Advertisement

ಗಾಂಧಿ ಚಿಂತನೆ ಗ್ರಾಮಾಭಿವೃದ್ಧಿಗೆ ಪ್ರೇರಣೆಯಾಗಲಿ

07:30 PM Oct 10, 2021 | Team Udayavani |

ಗದಗ: ಸಿದ್ಧಾಂತ, ಜಾಗೃತಿ, ರಾಷ್ಟ್ರೀಯತೆ ಬಿತ್ತರಿಸುವ ಜೊತೆಗೆ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಪ್ರೇರೇಪಿಸುವ ನಿಟ್ಟಿನಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸಲಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಹಾರೈಸಿದರು.

Advertisement

ಸಮೀಪದ ನಾಗಾವಿ ಗುಡ್ಡದಲ್ಲಿರುವ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್‌ನಲ್ಲಿ ನಿರ್ಮಾಣಗೊಂಡಿರುವ ಕೌಶಲ್ಯ ವಿಕಾಸ ಭವನ, ಅಧ್ಯಯನ ಶಾಲೆ ಹಾಗೂ ವಿದ್ಯಾರ್ಥಿ ನಿಲಯ ಕಟ್ಟಡಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್‌ ವಿಶ್ವವಿದ್ಯಾಲಯ ಉಳಿದೆಲ್ಲ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾಗಿದೆ. ಗ್ರಾವಿವಿಯಲ್ಲಿ ಗಾಂ ಧೀಜಿ ಅವರ ತತ್ವಗಳಿಗೆ ಗ್ರಾಮೀಣಾಭಿವೃದ್ಧಿಗೆ ಪೂರಕವಾದ ಅಂಶಗಳೊಂದಿಗೆ ಗಾಂಧಿಧೀಜಿ ಅವರ ಗ್ರಾಮ ಸ್ವರಾಜ್ಯದ ಕನಸು ನನಸು ಮಾಡಲು ಶ್ರಮಿಸುತ್ತಿದೆ. ಈಗಾಗಲೇ ಗ್ರಾವಿವಿಯಲ್ಲಿ 10 ಸ್ನಾತ್ತಕೋತ್ತರ ಪದವಿಗಳಿದ್ದು, 400 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಹೊಸ ಶಿಕ್ಷಣ ನೀತಿ ಅನ್ವಯ ಹೊಸದಾಗಿ 5 ಪದವಿಗಳನ್ನು ಅಳವಡಿಸಿಕೊಂಡ ಪ್ರಥಮ ವಿಶ್ವವಿದ್ಯಾಲಯ ಎಂಬುದು ಹೆಮ್ಮೆಯ ಸಂಗತಿ ಎಂದರು.

ಲೋಕೊಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ ಮಾತನಾಡಿ, ಮಹಾತ್ಮ ಗಾಂ ಧೀಜಿ ಕಂಡಂತಹ ಗ್ರಾಮ ಸ್ವರಾಜ್ಯದ ಕನಸು ನನಸಾಗಬೇಕಾದರೆ ಗ್ರಾಮಗಳು ನೈರ್ಮಲ್ಯವಾಗಿ, ಸುಸಜ್ಜಿತವಾಗಿರಲು ಬೇಕಾದ ಅಂಶಗಳ ಪರಿಕಲ್ಪನೆಗೆ ಈ ವಿಶ್ವವಿದ್ಯಾಲಯ ಅನುಕೂಲಕರವಾಗಿದೆ. ಇಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಗ್ರಾಮಗಳ ಸಮಗ್ರ ಅಭಿವೃದ್ಧಿಗಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಶಿಕ್ಷಣ ನೀತಿಯಡಿ ಕೌಶಲ್ಯ ಅಭಿವೃದ್ಧಿಗೆ ತುಂಬಾ ಸಹಕಾರಿಯಾಗಲಿದೆ ಎಂದರು.

ಶಾಸಕ ಎಚ್‌.ಕೆ.ಪಾಟೀಲ ಮಾತನಾಡಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್‌ ವಿಶ್ವವಿದ್ಯಾಲಯ ಗ್ರಾಮಗಳ ಅಭಿವೃದ್ಧಿಗೋಸ್ಕರ ವಿಚಾರ ಹೊಂದಿರುವವರಿಗೆ ಪುಣ್ಯಕ್ಷೇತ್ರವಾಗಿದೆ. ಗಾಂ ಧೀಜಿ ಅವರು ಗದಗಕ್ಕೆ ಭೇಟಿ ನೀಡಿದ ನೂರು ವರ್ಷಗಳಾದ ದಿನದಂದೇ ಇಲ್ಲಿನ ಸಾಬರಮತಿ ಆಶ್ರಮದ ಪ್ರತಿಕೃತಿ ಉದ್ಘಾಟನೆಗೊಂಡಿದ್ದು ಸಂತಸದ ಸಂಗತಿ. ಗ್ರಾವಿವಿ ಸ್ಥಾಪನೆ ವೇಳೆ ಹೊಂದಿದ್ದ ನಮ್ಮ ಅಭಿವೃದ್ಧಿಯ ಕಲ್ಪನೆಗಳನ್ನು ಮೀರಿ ಮುನ್ನುಗ್ಗುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.

Advertisement

ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಕಳಕಪ್ಪ ಬಂಡಿ ಅವರು “ಗಾಂಧಿಧೀಜಿ ವಿಚಾರ ಹಾಗೂ ಕಾರ್ಯಗಳು’ ಡಿಪ್ಲೋಮಾ ಕಾರ್ಯಕ್ರಮ ಹಾಗೂ ವಿಧಾನ ಪರಿಷತ್‌ ಸದಸ್ಯರಾದ ಎಸ್‌.ವಿ.ಸಂಕನೂರ ಅವರು “ಗ್ರಾಮೋದಯ ತ್ರೆ„ಮಾಸಿಕ’ ಪತ್ರಿಕೆ ಬಿಡುಗಡೆಗೊಳಿಸಿದರು. ವೇದಿಕೆ ಮೇಲೆ ಶಾಸಕ ರಾಮಣ್ಣ ಲಮಾಣಿ, ಕಾಂತಿಲಾಲ್‌ ಬನ್ಸಾಲಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾ ಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ನಾಗಾವಿ ಗ್ರಾಪಂ ಅಧ್ಯಕ್ಷೆ ಹನುಮವ್ವ ಸಿದೆ°ಕೊಪ್ಪ, ಕಳಸಾಪುರ ಗ್ರಾಪಂ ಅಧ್ಯಕ್ಷ ರಾಮಣ್ಣ ಅಣ್ಣಿಗೇರಿ, ಅಸುಂಡಿ ಗ್ರಾಪಂ ಅಧ್ಯಕ್ಷೆ ಜಯಶ್ರೀ ಅಣ್ಣಿಗೇರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್‌, ಗ್ರಾವಿವಿ ಕುಲಪತಿ ವಿಷ್ಣುಕಾಂತ ಚಟಪಲ್ಲಿ, ಜಿಲ್ಲಾ ಧಿಕಾರಿ ಎಂ.ಸುಂದರೇಶ್‌ ಬಾಬು, ಜಿಪಂ ಸಿಇಒ ಭರತ ಎಸ್‌., ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಯತೀಶ್‌ ಎನ್‌, ಕ.ರಾ.ಗ್ರಾ.ಪಂ. ರಾಜ್‌ ವಿಶ್ವವಿದ್ಯಾಲಯದ ಮಾಜಿ ಕುಲಸಚಿವ ಡಾ|ಸುರೇಶ ನಾಡಗೌಡ್ರ ಉಪಸ್ಥಿತರಿದ್ದರು. ಕುಲಸಚಿವ ಬಸವರಾಜ್‌ ಎಲ್‌. ಸರ್ವರನ್ನು ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next