Advertisement

ಜಲಶಕ್ತಿ ಅಭಿಯಾನ ಯಶಸ್ಸಿಗೆ ಪ್ರತಿಯೊಬ್ಬರು ಕೈಜೋಡಿಸಲಿ

11:54 AM Sep 29, 2019 | Team Udayavani |

ಬ್ಯಾಡಗಿ: ಜಾಗತೀಕರಣದ ಬೆನ್ನತ್ತಿರುವ ಮಾನವ ಪರಿಸರ ಹಾಳು ಮಾಡಿ ಯಥೇಚ್ಚವಾಗಿ ನೀರು ಪೋಲು ಮಾಡುತ್ತಿದ್ದಾನೆ. ನೀರು ಇದ್ದರೆ ಮಾತ್ರ ಭೂಮಿಯ ಮೇಲೆ ಬದುಕು ಎಂಬುದನ್ನ ಮರೆತಿರುವಂತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ವಿ.ಎಂ. ಪೂಜಾರ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಜಲಶಕ್ತಿ ಅಭಿಯಾನದ ಐಇಸಿ ಚಟುವಟಿಕೆಯಡಿ ಜಲಮೂಲ ರಕ್ಷಣೆಗೆ ಜಾಗೃತಿ ಸೈಕಲ್‌ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಲಶಕ್ತಿ ಅಭಿಯಾನದಂಥ ಯೋಜನೆಗಳು ಯಶಸ್ವಿಗೊಳ್ಳಲು ಸಾರ್ವಜನಿಕರ ಪಾತ್ರ ಅತ್ಯವಶ್ಯವಾಗಿದೆ. ನೀರಿನ ಸಂರಕ್ಷಣೆ ಕೇವಲ ಪುರಸಭೆ ಕೆಲಸ ಎಂದು ಕೈಕಟ್ಟಿಕೂರದೆ ಯೋಜನೆ ಹಿಂದಿನ ಮಹತ್ವ ಅರಿತು ನೀರು ಉಳಿಸಲು ಎಲ್ಲರೂ ಕಂಕಣಬದ್ಧರಾಗಬೇಕಿದೆ ಎಂದರು.

ಸೈಕಲ್‌ ಜಾಥಾ: ಜಲಶಕ್ತಿ ಅಭಿಯಾನದ ಕುರಿತಂತೆ ನಡೆದ ಸೈಕಲ್‌ ಜಾಥಾ ಪಟ್ಟಣದ ವಿವಿಧ ಬೀದಿಗಳಲ್ಲಿ ಸಂಚರಿಸಿ ಜನರಲ್ಲಿ ಜಲಮೂ ರಕ್ಷಣೆ ಹಾಗೂ ಮಳೆ ಕೊಯ್ಲಿನ ಕುರಿತು ಜಾಗೃತಿ ಮೂಡಿಸಲಾಯಿತು. ಪುರಸಭೆ ಸದಸ್ಯ ರಾಮಣ್ಣ ಕೋಡಿಹಳ್ಳಿ, ಪುರಸಭೆ ವ್ಯವಸ್ಥಾಪಕ ಎನ್‌.ಟಿ ಹೊಸಮನಿ, ಹರೀಶಕುಮಾರ ಕೆ., ಎಂ.ಟಿ. ಯಲ್ಲಣ್ಣನವರ, ತಬಸುಮಬಾನು, ಮಾಲತೇಶ ಹಳ್ಳಿ, ರಾಜು ಮಡಿವಾಳರ, ಎಂ.ಎಚ್‌.ಭೋವಿ, ಜಿ.ಎಸ್‌. ವರದ, ಕೆ.ವೀರಾಚಾರಿ, ಸೌಭಾಗ್ಯ ಬಳಿಗಾರ, ಕವಿತಾ ಸಂಕಣ್ಣನವರ, ರೋಹಿಣಿ ಗೊಲ್ಲರ ಪ್ರತಾತ ಗಂಗಮ್ಮನವರ, ಪರಶುರಾಮ ಹರಿಜನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next