Advertisement

ಪ್ರಾಥಮಿಕ ಶಾಲೆಯಾಗಿ ಬೆಳೆದು ವಿದ್ಯಾಕ್ಷೇತ್ರ ದಲ್ಲಿ ಉತ್ತುಂಗ ಸ್ಥಾನಕ್ಕೆ ಏರಲಿ: ಅರುಣ್‌

06:24 PM Jun 12, 2023 | Team Udayavani |

ಮುಂಬಯಿ: ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇದರ ಮೀರಾರೋಡ್‌ -ಭಾಯಂದರ್‌ ಶಾಖೆಯ ನೂತನ ಯೋಜನೆಯು ಮಂಡಳಿಯ ಚರಿತ್ರೆಯಲ್ಲಿ ಹೊಸ ಮೈಲುಗಲ್ಲಾಗಿದೆ. ಇಂದಿನ ಈ ಪ್ಲೆ ಗ್ರೂಪ್‌ ಹಾಗೂ ನರ್ಸರಿ ಕ್ಲಾಸ್‌ಗಳು ಮುಂದಕ್ಕೆ ಪ್ರಾಥಮಿಕ ಶಾಲೆಯಾಗಿ ಬೆಳೆದು ವಿದ್ಯಾಕ್ಷೇತ್ರದಲ್ಲಿ ಉತ್ತುಂಗ ಸ್ಥಾನಕ್ಕೇರಲಿ. ಇದಕ್ಕಾಗಿ ಶಾಖೆಯ ಎಲ್ಲ ಸದಸ್ಯರು ಮತ್ತು ಮೂರು ವಿಭಾಗಗಳೂ ಒಟ್ಟಾಗಿ ಮಂಡಳಿಗೆ ಸಹಕಾರ ನೀಡಬೇಕೆಂದು ಮಂಡಳಿಯ ಗೌರವಾಧ್ಯಕ್ಷ ಎಚ್‌. ಅರುಣ್‌ ಕುಮಾರ್‌ ಅವರು ಹೇಳಿದರು.

Advertisement

ಜೂ. 4ರಂದು ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇದರ ಮೀರಾ ರೋಡ್‌ -ಭಾಯಂದರ್‌ ಶಾಖೆಯ ವತಿಯಿಂದ ಗೋಲ್ಡನ್‌ ನೆಷ್ಟ್ನ ಸೆಕ್ಟರ್‌ 3ರ ಕಟ್ಟಡ ಸಂಖ್ಯೆ-16ರಲ್ಲಿ ಎಂವಿಎಂ ಅಂಕುರ್‌ ಪ್ಲೆ ಗ್ರೂಪ್‌ ಮತ್ತು ನರ್ಸರಿ ಶಾಲೆಯನ್ನು ಉದ್ಘಾ
ಟಿಸಿ ಅವರು ಮಾತನಾಡಿದರು.

ಈ ವೇಳೆ ಮಂಡಳಿಯ ಗೌರವ ಪ್ರಧಾನ ಕಾರ್ಯದರ್ಶಿ ದಿಲೀಪ್‌ ಮುಲ್ಕಿ, ಟ್ರಸ್ಟಿ ದೇವರಾಜ್‌ ಬಂಗೇರ್‌, ಗೌರವ ಕೋಶಾಧಿಕಾರಿ ಪ್ರತಾಪ್‌ ಕುಮಾರ್‌ ಕರ್ಕೇರ, ಶಾಖೆಯ ಕಾರ್ಯಾಧ್ಯಕ್ಷ ಧನಂಜಯ ಸಾಲ್ಯಾನ್‌, ಉಪಾಧ್ಯಕ್ಷ ಹರೀಶ್‌ ಕೋಟ್ಯಾನ್‌, ಗೌರವ
ಕಾರ್ಯದರ್ಶಿ ಸಂದೀಪ್‌ ಕುಂದರ್‌, ಜತೆ ಕಾರ್ಯದರ್ಶಿ ತಿಲಕ್‌ ಎನ್‌. ಸುವರ್ಣ, ಗೌರವ ಕೋಶಾಧಿಕಾರಿ ರವಿ ಎನ್‌. ಸುವರ್ಣ,
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಭಾವತಿ ಎಚ್‌. ಅಮೀನ್‌, ಗೌರವ ಕಾರ್ಯದರ್ಶಿ ಶೋಭಾ ರವಿರಾಜ್‌, ಯುವ ವಿಭಾಗ
ಕಾರ್ಯಾಧ್ಯಕ್ಷ ಪ್ರಮೋದ್‌ ಕುಮಾರ್‌ ಪುತ್ರನ್‌ ಮತ್ತು ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷೆ ಸುಜಾತಾ ಮೆಂಡನ್‌ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದು, ಶಾಖೆಯ ಉದ್ಘಾಟನೆಗೆ ಕೈ ಜೋಡಿಸಿದರು.

ಮಂಡಳಿಯ ಗೌರವ ಪ್ರಧಾನ ಕಾರ್ಯದರ್ಶಿ ದಿಲೀಪ್‌ ಮುಲ್ಕಿ ಮಾತನಾಡಿ, ಶಾಖೆಯು ವಿದ್ಯಾಕ್ಷೇತ್ರಕ್ಕೆ ವಿಸ್ತರಿಸುತ್ತಿರುವುದು ಶ್ಲಾಘನೀಯ. ಡೊಂಬಿವಲಿ ಶಾಖೆಯ ನರ್ಸರಿಯಲ್ಲಿಯೂ ಗುಣ ಮಟ್ಟದ ಶಿಕ್ಷಣ ನೀಡುತ್ತಾ ಬಂದಿದೆ. ಇಲ್ಲಿಯ ಜಾಗ ನಗರದ ಕೇಂದ್ರ ಭಾಗದಲ್ಲಿದೆ. ಇದರ ಪ್ರಯೋಜನೆ ಎಲ್ಲರೂ ಪಡೆಯುವಂತಾಗಲಿ ಎಂದರು.

ಟ್ರಸ್ಟಿ ದೇವರಾಜ್‌ ಬಂಗೇರ್‌ ಮಾತನಾಡಿ, ನರ್ಸರಿ ಪ್ರಾರಂಭಿಸಿದ ಶಾಖೆಗೆ ಅಭಿನಂದನೆ. ಈ ಕಾರ್ಯಕ್ಕೆ ಮಂಡಳಿಯು ಪೂರ್ಣ
ಸಹಕಾರವಿದೆ. ವಿದ್ಯಾದಾನವು ಮಂಡಳಿಯ ಮುಖ್ಯ ಧ್ಯೇಯವಾಗಿದೆ ಎಂದರು. ಶಾಖೆಯ ಕಾರ್ಯಾಧ್ಯಕ್ಷ ಧನಂಜಯ
ಸಾಲ್ಯಾನ್‌ ಮಾತನಾಡಿ, ಪ್ರಧಾನ ಸಭೆಯು ಶಾಖೆಗೆ ಒಳ್ಳೆಯ ಜಾಗವನ್ನು ಖರೀದಿಸಿ ಕೊಟ್ಟಿದೆ. ಇದಕ್ಕೆ ಆಭಾರಿಯಾಗಿದೇವೆ.
ಶಾಖೆಯ ಈ ಪ್ರಗತಿಪರ ಹೆಜ್ಜೆಗೆ ಎಲ್ಲರೂ ಸಹಕರಿಸಿ ಯಶಸ್ವಿಗೊಳಿಸಬೇಕು ಎಂದು ಹೇಳಿದರು.

Advertisement

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಭಾವತಿ ಎಚ್‌. ಅಮೀನ್‌ ಮಾತನಾಡಿ, ನಮ್ಮೆಲ್ಲರ ಕನಸಿನ ಯೋಜನೆ ಈಗ ಸಾಕಾರವಾಗುವ ಸಮಯ ಬಂದಿದೆ. ಇದಕ್ಕೆ ಎಲ್ಲ ಸದಸ್ಯರ ಶ್ರಮದ ಅವಶ್ಯಕತೆಯಿದೆ. ನಮ್ಮ ಶಾಖೆಯ ಗೌರವವನ್ನು ಎತ್ತರಕ್ಕೇರಿಸಲು ನಾವು ಹೆಚ್ಚಿನ ಸಮಯವನ್ನು ಮಂಡಳಿಗೆ ಮೀಸಲಿಡಬೇಕೆಂದು ತಿಳಿದರು.

ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷೆ ಸುಜಾತಾ ಮೆಂಡನ್‌ ಮಾತನಾಡಿ, ಪರಿಸರದ ಹೆಚ್ಚಿನ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಶಿಕ್ಷಣ
ಪಡೆಯುವಂತೆ ಎಲ್ಲರು ಸಹಕರಿಸಬೇಕು. ನಮ್ಮ ಗುಣಮಟ್ಟದ ಶಿಕ್ಷಣ ವ್ಯವಸ್ಥೆ ಜನರಿಗೆ ತಲುಪಿಸುವ ಕಾರ್ಯ ಎಲ್ಲರೂ ಮಾಡ
ಬೇಕೆಂದು ಎಂದರು.

ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 7.30ಕ್ಕೆ ಗಣಹೋಮ ನಡೆಯಿತು. ಗಣಹೋಮ ಪೂಜೆಗೆ ಯೊಗೇಶ್‌ ಸಾಲ್ಯಾನ್‌
ಮತ್ತು ವೈಶಾಲಿ ಸಾಲ್ಯಾನ್‌ ದಂಪತಿ ಸಹಕರಿ ಸಿದರು. ಬೆಳಗ್ಗೆ 9.30ಕ್ಕೆ ಗೌರವಾಧ್ಯಕ್ಷ ಎಚ್‌. ಅರುಣ್‌ ಕುಮಾರ್‌ ಅವರು ರಿಬ್ಬನ್‌ ಕತ್ತರಿಸಿ, ದೀಪ ಬೆಳಕಿಸುವ ಮೂಲಕ ಚಾಲನೆ ನೀಡಿದರು. ಅನಂತರ ನಡೆದ ಸಭಾ ಕಾರ್ಯಕ್ರಮ ದಲ್ಲಿ ಮಾಜಿ ಕಾರ್ಯದರ್ಶಿ ಗಂಗಾಧರ ಬಂಗೇರ ಅವರು ಎಲ್ಲರನ್ನು ಸ್ವಾಗತಿಸಿ, ಮಂಡಳಿಯ ಸ್ಥಾಪಕರಾದ ಕಾಡಿಪಟ್ನ ಚಂದು ಮಾಸ್ತರ್‌ರವರನ್ನು ಸ್ಮರಿಸಿ, ನಮ್ಮೆಲ್ಲರ ಕನಸಾಗಿರುವ ನರ್ಸರಿ ಶಾಲೆಯು ಅಂಕುರ ಎಂಬ ಹೆಸರಿನೊಂದಿಗೆ ಲೋಕಾರ್ಪಣೆಗೊಳ್ಳುತ್ತಿರುವುದು ನಮ್ಮೆಲ್ಲರಿಗೆ ಅವಿಸ್ಮರಣಿಯವಾಗಿದೆ ಎಂದು ಹೇಳಿದರು. ಗಂಗಾಧರ ಬಂಗೇರ ರವರು ಕಾರ್ಯಕ್ರಮ ನಿರೂಪಿಸಿದರು. ಶಾಖೆಯ ಗೌರವ ಕಾರ್ಯದರ್ಶಿ ಸಂದೀಪ್‌ ಕುಂದರ್‌ ವಂದಿಸಿದರು.

ಈ ಕಾರ್ಯಕ್ರಮಕ್ಕೆ ಪ್ರಧಾನ ಮಂಡಳಿಯ ಕಾರ್ಯಕಾರಿ ಸಮಿತಿ, ವಸಾಯಿ -ವಿರಾರ್‌ ಶಾಖೆಯ ಪದಾಧಿಕಾರಿಗಳು, ಶಾಖಾ
ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗ ಸಹಕರಿಸಿದ್ದು, ಈ ವೇಳೆ ಪರಿಸರದ ಎಲ್ಲ ತುಳು ಕನ್ನಡಿಗರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next