Advertisement

ಲಸಿಕಾಕರಣ ಸಮರೋಪಾದಿಯಲ್ಲಿ ಸಾಗಲಿ

04:24 PM May 25, 2021 | Team Udayavani |

ಬೀದರ: ಫ್ರಂಟ್‌ಲೆçನ್‌ ವರ್ಕರ್ಸ್‌ಗೆ ಕೋವಿಡ್‌ ಲಸಿಕೆ ನೀಡಿಕೆ ಪ್ರಕ್ರಿಯೆ ಬಲಗೊಳಿಸುವ ಸಂಬಂಧ ಪ್ರಕ್ರಿಯೆಯನ್ನು ತೀವ್ರಗೊಳಿಸುವ ಹಿನ್ನೆಲೆಯಲ್ಲಿ ಜಿಲ್ಲಾ ಧಿಕಾರಿ ರಾಮಚಂದ್ರನ್‌ ಆರ್‌. ಅವರು ಅಧಿ  ಕಾರಿಗಳೊಂದಿಗೆ ಮತ್ತೂಂದು ಸುತ್ತಿನ ಸಭೆ ನಡೆಸಿ ಚರ್ಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎರಡು ಗಂಟೆಗೆ ಹೆಚ್ಚು ಕಾಲ ನಡೆದ ಸಭೆಯಲ್ಲಿ ಫ್ರಂಟಲೈನ್‌ ವರ್ಕರ್ಸ್‌ ಮತ್ತು ದುರ್ಬಲ ಗುಂಪಿನವರಿಗೆ ಲಸಿಕೆ ನೀಡಿಕೆ ಬಗ್ಗೆ ಚರ್ಚಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾ ಧಿಕಾರಿಗಳು, ಜೀವ ರಕ್ಷಕ ಲಸಿಕೆ ನೀಡಿಕೆ ಕಾರ್ಯ ಯಶಸ್ವಿಯಾಗಲು ಎಲ್ಲ ಅಧಿ ಕಾರಿಗಳು ಸಹಕರಿಸಬೇಕು. ಇಡೀ ಬೀದರ ಜಿಲ್ಲಾದ್ಯಂತ ಈ ಲಸಿಕಾಕರಣ ಕಾರ್ಯವು ಸಮರೋಪಾದಿಯಲ್ಲಿ ನಡೆಯುವಂತಾಗಬೇಕು.

ಜಿಲ್ಲಾ ಹಂತದಲ್ಲಿ ನೇಮಕಗೊಂಡಿರುವ ನೋಡಲ್‌ ಅಧಿ ಕಾರಿಗಳು ತಮ್ಮ ಹಂತದಲ್ಲಿ ತಾಲೂಕು ಮಟ್ಟದಲ್ಲಿ ಕೂಡ ನೋಡಲ್‌ ಅ ಧಿಕಾರಿಗಳನ್ನು ನೇಮಿಸಿ ಲಸಿಕೆ ನೀಡಿಕೆ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು ಎಂದು ನೋಡಲ್‌ ಅಧಿ ಕಾರಿಗಳಿಗೆ ನಿರ್ದೇಶನ ನೀಡಿದರು. ದುರ್ಬಲ ಗುಂಪಿನ ಜನರಿಗೆ ತಪ್ಪದೇ ಲಸಿಕೆ ಸಿಗುವ ನಿಟ್ಟಿನಲ್ಲಿ, ಬೀದರ ಜಿಲ್ಲೆಯಲ್ಲಿ ಇರುವ ದುರ್ಬಲ ಗುಂಪಿನ ಫಲಾನುಭವಿಗಳೆಷ್ಟು ಎಂಬುದರ ಬಗ್ಗೆ ಮೈಕ್ರೋ ಯೋಜನೆ ಸಿದ್ಧಪಡಿಸಿ ಸಲ್ಲಿಸುವಂತೆ ಇದೆ ವೇಳೆ ಜಿಲ್ಲಾಧಿ ಕಾರಿಗಳು ಅ ಧಿಕಾರಿಗಳಿಗೆ ಸಲಹೆ ಮಾಡಿದರು.

ಸಭೆಯಲ್ಲಿ ಜಿಪಂ ಸಿಇಒ ಜಹೀರಾ ನಸೀಮ್‌, ಅಪರ ಜಿಲ್ಲಾಧಿ ಕಾರಿ ರುದ್ರೇಶ ಗಾಳಿ, ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ಡಾ| ಭುವನೇಶ ಪಾಟೀಲ, ಡಿಎಚ್‌ಒ ಡಾ| ವಿ.ಜಿ.ರೆಡ್ಡಿ, ಡಿಎಸ್‌ಒ ಡಾ| ಕೃಷ್ಣಾ ರೆಡ್ಡಿ, ಆರ್‌ಸಿಎಚ್‌ ಅ ಧಿಕಾರಿ ಡಾ| ರಾಜಶೇಖರ, ಡಿಡಿಪಿಐ ಟಿ.ಆರ್‌. ದೊಡ್ಡೆ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next