ಸುರಪುರ: ಸರಕಾರ ಭೂ ಮಾಪನ ಇಲಾಖೆಯನ್ನು ಡಿಜಿಟಲ್‌ಗೊಳಿಸಲು ಮುಂದಾಗಿದೆ. ಕಾರಣ ಭೂ ಮಾಪಕರು
ಡಿಜಟಲ್ ಸಮೀಕ್ಷೆಗೆ ಮುಂದಾಗಬೇಕು ಎಂದು ಭೂ ಮಾಪನ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕ ಸುಧಾಕರ ಕಟ್ಟಿಮನಿ ಹೇಳಿದರು.
ಇಲ್ಲಿಯ ತಾಪಂ ಕಚೇರಿ ಸಭಾಂಗಣದಲ್ಲಿ ಬುಧವಾರ ಶಹಾಪುರ, ಸುರಪುರ ಭೂ ಮಾಪಕರಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿ, ಸಾರ್ವಜನಿಕರಿಗೆ ತೊಂದರೆ ಉಂಟಾಗದಿರಲಿ ಎಂಬ ಕಾರಣದಿಂದ ಸರಕಾರ ಈ ಡಿಜಿಟಲ್ ವ್ಯವಸ್ಥೆ ಜಾರಿಗೆ ತರುತ್ತಿದೆ. ಕಾರಣ ಭೂ ಮಾಪಕರು ಡಿಜಿಟಲ್ ವ್ಯವಸ್ಥೆಗೆ ಹೊಂದಾಣಿಕೆ ಮಾಡಿಕೊಳ್ಳೂವುದು ಅಗತ್ಯವಾಗಿದೆ ಎಂದು ಸಲಹೆ ನೀಡಿದರು.
ಪ್ರತಿಯೊಬ್ಬ ಭೂ ಮಾಪಕರು ತಮ್ಮ ತಮ್ಮ ಮೊಬೈಲ್‌ಗೆ ಇಲಾಖೆಯ ನೂತನ ಯ್ನಾಪ್ ಬಳಸಿಕೊಳ್ಳಬೇಕು. ಈಗಾಗಲೆ ಎಲ್ಲಾ ಜಮೀನುಗಳ ಸರ್ವೇ ನಂಬರ್‌ಗಳನ್ನು ಜೋಡಣೆ ಮಾಡಲಾಗಿದೆ. ಅಂತರ್ಜಾಲದ ಮೂಲಕ ಭೂಮಿಗೆ ಕ್ಲಿಕ್ ಮಾಡಿ ನಿಮಗೆ ಬೇಕಾದ ಟಿಪ್ಪಣ್ಣಿ, ಆಕಾರ ಬಂದ್, ನಕಾಶ ಇತರೆ ವೈಗೈರೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.
ಸಮೀಕ್ಷೆ ಕಾರ್ಯಕ್ಕೆ ತೊಡಗಿದಾಗ ಟಿಪ್ಪಣಿ ಇಲ್ಲಾ ಎಂಬ ಕಾರಣಕ್ಕೆ ಸಮೀಕ್ಷೆ ಕಾರ್ಯ ಕೈ ಬಿಡುವಂತಿಲ್ಲ. ನಮ್ಮ ಮೊಬೈಲ್ ಯ್ನಾಪ್ ಬಳಸಿ ಟಿಪ್ಪಣಿ ಡೌನಲೋಡ್ ಮಾಡಿಕೊಂಡು ಸಮೀಕೆ ಕಾರ್ಯ ಪೂರ್ಣಗೊಳಿಸಬೇಕು. ವಿನಹಃ ಕಾರಣ ಅರ್ಜಿದಾರರಿಗೆ ಯಾವುದೇ ಕಾರಣಕ್ಕೆ ತೊಂದರೆ ಕೊಡುವಂತ್ತಿಲ್ಲ. ಯ್ನಾಪ್ ಬಳಸಿ ಕೆಲಸ ಪೂರ್ಣಗೊಳಿಸಿ ಇಲಾಖೆ ವೆಬ್‌ಸೈಟ್‌ಗೆ ಅಪಲೋಡ್ ಮಾಡಬೇಕು ಎಂದು ತಾಕೀತು ಮಾಡಿದರು.
ಎಲ್ಲಾ ಭೂ ಮಾಪಕರು ಯಾವುದೇ ನೆಪ ಹೇಳುವಂತ್ತಿಲ್ಲ. ಕಡ್ಡಾಯವಾಗಿ ಯ್ನಾಪ್ ಬಳಕೆ ಮಾಡಿಕೊಳ್ಳಬೇಕು. ಡಿಜಿಟಲ್ ಸಮೀಕ್ಷಗೆ ಮುಂದಾಗಬೇಕು ಎಂದು ಹೇಳಿದರು. ಶಹಾಪುರ, ಸುರಪುರ ಸುಮಾರು 50ಕ್ಕೂ ಹೆಚ್ಚು ಭೂ ಮಾಪಕರು ಶಿಬಿರದಲ್ಲಿ ಭಾಗವಹಿಸಿದ್ದರು.
ಶಹಾಪುರ ಸಹಾಯಕ ನಿರ್ದೇಶಕ ಎಂ.ಜಿ. ಹಿರೇಮಠ, ವ್ಯವಾಪಕ ವೆಂಕಟೇಶ, ಐ.ಐ. ಮಕನದಾರ ಇದ್ದರು. ಸಂಪನ್ಮೂಲ ವ್ಯಕ್ತಿ ಜಿಲ್ಲಾ ಸಹಾಯಕ ಸಲಹೆಗಾರ ಮಹಾಂತೇಶ ತರಬೇತಿ ನೀಡಿದರು.