Advertisement
ಜಿಲ್ಲೆಯ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಗ್ರಾಮದಲ್ಲಿ ಆಯೋಜಿಸಿದ್ದ ಮಾನವ ಅಭ್ಯುದಯ ವಿಶ್ವವಿದ್ಯಾನಿಲಯದ ಪ್ರಥಮ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ಹಾಗೂ ಮತ್ತಿತರರು ಮಾಡಿದ ವಿಚಾರಮಂಥನದ ರೀತಿಯಲ್ಲಿ ಭಾರತ ಅಭಿವೃದ್ಧಿ ಹೊಂದುತ್ತಿದೆ. ದೇಶದ ಭವಿಷ್ಯ ವಾಗಿರುವ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯಲ್ಲಿರುವ ಜ್ಞಾನವನ್ನು ಒಳ್ಳೆಯ ಸಮಾಜವನ್ನು ನಿರ್ಮಿಸಲು ವಿನಿಯೋಗಿಸಿ, ಪರೋಪಕಾರ ಮತ್ತು ಮಾನವೀಯ ಸೇವೆಯಿಂದ ದೇಶಕ್ಕೆ ಕೀರ್ತಿ ತರುವಂತಹ ಕೆಲಸವನ್ನು ಮಾಡಬೇಕು ಎಂದರು.
ಗುರು ಪೂರ್ಣಿಮೆಯೆಂದು ಒಳ್ಳೆಯ ಸಂಸ್ಕಾರವನ್ನು ಪಡೆದು ಕೊಂಡು ಹೊರಹೊಮ್ಮುತ್ತಿರುವ ತಾವು ಮೊದಲು ವಿದ್ಯೆ ನೀಡಿದ ಗುರುಗಳನ್ನು ಗೌರವಿಸಿ, ಉತ್ಕೃಷ್ಟ ರಾಷ್ಟ್ರವನ್ನು ನಿರ್ಮಿಸಿ, ಮಾನವತ್ವವನ್ನು ಉತ್ಕೃಷ್ಟಗೊಳಿಸುವ ಕೆಲಸವನ್ನು ಮಾಡಬೇಕು. ಸತ್ಯ-ಅನುಕಂಪವನ್ನು ಮೈಗೂಡಿಸಿಕೊಂಡು ಚರಿತ್ರೆಯಲ್ಲಿ ಉಳಿದುಕೊಳ್ಳುವಂತಹ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತರುವಂತಹ ಕೆಲಸವನ್ನು ಮಾಡಬೇಕು ಎಂದರು. ಗೌರವ ಡಾಕ್ಟರೆಟ್
ಖ್ಯಾತ ಭೌತಶಾಸ್ತ್ರಜ್ಞ ಡಾ| ಆರ್. ಚಿದಂಬರಂ, ಇಸ್ರೋ ಮಾಜಿ ಮುಖ್ಯಸ್ಥ ಕೆ. ಕಸ್ತೂರಿ ರಂಗನ್, ಕ್ರಿಕೆಟಿಗ ಸುನಿಲ್ ಗಾವಸ್ಕರ್, ಪಂಡಿತ್ ವೆಂಕಟೇಶ್ ಕುಮಾರ್, ಶಿಕ್ಷಣ, ಆರೋಗ್ಯ ಕ್ಷೇತ್ರದ ಸಾಧಕ ಶ್ರೀನಿವಾಸ್ ಹಾಗೂ ಸಮಾಜ ಸೇವಕಿ ಪೂರ್ಣಿಮಾ ದೇವಿ ಬರ್ಮನ್ ಅವರಿಗೆ ಗೌರವ ಡಾಕ್ಟರೆಟ್ ಪ್ರದಾನ ಮಾಡಲಾಯಿತು.