಂಘಟನೆಗಳು ದೇಶಸೇವೆಗೆಂದು ಹುಟ್ಟಿಕೊಂಡರು ಯಾವುದೂ ಶಾಶ್ವತವಾಗಿ ಉಳಿಯಲಿಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸೇರಿದಂತೆ ಬೆರಳೆಣಿಕೆಯಷ್ಟು ಸಂಘಟನೆಗಳು ಮಾತ್ರ ಉಳಿದಕೊಂಡಿವೆ ಎಂದರು. ಯುವ ವಕೀಲರು ಅಧಿವಕ್ತಾ ಸಂಘಟನೆಗೆ ಸೇರಿ ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ನಡೆಸಬೇಕು. ನಮ್ಮ ಜಿಲ್ಲೆಯಲ್ಲೂ ಸಂಘಟನೆ ಆರಂಭವಾಗಿರುವುದು ಒಳ್ಳೆಯ ಬೆಳವಣಿಗೆ. ಯಾವುದೇ ಹಿಂಜರಿಕೆ ಇಲ್ಲದೇ ಸಮಾಜದ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧಿವಕ್ತಾ ದಕ್ಷಿಣ ಭಾರತೀಯ ಪ್ರಾಂತ ಕಾರ್ಯದರ್ಶಿ ಎಲ್‌.ಎನ್‌.ಹೆಗ್ಡೆ ಮಾತನಾಡಿ, 1997 ರಲ್ಲಿ ಅಧಿವಕ್ತಾ ಸಂಘಟನೆ ಆರಂಭಗೊಂಡಿದೆ. ಇದರಲ್ಲಿ ಹಲವು ವಕೀಲರು ಸ್ವಯಂ ಸೇವಕರಾಗಿ ಸಮಾಜಘಾತುಕ ಶಕ್ತಿಗಳ ವಿರುದ್ಧ ಎದ್ದು ನಿಂತು ಸ್ವಯಂ ಪ್ರೇರಿತರಾಗಿ ಹೋರಾಟ ಮಾಡಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಕಿಕೊಟ್ಟ ಮಾರ್ಗದಲ್ಲಿ ನಡೆದರೆ ಭಾರತದ ಭವಿಷ್ಯ ಇನ್ನಷ್ಟು ಉಜ್ವಲವಾಗುತ್ತದೆ ಎಂದರು. ದೇಶದಲ್ಲಿ ತುರ್ತು ಪರಿಸ್ಥಿತಿ ಎದುರಾದಾಗ ವಕೀಲರ ಪಾತ್ರ ಮಹತ್ವದ್ದಾಗಿತ್ತು. ಆಗ ಅಭಿವ್ಯಕ್ತಿ ಸ್ವಾತಂತ್ರ್ಯ  ಕ್ಕೆ ನಿಷೇಧ ಹೇರಲಾಗಿತ್ತು. ಅದರ ವಿರುದ್ಧ

ಹಲವು ಸಂಘಟನೆಗಳು ಹುಟ್ಟಿಕೊಂಡವು. ಕೆಲವೇ ದಿನಗಳಲ್ಲಿ ಅವು ಮಾಸಿ ಹೋದವು. ಆದರೆ, ಆರ್‌ ಎಸ್‌ಎಸ್‌ ಮಾತ್ರ ಮಹತ್ತರ ಹೆಜ್ಜೆಗಳನ್ನು ಇಟ್ಟು ದೇಶದ ಏಕತೆ ಹಾಗೂ ಬಲಿಷ್ಠತೆಗೆ ಶ್ರಮಿಸಿದೆ ಎಂದರು.

Advertisement

ಅಧಿವಕ್ತಾ ಸಮಾವೇಶಗಳು ದೇಶದ ಹಲವು ಕಡೆಗಳಲ್ಲಿ ನಡೆದು ಅದರಿಂದ ಹಲವರು ಪ್ರೇರಣಗೊಳ್ಳುವಂತಾಯಿತು. ಹೋರಾಟ ಮಾತ್ರವೇ ಸಮಾಜ ಸೇವೆಯಲ್ಲ. ಸಣ್ಣ ಪುಟ್ಟ ಸಮಸ್ಯೆಗಳು ಬಂದಾಗ ಅದನ್ನು ಪರಿಹರಿಸುವುದು ಸಹ ಸಮಾಜ ಸೇವೆಯಾಗುತ್ತದೆ ಎಂದರು.

ಜಮ್ಮು, ಕಾಶ್ಮೀರದ ಆರ್ಟಿಕಲ್‌ 370 ವಿರುದ್ಧ ಹಿಂದಿನಿಂದಲೂ ಹೋರಾಟ ನಡೆದುಕೊಂಡೇ ಬಂದಿತ್ತು. ಈಗ ಅದು ರದ್ದಾಗಿರುವುದು ಶ್ಲಾಘನೀಯ. ಯುವ ವಕೀಲರು ಅಧಿವಕ್ತಾ ಸಂಘಟನೆಯಲ್ಲಿ ಸೇರಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಸಮಾರಂಭದಲ್ಲಿ ಅಧಿವಕ್ತಾದ ರಾಜ್ಯ ಉಪಾಧ್ಯಕ್ಷ ಪ್ರಕಾಶ್‌ ರಾವ್‌, ರಾಜ್ಯ ಕಾರ್ಯದರ್ಶಿ ಅನಂತಮೂರ್ತಿ, ತಾಲೂಕು ಅಧ್ಯಕ್ಷ ಭರತ್‌, ಸಿದ್ಧಪ್ಪ, ಹೇಮಂತ್‌ ಹಾಗೂ ರಘು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next