Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಸಿಎಂ ಬದಲಾವಣೆ ಮಾಡಬೇಕೆಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಮೂವರನ್ನು ಡಿಸಿಎಂ ಮಾಡಿ ಅಂತಿದಾರೆ. ಎಲ್ಲಾ ಸಮುದಾಯ ಜನರ ಹಿತಾಸಕ್ತಿ ಕಾಪಾಡಿಕೊಂಡು ಹೋಗಬೇಕಾಗಿತ್ತು. ಆದರೆ ಅವರವರಲ್ಲೆ ಕಿತ್ತಾಡಿಕೊಂಡು ಹೋಗ್ತಿರೋದು ನೋವುಂಟು ಮಾಡಿದೆ ಎಂದು ಜಗದ್ಗುರುಗಳವರು ಅಸಮಾಧಾನ ವ್ಯಕ್ತಪಡಿಸಿದರು.
Related Articles
Advertisement
ಸದ್ಯ ಮುಖ್ಯಮಂತ್ರಿ ಹಾಗೂ ಹೆಚ್ಚುವರಿ ಡಿಸಿಎಂ ಬೇಡಿಕೆ ಇಟ್ಟಿದ್ದಾರೆ. ಸಿದ್ದರಾಮಯ್ಯ ಪರವಾಗಿರುವ ಸಚಿವರು ಮೂರು ಜನ ಡಿಸಿಎಂ ಆಗಬೇಕು ಅಂತಾ ಹೇಳಿದ್ದರು. ಇನ್ನುಳಿದಂತೆ ಒಕ್ಕಲಿಗ ಸಮುದಾಯದ ಸ್ವಾಮೀಜಿ ಡಿಕೆಶಿಯವರನ್ನ ಮಾಡಬೇಕು ಅಂತಾ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಇರುವ ವೇದಿಕೆಯಲ್ಲೆ ಹೇಳಿರೊದು ವಿಪರ್ಯಾಸ. ಒಂದು ವೇಳೆ ಹೈ ಕಮಾಂಡ್ ಬದಲಾವಣೆ ಮಾಡುವ ಸಂಧರ್ಭ ಬಂದರೆ ಕಾಂಗ್ರೆಸ್ ಪಕ್ಷಕ್ಕೆ ವಿರಶೈವ ಸಮಾಜ ಬಹಳ ಕೊಡುಗೆ ಕೊಟ್ಟಿದೆ. ಈ ಹಿಂದೆ ವಿರೇಂದ್ರ ಪಾಟೀಲ್ ಅವರನ್ನ ಸಿಎಂ ಸ್ಥಾನದಿಂದ ಅರ್ಧದಲ್ಲೆ ಕೆಳಗಿಳಿಸಿದರು. ಬಳಿಕ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿಯರ ದುರಾಡಳಿತದಿಂದ ಜನ ಬೆಸತ್ತು ಕಾಂಗ್ರೆಸ್ ಅಧಿಕಾರ ಕೊಟ್ಟಿದ್ದಾರೆ ಎಂದು ವಿವರಣೆ ನೀಡಿದರು.
ಮುಖ್ಯಮಂತ್ರಿ ಸ್ಥಾನ ಲಿಂಗಾಯಿತರಿಗೆ ಕೊಡೊದಕ್ಕೆ ಆಗದೆ ಇದ್ದರೆ ಉಪ ಮುಖ್ಯಮಂತ್ರಿ ಸ್ಥಾನಕ್ಕಾದರೂ ಪರಿಗಣಿಸಬೇಕು.ಧರ್ಮ ಪೀಠದವರು ರಾಜಕೀಯ ಬಗ್ಗೆ ಮಾತಾಡೋದು ಸರಿಯಲ್ಲ. ಆದರೆ ಅನಿವಾರ್ಯವಾಗಿ ಹೇಳುವ ಪರಿಸ್ಥಿತಿ ಬಂದಾಗ ಧರ್ಮ ಪೀಠ ಮಾತಾಡಬೇಕಾಗಿದೆ ಎಂದು ಡಾ. ವೀರ ಸೋಮೇಶ್ವರ ಜಗದ್ಗುರುಗಳು ಹೇಳಿದರು.
ಸಿಎಂ ಡಿಸಿಎಂ ವಿಚಾರ ಹೈಕಮಾಂಡ್ ಯಾವುದೇ ನಿಟ್ಟಿನ ನಿರ್ಧಾರಕ್ಕೆ ಬರದೇ ಹೋದರೆ ಅವರವರಲ್ಲೆ ಕಿತ್ತಾಡಿಕೊಂಡು ಅಭಿವೃದ್ಧಿ ಹಿನ್ನಡೆ ಆಗುತ್ತೆ ಅಂತಾ ಆತಂಕ ಕಾಡ್ತಿದೆ. ಕಾಂಗ್ರೆಸ್ ಒಳ್ಳೆ ಆಡಳಿತ ನೀಡಬೇಕು ಎಂದರೆ ಯೋಗ್ಯರಿದ್ದರೆ ಅವರನ್ನೆ ಮುಂದುವರೆಸಿ ಇಲ್ಲ ಅಂದರೆ ಬೇರೆಯವರಿಗೆ ನೀಡಲಿ.ಕೆಲವೇ ಸಮುದಾಯದ ಜನರಿಗೆ ತುಷ್ಟಿಕರಣ ಮಾಡದೆ ಬದಲಾವಣೆ ವಿಚಾರ ಬಂದಾಗ ವೀರಶೈವ ಲಿಂಗಾಯತರಿಗೆ ಆದ್ಯತೆ ಕೊಡಬೇಕು.ಒಂದು ವೇಳೆ ಸಿಎಂ ಕೊಡಲಾಗದಿದ್ರೆ ಡಿಸಿಎಂ ಆದ್ರೂ ವೀರಶೈವರಿಗೆ ಕೊಡಬೇಕು ಎಂದ ಜಗದ್ಗುರು ಗಳವರು, ಲಿಂಗಾಯತ ಧರ್ಮ ಒಡೆಯಲು ಕೈ ಹಾಕಿದಾಗ ತಮ್ಮಿಂದ ತಪ್ಪಾಗಿದೆ ಅಂತಾ ಡಿಕೆಶಿ ಅವರೆ ನಮ್ಮಲ್ಲಿ ಕ್ಷಮಾಪಣೆ ಕೇಳಿದ್ದರು ಎಂದು ನೆನಪಿಸಿಕೊಂಡರು.