Advertisement
ಮಂಗಳೂರು ವಿಶ್ವವಿದ್ಯಾಲಯ, ಮಾತಾ ಅಮೃತಾನಂದವಯಿ ಮಠ, ಎಂಆರ್‌ಪಿಎಲ್, ಕೊಣಾಜೆ ಗ್ರಾಮ ಪಂಚಾಯತ್, ಕೆಎಸ್‌ಆರ್‌ಪಿ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಮಹಾತ್ಮಾ ಗಾಂಧಿಯವರ 150ನೇ ಜನ್ಮದಿನದ ಪ್ರಯುಕ್ತ ಬುಧವಾರ ನಡೆದ “ಸ್ವಚ್ಛ ಭಾರತ್ ಕಾರ್ಯಕ್ರಮ’ದ ಕೊಣಾಜೆ ವಿವಿಯ ಮಂಗಳಾ ಸಭಾಂಗಣದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿವಿಯಲ್ಲಿ ಈಗಾಗಲೇ ಕ್ರೀಡಾ ನೀತಿ, ಸಾಂಸ್ಕೃತಿಕ ನೀತಿಯನ್ನು ಅನುಷ್ಠಾನಗೊಳಿಸಿದ್ದು, ಮುಂದಿನ ದಿನಗಳಲ್ಲಿ ಸ್ವಸ್ತಿಕ್ ಪದ್ಮರಂತಹ ಯುವ ವಿಜ್ಞಾನಿಗಳನ್ನು ಪ್ರೋತ್ಸಾಹಿಸುವ ಮತ್ತು ಅವರಿಗೆ ವಿದ್ಯಾರ್ಥಿ ವೇತನ ನೀಡುವ ಕಾರ್ಯ ವಿವಿ ಮಾಡಲಿದೆ ಎಂದರು. ಮಾತಾ ಅಮೃತಾನಂದಮಯಿ ಮಠದ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
Related Articles
ಈ ಸಂದರ್ಭ ವಿವಿ ವತಿಯಿಂದ ಪುತ್ತೂರಿನ ಯುವ ವಿಜ್ಞಾನಿ ಸಂಶೋಧಕ ಸ್ವಸ್ತಿಕ್‌ಪದ್ಮ ಅವರನ್ನು ಸಮ್ಮಾನಿಸಲಾಯಿತು. ಸೇವಾ ಯೋಜನೆಯ ಸಂಯೋಜನಾಧಿಕಾರಿ ವಿನಿತಾ ಅವರು ಪ್ರತಿಜ್ಞಾವಿಧಿ ಬೋಧಿಸಿದರು.
Advertisement
ಕಾರ್ಯಕ್ರಮದಲ್ಲಿ ಎಂ.ಆರ್. ಪಿ.ಎಲ್ ನ ಗ್ರೂಪ್ ಜನರಲ್ ಸೆಕ್ರಟರಿ ಬಿ.ಎಚ್.ಎಸ್. ಪ್ರಸಾದ್, ಮಂಗಳೂರು ವಿವಿ ಕುಲಸಚಿವ ಪ್ರೊ|ಎ.ಎಂ. ಖಾನ್ ಅಮಲಾ ಭಾರತ ಕಾರ್ಯಕ್ರಮದ ಅಧ್ಯಕ್ಷ ಡಾ| ಜೀವರಾಜ್ ಸೊರಕೆ, ನಿಕಟಪೂರ್ವ ಅಧ್ಯಕ್ಷ ಪ್ರಸಾದ್ ರಾಜ್ ಕಾಂಚನ, ಎನ್ನೆ ಸ್ಸೆಸ್ ಸಂಯೋಜಕ ಗೋವಿಂದ ರಾಜ್, ಎಂಆರ್‌ಪಿಎಲ್ ವ್ಯವಸ್ಥಾಪಕಿ ವೀಣಾ ಶೆಟ್ಟಿ, ಸ್ವತ್ಛತಾ ಆಂದೋಲನದ ಕಾರ್ಯದರ್ಶಿ ಸುರೇಶ್ ಅಮೀನ್, ಕೆಎಸ್‌ಆರ್‌ಪಿ ಕಮಾಂಡೆಂಟ್ ಜನಾರ್ದನ ಆರ್, ಕೊಣಾಜೆ ಗ್ರಾ.ಪಂ. ಅಧ್ಯಕ್ಷ ನಝರ್ ಷಾ ಪಟ್ಟೋರಿ, ಕೊಣಾಜೆ ಠಾಣಾ ಇನ್‌ಸ್ಪೆಕ್ಟರ್ ರವಿನಾಯಕ್, ಸುಬ್ರಾಯ ಭಟ್ ಮುಖ್ಯ ಅತಿಥಿಗಳಾಗಿದ್ದರು.
ಕಾರ್ಯಕ್ರಮದ ಅಂಗವಾಗಿ ಮಂಗಳೂರು ವಿವಿ ವಿದ್ಯಾರ್ಥಿಗಳು, ಕೆಎಸ್‌ಆರ್‌ಪಿ ಪೊಲೀಸರು, ಕೊಣಾಜೆ ಗ್ರಾಮದ ನಾಗರಿಕರು, ಮಂಗಳೂರು ವಿವಿ ಶಿಕ್ಷಕ ಮತ್ತು ಶಿಕ್ಷಕೇತರ ಉದ್ಯೋಗಿಗಳು ಮಾತಾ ಅಮೃತಾನಂದ ಮಯಿ ಮಠದ ಕಾರ್ಯಕರ್ತರು ಸಹಿತ ಸುಮಾರು 3,000 ಕ್ಕೂ ಹೆಚ್ಚು ಕಾರ್ಯಕರ್ತರು ಮಂಗಳೂರು ವಿವಿ ಪರಿಸರ ಸಹಿತ ಕೊಣಾಜೆ, ಪಜೀರು, ಬೆಳ್ಮ ಗ್ರಾಮ ವ್ಯಾಪ್ತಿಯಲ್ಲಿ 10 ತಂಡಗಳಾಗಿ ರಚಿಸಿ ಪರಿಸರವನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡಿದರು.
ಮಂಗಳೂರು ಆಕಾಶವಾಣಿಯ ನಿವೃತ್ತ ಮುಖ್ಯಸ್ಥ ಡಾ| ವಸಂತ ಕುಮಾರ್ ಪೆರ್ಲ ಸ್ವಾಗತಿಸಿ, ನಿರ್ವಹಿಸಿದರು. ಡಾ| ಗೋವಿಂದರಾಜು ವಂದಿಸಿದರು.
ಸ್ವಚ್ಛತಾ ಅಭಿಯಾನ ಪ್ರೇರಣೆಶಾಸಕ ಯು.ಟಿ. ಖಾದರ್ ಮಾತನಾಡಿ, ಸ್ವಚ್ಛತಾ ಅಭಿಯಾನದಂತಹ ಕಾರ್ಯಕ್ರಮಗಳು ಊರಿನ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ. ಯಾವುದೇ ದೇಶ ಅಭಿವೃದ್ಧಿ ಯಾಗಬೇಕಾದರೆ ಸ್ವಚ್ಛತೆಯ ವಿಷಯದಲ್ಲಿ ನಾವು ಪ್ರಥಮವಾಗಿ ಜಾಗೃತರಾಗಬೇಕಿದೆ. ಕಾನೂನಿನ ಮೂಲಕ ಸ್ವಚ್ಛತೆಯನ್ನು ನಡೆಸಲು ಸಾಧ್ಯವಿಲ್ಲ. ಮಹಾತ್ಮ ಗಾಂಧೀಜಿಯವರ ಕನಸಿನಂತೆ ನಮ್ಮ ಮನಸ್ಸನ್ನು ಸ್ವಚ್ಛಗೊಳಿಸುವುದರೊಂದಿಗೆ ಸಮಾಜದ ಸ್ವಚ್ಛತೆಗೆ ಪಣ ತೊಡಬೇಕು ಎಂದರು. ಪರಿಸರ ಉಳಿವಿಗೆ ರಕ್ಷಕರಾಗಬೇಕಿದೆ
ಪುತ್ತೂರಿನ ಯುವ ವಿಜ್ಞಾನಿ ಸಂಶೋಧಕ ಸ್ವಸ್ತಿಕ್‌ಪದ್ಮ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ನಾವು ಪರಿಸರ ಸ್ವಚ್ಛತೆಗಾಗಿ ಪರಿಸರ ಪೊಲೀಸ್ ಆಗಿ ಪ್ರತೀ ದಿನ ಕಾರ್ಯ ನಿರ್ವಹಿಸಬೇಕಿದೆ. ಪ್ಲಾಸ್ಟಿಕ್ ನಮಗೆ ಮಾರಕ ಎನ್ನುವುದು ಜನರಲ್ಲಿ ನಂಬಿಕೆ ಆದರೆ ಸಮಸ್ಯೆ ಪ್ಲಾಸ್ಟಿಕ್‌ನದ್ದಲ್ಲ ಅದನ್ನು ಬಳಸುವ ಮನುಷ್ಯರದ್ದು. ನಾವು ಒಂದು ಬಾರಿ ಬಳಸಿ ಅದನ್ನು ಎಲ್ಲೆಂದರಲ್ಲಿ ಎಸೆಯುತ್ತೇವೆ. ಮುಖ್ಯವಾಗಿ ಪ್ಲಾಸ್ಟಿಕ್ ಸರಿಯಾಗಿ ನಿರ್ವಹಣೆ ಮಾಡಬೇಕು. ಮುಖ್ಯವಾಗಿ ಪ್ಲಾಸ್ಟಿಕ್‌ನೊಂದಿಗೆ ಜೈವಿಕ ತ್ಯಾಜ್ಯವನ್ನು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ ಎಂದರು.