Advertisement

ಬದುಕು ಬಂದಂತೆ ಸ್ವೀಕರಿಸೋಣ

12:22 AM Sep 30, 2019 | Sriram |

ಹೊಟ್ಟೆ ತುಂಬಾ ಊಟ, ಕಣ್ಣು ತುಂಬ ನಿದ್ರೆ ಇದ್ದರೆ ಅವನೇ ನಿಜವಾದ ಸಿರಿವಂತನಂತೆ. ಮನೆ, ಕೆಲಸ, ಸಾಲ, ಪ್ರೀತಿ ಎನ್ನುವ ಯೋಚನೆಯನ್ನು ಮಾಡುತ್ತಲೇ ಇದ್ದವರಿಗೆ ಇವೆರಡರ ಗೋಚರವೇ ಇರಲಾರದು. ಅದೊಂದು ದಿನ ಮಲಗಿದ್ದ ನನಗೆ ಎಷ್ಟೇ ತಡಕಾಡಿದರೂ ನಿದ್ರಾ ದೇವಿ ಮಾತ್ರ ಸಮೀಪಿಸುತ್ತಿಲ್ಲ.

Advertisement

ತಲೆಯಲ್ಲಿದ್ದ ಸಾವಿರ ಯೋಚನೆಗಳು ನನ್ನನ್ನು ಇನ್ನಷ್ಟು ಹೊತ್ತು ಭ್ರಮನಿರಸನನ್ನಾಗಿ ಮಾಡಲು ಹೊರಟಂತಿತ್ತು. ತತ್‌ಕ್ಷಣವೇ ಎದ್ದು ನನ್ನ ಸ್ನೇಹಿತೆಗೊಂದು ಕರೆ ಮಾಡಿ ನಿದ್ದೆ ಬರಬೇಕಾದರೆ ಏನು ಮಾಡಬೇಕು ಎಂದು ಕೇಳಿದೆ . ಅದಕ್ಕೆ ಪ್ರತ್ಯುತ್ತರವೆಂಬಂತೆ ಚಿಂತೆ ಬಿಡು ನಿದ್ದೆ ತಾನಾಗಿಯೇ ಬರುತ್ತದೆ ಎಂಬ ಸಲಹೆ ಕೇಳಿ ಬಂತು.

ಸರಿ ಎಂದು ಈಗ ನಿದ್ದೆ ಬರಲೇ ಬೇಕು ಎಂದು ಕಣ್ಣು ಮುಚ್ಚಿದಾಗ ನನ್ನ ಸ್ನೇಹಿತನೊಬ್ಬ ಹೇಳಿದ ಪುಟ್ಟ ಕಥೆ ನೆನಪಿಗೆ ಬಂತು. ಓರ್ವ ಯುವಕನು ಹೆಬ್ಟಾವನ್ನು ಸಾಕಿದ್ದನಂತೆ ಆತ ಅದನ್ನು ತನ್ನ ಸ್ವಂತ ಮಗುವಿನಂತೆ ಪೋಷಿಸುತ್ತಿದ್ದನು. ದಿನ ಅದರ ಜತೆ ಮಲಗುವುದು, ಅದಕ್ಕೆ ಆಹಾರ ತಿನ್ನಿಸುವುದು. ಹೀಗೆ ಆ ಹಾವೇ ಆತನ ಸರ್ವಸ್ವವಾಗಿತ್ತು. ಆದರೆ ಇದ್ದಕ್ಕಿದಂತೆ ಒಮ್ಮೆ ಆ ಹಾವು ತೀರ ಅಸ್ವಸ್ಥವಾಗುತ್ತ ಹೊಗುವಂತೆ ಆತನಿಗೆ ಅನಿಸತೊಡಗಿತ್ತು. ತತ್‌ಕ್ಷಣ ವೈದ್ಯರಲ್ಲಿ ತೆರಳಿ ಅದು ನಾಲ್ಕೈದು ದಿನದಿಂದ ಏನನ್ನು ತಿನ್ನುತಿಲ್ಲ ಎಂದು ಪರಿತಪಿಸಿದನು. ಆಗ ವೈದ್ಯನು ತಪಾಸಣೆ ಮಾಡಿ “ನೀವು ಅದನ್ನು ಕಾಡಿಗೆ ಬಿಟ್ಟು ಬನ್ನಿ’ ಅಂದರು. “ಅಂದರೆ ನಾನು ಅದಕ್ಕೆ ಇಷ್ಟವಾಗಲಿಲ್ಲವೇ? ನನ್ನಿಂದ ಅದು ದೂರ ಆಗಬೇಕೆಂಬ ಬಯಕೆಯನ್ನು ಆ ಹಾವು ಹೊಂದಿದೆಯೇ?’ ಎಂದು ವೈದ್ಯರಲ್ಲಿ ಪ್ರಶ್ನಿಸಿದನು. ನೀವು ಅದರ ಮೇಲೆ ಕಾಳಜಿಯನ್ನು ಹೊಂದಿದ್ದೀರಿ ಆದರೆ ಅದು ನಿಮ್ಮನ್ನು ತಿನ್ನಲು ಹೊಂಚು ಹಾಕುತ್ತಿದೆ. ಅದಕ್ಕಾಗಿಯೇ ಉಪವಾಸವಿದ್ದು ತಕ್ಕ ಸಮಯಕ್ಕಾಗಿ ಕಾಯುತ್ತಿದೆ ಅಂದರು.

ನಮ್ಮ ಬದುಕಿನಲ್ಲಿ ಹಲವಾರು ಮಂದಿ ನಮಗೇ ಅರಿವಿಲ್ಲದಂತೆ ಬಂದು ಸಂಚಲನ ಮೂಡಿಸಿ ಹೋಗುತ್ತಾರೆ. ಇಲ್ಲಿ ಆ ವ್ಯಕ್ತಿ ಹಾವನ್ನು ಇಷ್ಟಪಟ್ಟಾ ಕ್ಷ ಣ ಅದು ತನ್ನ ಸ್ವಭಾವವನ್ನು ಬಿಟ್ಟುಕೊಡಲು ಹೇಗೆ ಸಾಧ್ಯವಾಗಲಿಲ್ಲವೋ, ಅದೇ ರೀತಿ ನಾವು ಬಯಸಿದ ವ್ಯಕ್ತಿಯನ್ನು ನಾವೆಂದು ಕೊಂಡಂತೆ ಇರಬೇಕೆಂದು ತಿರ್ಮಾನಿಸುವುದು ಸರಿಯಲ್ಲ.

ಬದುಕು ಬಂದಂತೆ ಸ್ವೀಕರಿಸೋಣ
ಜೀವನದಲ್ಲಿ ಹೀಗೆ ಇರಬೇಕೆಂದು ಬದುಕುವವರಿದ್ದಾರೆ, ಅಂದುಕೊಂಡಂತೆ ಆಗದಿದ್ದಲ್ಲಿ ನಿರಾಸೆಯ ಭಾವನೆ ತಾಳದೆ ಏನೇ ಬಂದರೂ ಸ್ವೀಕರಿಸುವ ಮನೋಸ್ಥಿತಿಯನ್ನು ನಾವು ಮುನ್ನಡೆಯಬೇಕಾಗಿದೆ. ಬೇರೆಯವರಿಗಾಗಿ ಬದುಕುವವರು ನಿಮ್ಮ ಇಷ್ಟ, ಭಾವನೆ, ಇಚ್ಛೆ, ಮನೋಲ್ಲಾಸ ಎಲ್ಲವನ್ನು ಮೂಲೆಗೆ ತಳ್ಳಿ ಬರಬೇಕಾಗುತ್ತದೆ. ಇಲ್ಲಿ ಯಾರೂ ಪರಿಪೂರ್ಣರಲ್ಲ ಅಂದ ಮೇಲೆ ಬದುಕನ್ನು ಬಂದಂತೆ ಸ್ವೀಕರಿಸುವ ಬದಲು ನಾವೇ ರಚಿಸಲು ಹೋದರೆ ಬೇಸರ, ಅವಮಾನಗಳಿಗೆ ನಾವು ಸಿದ್ಧರಾಗಿರಬೇಕಾಗುತ್ತದೆ. ಬೇರೆಯವರ ಜೀವನದ ಕುರಿತು ಚಿಂತೆ ಮಾಡಿ ನಿಮ್ಮ ಅಮೂಲ್ಯ ಸಮಯ ವ್ಯರ್ಥ ಮಾಡದೆ ಬದುಕು ಬಂದತೆ ಸ್ವೀಕರಿಸಿದರೆ ಲೈಫ್ ಇಸ್‌ ಬ್ಯೂಟಿಫ‌ುಲ್‌ ಅನ್ನೂ ಮಾತಿನಲ್ಲಿ ಅನುಮಾನವಿಲ್ಲ.

Advertisement

-  ರಾಧಿಕಾ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next