Advertisement
ಇತ್ತೀಚಿನ ದಿನಗಳಲ್ಲಿ ಸಂಸತ್ ಸೇರಿದಂತೆ ವಿಧಾನಸಭೆ ಅಧಿವೇಶನಗಳಲ್ಲಿ ಚರ್ಚೆಗಿಂತ ಹೆಚ್ಚಾಗಿ ಗದ್ದಲ, ಗಲಾಟೆ ಯೇ ಕಾಣಿಸುತ್ತಿದೆ. ಅದರಲ್ಲೂ ವಿಚಾರವೊಂದನ್ನು ಹಿಡಿದುಕೊಂಡು ಆಡಳಿತ ಮತ್ತು ವಿಪಕ್ಷಗಳು ಸ್ವಪ್ರತಿಷ್ಠೆ ಯಿಂದ ವರ್ತಿಸುತ್ತಿರುವುದೂ ಸಾಮಾನ್ಯ ಸಂಗತಿಯಾಗಿದೆ. ಈಗ ರಾಜ್ಯಸಭೆಯಲ್ಲಿ 12 ಸದಸ್ಯರನ್ನು ಮುಂಗಾರು ಅಧಿವೇಶನದ ಕಡೇ ದಿನ ನಡೆಸಿದ ದಾಂಧಲೆಯ ಕಾರಣಕ್ಕಾಗಿ ಅಮಾನತು ಮಾಡಲಾಗಿದೆ. ಇವರ ಅಮಾನತು ರದ್ದತಿಗಾಗಿ ವಿಪಕ್ಷಗಳು ಸಂಸತ್ ಅಧಿವೇಶನದ ಮೊದಲ ದಿನದಿಂದಲೂ ಸದನದ ಹೊರಗೆ ಮತ್ತು ಒಳಗೆ ಪ್ರತಿಭಟನೆ ನಡೆಸಿಕೊಂಡೇ ಬಂದಿವೆ. ಈಗಲೂ ಇದಕ್ಕೆ ಒಂದು ತಾರ್ಕಿಕ ಅಂತ್ಯ ಸಿಕ್ಕಿಲ್ಲ.
Related Articles
Advertisement
ಈ ಕಾರಣದಿಂದಾಗಿಯೇ ಈಗ ಪರಿಷತ್‌ಗೆ ತಜ್ಞರು, ವಿಚಾರವಾದಿಗಳು, ಹಿರಿಯರು ಬರುತ್ತಿಲ್ಲ. ಇದರ ಬದಲಾಗಿ ಹಿಂಬಾಗಿಲ ಮೂಲಕ ರಾಜಕೀಯದಲ್ಲಿರುವವರೇ ಪ್ರವೇಶಿಸುತ್ತಿದ್ದಾರೆ. ಕೆಳಮನೆಯಲ್ಲಿ ಕಾಣಿಸುವಂಥ ಜಗಳ, ಗದ್ದಲ, ಗಲಾಟೆಗಳು ಮೇಲ್ಮನೆಯಲ್ಲೂ ಹೆಚ್ಚಾಗುತ್ತಿವೆ. ಇದರಿಂದ ಪರಿಷತ್ ಘನತೆಗೆ ಕುಂದು ಉಂಟಾಗುತ್ತದೆಯೋ ಹೊರತು, ಬೇರೇನೂ ಅಲ್ಲ.
ಪರಿಷತ್ ಅನ್ನು ಮೇಲ್ಮನೆ ಅಥವಾ ಹಿರಿಯರ ಸದನ ಎಂದು ಕರೆದಿರುವ ಕಾರಣಕ್ಕಾದರೂ ಇದರ ಸದಸ್ಯರು ಜವಾಬ್ದಾರಿಯಿಂದ ವರ್ತಿಸಬೇಕು. ಸರಕಾರಗಳು ಕೆಳಮನೆಯಲ್ಲಿ ಅನುಮೋದನೆ ನೀಡುವ ಮಸೂದೆಗಳಿಗೆ, ಇಲ್ಲಿ ಒಂದು ಚರ್ಚೆ ಮಾಡಿ, ಅದರ ಸಾಧಕ
ಬಾಧಕಗಳ ಕುರಿತಂತೆ ಅವಲೋಕಿಸಿ, ಸಾಧ್ಯವಾದಷ್ಟು ಸಲಹೆ ಸೂಚನೆಗಳನ್ನು ನೀಡುವಂತಿರಬೇಕು. ಇದಕ್ಕೆ ಬದಲಾಗಿ ಗದ್ದಲವೇ ಕಲಾಪ ಕೇಂದ್ರಿತವಾಗಬಾರದು.