Advertisement

ಜಾನಪದ ಕಲೆ ರಕ್ಷಣೆಗೆ ಪ್ರತಿಯೊಬ್ಬರೂ ಶ್ರಮಿಸಲಿ: ಮಂಜುಳಾ

06:01 PM Jun 13, 2022 | Team Udayavani |

ಹಿರಿಯೂರು: ಗ್ರಾಮೀಣ ಸೊಗಡಿನ ಜಾನಪದ ಕಲೆಗಳನ್ನು ಉಳಿಸಿ ಬೆಳೆಸಲು ಎಲ್ಲರೂ ಶ್ರಮಿಸಬೇಕು ಎಂದು ಮಸ್ಕಲ್‌ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ವೀರೇಶ್‌ ಕರೆ ನೀಡಿದರು.

Advertisement

ತಾಲೂಕಿನ ಮಸ್ಕಲ್‌ ಗ್ರಾಮದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿ ಕಾರ ಬೆಂಗಳೂರು ಹಾಗೂ ಬಹುಮುಖೀ ಕಲಾ ಕೇಂದ್ರ ಚಿತ್ರದುರ್ಗ ಇವುಗಳ ಸಂಯುಕ್ತಾಶ್ರಯದಲ್ಲಿ 75ನೇ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿಗೆ ಆಯೋಜಿಸಿದ್ದ ಗೀತ ಗಾಯನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬೀಸುವಾಗ, ಭತ್ತ ಕುಟ್ಟುವಾಗ, ನಾಟಿ ಮಾಡುವಾಗ ಹಾಡುವ ಹಾಡುಗಳು, ಉಯ್ನಾಲೆ ಪದ, ಕೋಲಾಟ, ತಮಟೆ ವಾದ್ಯ, ಗೊರವರ ಕುಣಿತ, ವೀರಗಾಸೆ, ದೊಡ್ಡಾಟ, ಸಣ್ಣಾಟ, ಬೀಸುವ ಕಲ್ಲಿನ ಪದ, ಸೋಬಾನೆ, ದೇವರನಾಮ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಜೀವಂತವಾಗಿವೆ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅವುಗಳ ಅನಾವರಣ ಸಾಧ್ಯ. ಆದ್ದರಿಂದ ಸರ್ಕಾರಗಳು ಇನ್ನೂ ಹೆಚ್ಚು ಪ್ರೋತ್ಸಾಹ ನೀಡುವುದರ ಮೂಲಕ ಕಲೆ ಮತ್ತು
ಕಲಾವಿದರನ್ನು ಗೌರವಿಸಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೈ. ನಾಗರಾಜ್‌ ಮಾತನಾಡಿ, ಕಲೆಗೆ ತಕ್ಕ ಪ್ರೋತ್ಸಾಹ ನೀಡಿದರೆ ಕಲಾವಿದರ ಬದುಕು ಹಸನಾಗುತ್ತದೆ. ಕಲೆಗೋಸ್ಕರ ಜೀವಮಾನವಿಡೀ ದುಡಿಯುವ ಕಲಾವಿದರನ್ನು ಸರ್ಕಾರ, ಸಂಘ-ಸಂಸ್ಥೆಗಳು ಪೋಷಿಸಬೇಕೆಂದು ತಿಳಿಸಿದರು.

ನ್ಯಾಯವಾದಿ ಕೆ. ರಾಜಪ್ಪ ಮಾತನಾಡಿ, ಗಡಿ ಭಾಗದ ಸಮಸ್ಯೆಗಳು ಇಂದಿಗೂ ಜೀವಂತವಾಗಿವೆ. ನಾಡಿನ ಪ್ರಜ್ಞಾವಂತರು ಬರಹಗಾರರು, ರಾಜಕಾರಣಿಗಳು
ಸೌಹಾರ್ದತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದರು.

Advertisement

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ವಿ.ಎಲ್‌. ಗೌಡ, ಆರ್‌. ಕಲಾವತಿ, ಸ್ವಾಮಿ ವಿವೇಕಾಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಸ್‌.ಜಿ. ರಂಗಸ್ವಾಮಿ ಸಕ್ಕರ, ಬಹುಮುಖೀ ಕಲಾ ಕೇಂದ್ರದ ಕಾರ್ಯದರ್ಶಿ ಟಿ. ಮಧು, ಯುವ ಮುಖಂಡರಾದ ವೀರೇಶ್‌, ಪಾತಲಿಂಗಪ್ಪ, ಕಲಾವಿದರಾದ ಸರಸ್ವತಿ, ಚಂದ್ರಪ್ಪ ಆಯಿತೋಳ್‌, ಗೋವಿಂದಪ್ಪ, ಶ್ರೀನಿವಾಸಮೂರ್ತಿ ಇನ್‌ಫೆಂಟ್‌ ವಿನಯ್‌ ಮೊದಲಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next