Advertisement
ಕನ್ನಡದಲ್ಲಿ ಕೋಡಿಂಗ್: ಕನ್ನಡ ಇನ್ನೂ ಪ್ರೋಗ್ರಾಮಿಂಗ್ ಭಾಷೆಗೆ ಹೊಂದಿಕೊಂಡಿಲ್ಲ ಎಂದು ಹೇಳಲು ಸಾಧ್ಯವೇ ಇಲ್ಲ. 1980ರ ದಶಕದಲ್ಲೇ ಕನ್ನಡವನ್ನು ಪ್ರೋಗ್ರಾಮಿಂಗ್ ಭಾಷೆಯಲ್ಲಿ ಬಳಕೆ ಮಾಡಲು ಪ್ರಯತ್ನ ನಡೆದಿತ್ತು. ಇದಕ್ಕೆ ಡಿ.ಎ.ಪಾಟೀಲ್ ಎಂಬವರು ಪ್ರಯತ್ನಿಸಿದ್ದರು ಎಂದು ಕಂಪ್ಯೂಟರ್ ತಜ್ಞ, ಲೇಖಕ ಟಿ.ಜಿ. ಶ್ರೀನಿಧಿ ಹೇಳುತ್ತಾರೆ. ಆದರೂ ಕನ್ನಡದಲ್ಲಿ ಕೋಡಿಂಗ್ ಜತೆ ಜತೆಗೆ ತಂತ್ರಜ್ಞಾನದಲ್ಲಿ ಕನ್ನಡವನ್ನು ಬೇರೆ ರೀತಿಯಲ್ಲಿ ಬಳಕೆ ಮಾಡಬಹುದು ಎಂಬುದು ಅವರ ಅಭಿಪ್ರಾಯ.
Related Articles
Advertisement
ಸ್ಮಾರ್ಟ್‌ಫೋನ್‌ಗಾಗಿ ಫಾಂಟ್ ಬೇಕು: ಡೆಸ್ಕ್ಟಾಪ್ ಮತ್ತು ಸ್ಮಾರ್ಟ್‌ಫೋನ್‌ನಲ್ಲಿ ಕೆಲವೇ ಕೆಲವು ಫಾಂಟ್‌ಗಳಿವೆ. ಡೆಸ್ಕ್ಟಾಪ್‌ನಲ್ಲಿ ನುಡಿ ಮತ್ತು ಯೂನಿಕೋಡ್ ಸೇರಿ ಕೆಲವೊಂದು ಫಾಂಟ್‌ಗಳು ಮಾತ್ರ ಉಚಿತವಾಗಿ ಸಿಗುತ್ತಿವೆ. ಉಳಿದಂತೆ ಬರಹ, ಶ್ರೀಲಿಪಿ ಫಾಂಟ್‌ಗಳಿಗೆ ಹಣನೀಡಿ ಖರೀದಿಸಬೇಕು. ಸ್ಮಾರ್ಟ್‌ಫೋನ್‌ಗೆ ಹೊಂದಿಕೊಳ್ಳುವಂಥ ಫಾಂಟ್‌ಗಳ ಅನ್ವೇಷಣೆಯಾಗಬೇಕು.
ಕನ್ನಡದ ಕಿಂಡಲ್ ಮತ್ತು ಇ-ಬುಕ್: ಅಮೆರಿಕದ ಅಮೆಜಾನ್‌ನ ಕಿಂಡಲ್‌ನ ಇ-ಬುಕ್‌ನಲ್ಲಿ ಕನ್ನಡಕ್ಕೆ ಸ್ಥಾನ ಸಿಕ್ಕಿಲ್ಲ. ಇದುವರೆಗೆ ಏಕೆ ಎಂಬ ಪ್ರಶ್ನೆಗೆ ಉತ್ತರವೂ ಸಿಕ್ಕಿಲ್ಲ. ಇತ್ತೀಚೆಗೆ ಅಮೆಜಾನ್‌ನ ಕಿಂಡಲ್ ಅನ್ನೇ ಏಕೆ ಅವಲಂಬಿಸಬೇಕು ಎಂಬ ಉದ್ದೇಶದಿಂದ ಕನ್ನಡಿಗರೇ ಮೈಲಾಂಗ್, ಋತುಮಾನ, ಆಲಿಸಿರಿ ಸೇರಿದಂತೆ ಹಲವಾರು ಇ-ಬುಕ್‌ಗಳ ವೇದಿಕೆ ಶುರು ಮಾಡಿದ್ದಾರೆ. ಇದಕ್ಕೆ ನಿರೀಕ್ಷೆಗಿಂತಲೂ ಹೆಚ್ಚಿನ ಸ್ಪಂದನೆ ಸಿಕ್ಕಿದೆ. ಸದ್ಯ ಈ ವೇದಿಕೆಗಳಲ್ಲಿ ಕುವೆಂಪು, ಶಿವರಾಮ ಕಾರಂತರು, ಪೂರ್ಣಚಂದ್ರ ತೇಜಸ್ವಿ, ಜಯಂತ್ ಕಾಯ್ಕಿಣಿ, ಜೋಗಿ ಸೇರಿದಂತೆ ಹೊಸ ಮತ್ತು ಹಳೇ ತಲೆಮಾರಿನ ಸಾಹಿತಿಗಳ ಪುಸ್ತಕಗಳು ಸಿಗುತ್ತಿವೆ. ಇಲ್ಲೂ ಒಂದು ಸಮಸ್ಯೆ ಇದೆ. ಕನ್ನಡದಲ್ಲಿ ಬರೆಯುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಇ-ಬುಕ್‌ನೊಳಗೆ ಬರುವ ಲೇಖಕರ ಸಂಖ್ಯೆ ಕಡಿಮೆ ಇದೆ. ಇದಕ್ಕೆ ಎಲ್ಲಿ ಪುಸ್ತಕಗಳನ್ನು ಡೌನ್‌ಲೋಡ್ ಮಾಡಿ ಹಂಚಿ ಬಿಡುತ್ತಾರೆಯೋ ಎಂಬ ಆತಂಕ. ಈ ಆತಂಕ ಹೋಗಬೇಕು ಎಂಬುದು ಇ-ಬುಕ್ ವೇದಿಕೆಗಳ ರೂಪಿಸಿರುವವರ ಅಭಿಪ್ರಾಯ.
ಹೊಸ ಅನ್ವೇಷಣೆಗಳು ಏಕಿಲ್ಲ?ಕೋಡಿಂಗ್ ಅಷ್ಟೇ ಅಲ್ಲ, ತಂತ್ರಜ್ಞಾನದಲ್ಲಿ ಕನ್ನಡ ವಿಷಯದಲ್ಲಿ ಇಂದಿಗೂ ಸರಕಾರಗಳ ನಿಲುವು ಅಷ್ಟಕ್ಕಷ್ಟೇ ಎಂಬಂತೆಯೇ ಇದೆ. ವಿಸ್ತೀರ್ಣದಲ್ಲಿ ಕರ್ನಾಟಕಕ್ಕಿಂತ ಸಣ್ಣದಾಗಿರುವ ನಾರ್ವೆ, ಸಿಂಗಾಪೂರದಂಥ ಅದೆಷ್ಟೋ ದೇಶಗಳಲ್ಲಿ ಅವರದ್ದೇ ಭಾಷೆಯಲ್ಲೇ ಕಂಪ್ಯೂಟರ್ ಪ್ರೋಗ್ರಾಮಿಂಗ್ ಮಾಡಲಾಗುತ್ತಿದೆ. ಆದರೆ ಕನ್ನಡದಲ್ಲಿ ಮಾತ್ರ ಇನ್ನೂ ಸಾಧ್ಯವಾಗುತ್ತಿಲ್ಲ. ಇದಕ್ಕೆ ಸರಕಾರಗಳ ಇಚ್ಛಾಶಕ್ತಿಯ ಕೊರತೆ ಇರುವುದೂ ಕಾರಣ ಎಂದು ಹೇಳುತ್ತಾರೆ ಪವನಜ ಅವರು. (ಮರು ಪ್ರಕಟಿತ ಲೇಖನ)