Advertisement

ಕೋವಿಡ್‌ ತಡೆಗೆ ಸಮುದಾಯಗಳು ಸಹಕರಿಸಲಿ

04:35 PM Apr 16, 2021 | Team Udayavani |

ತುಮಕೂರು: ಜಿಲ್ಲೆಯಲ್ಲಿ ಹೆಚ್ಚುತ್ತಿರುವಕೋವಿಡ್‌ ಪ್ರಕರಣಗಳ ನಿಯಂತ್ರಣಕ್ಕಾಗಿಎಲ್ಲ ಸಮುದಾಯದವರ ಸಹಭಾಗಿತ್ವ ಮತ್ತುಸಹಕಾರ ಅತ್ಯಾವಶ್ಯಕ ಎಂದು ಜಿಲ್ಲಾಧಿಕಾರಿವೈ.ಎಸ್‌. ಪಾಟೀಲ ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ ದಲ್ಲಿ ಕೋವಿಡ್‌ ನಿಯಂತ್ರಣ ಸಂಬಂಧ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು,ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಜಿಲ್ಲೆಗಳಲ್ಲಿ ಒಂದಾಗಿರುವ ತುಮಕೂರಿನಲ್ಲಿಯೂ ದಿನೇ ದಿನೆ ಕೋವಿಡ್‌ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ.

ಈ ಹಿನ್ನೆಲೆ ಮುಸ್ಲಿಂ ಬಾಂಧವರು ರಂಜಾನ್‌ಹಬ್ಬದ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿ ಪಾಲಿಸಿ ಕೋವಿಡ್‌ ನಿಯಂತ್ರಣಕ್ಕೆಸಹಕರಿಸಬೇಕು ಎಂದು ಮನವಿಮಾಡಿದರು.

ರಂಜಾನ್‌ ಹಬ್ಬದಲ್ಲಿ ಮಾಸ್ಕ್ ಹಾಕಿಕೊಳ್ಳುವುದು ಮತ್ತು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವಯಸ್ಸಾದವರುಅನವಶ್ಯಕವಾಗಿ ಹೊರಗಡೆ ಬರಬಾರದು.ರಂಜಾನ್‌ ಸಮಯದಲ್ಲಿ ಉಪವಾಸದ ಆಚರಣೆ ರೂಢಿಯಲ್ಲಿದ್ದು, ಈ ಸಂದರ್ಭದಲ್ಲೂಲಸಿಕೆ ಹಾಕಿಸಿಕೊಳ್ಳಲಿಚ್ಛಿಸುವವರಿಗೆ ಲಸಿಕೆಹಾಕಿಸ ಬೇಕು. ಈ ನಿಟ್ಟಿನಲ್ಲಿ ಮುಸ್ಲಿಂ ಮುಖಂಡರು ತಮ್ಮ ಸಮುದಾಯದಲ್ಲಿ ಜಾಗೃತಿಮೂಡಿಸಿ ಕೋವಿಡ್‌ ನಿಯಂತ್ರಣಕ್ಕೆ ಕೈಜೋಡಿಸ ಬೇಕು.

ಕೋವಿಡ್‌ ಲಕ್ಷಣ ಕಂಡು ಬಂದತಕ್ಷಣ ಅಂತಹವರನ್ನು ಪರೀಕ್ಷೆಗೊಳಪಡಿಸಿಚಿಕಿತ್ಸೆಗೆ ದಾಖಲಿಸಬೇಕಲ್ಲದೆ 45 ವರ್ಷಮೇಲ್ಪ ಟ್ಟ ವರೆ ಲ್ಲರಿಗೂ ಲಸಿಕೆ ಹಾಕಿಸಿ ಕೊಳ್ಳುವಂತೆ ಅರಿವು ಮೂಡಿಸಬೇಕು ಎಂದರು.ತುಮಕೂರು ಜಿಲ್ಲಾ ವಕ್ಫ್ ಸಮಿತಿ ಅಧ್ಯಕ್ಷಮುಸ್ತಫ್ ಅಹಮದ್‌ ಮಾತನಾಡಿ, ಕಳೆದವರ್ಷದಂತೆ ಈ ವರ್ಷವೂ ಕೋವಿಡ್‌ ಅಲೆಯಲ್ಲಿ ಸಿಲುಕಿರುವ ಹಿನ್ನೆಲೆ ನಗರದ 80 ಸೇರಿದಂತೆ ಜಿಲ್ಲಾದ್ಯಂತ ಇರುವ ಒಟ್ಟು 410ಮಸೀದಿಗಳಿಗೆ ಈಗಾಗಲೇ ಸರ್ಕಾರದಮಾರ್ಗ ಸೂಚಿಗಳನ್ನು ಉರ್ದುಗೆ ಭಾಷಾಂತರಮಾಡಿ ಕಳಿಸಿಕೊಡಲಾಗಿದ್ದು, ಪಾಲನೆ ಮಾಡಲಾಗುತ್ತಿದೆ ಎಂದರು.

Advertisement

ಮುಖಂಡ ಡಾ.ವಸೀಮ್‌ ಮಾತನಾಡಿ,ಜಿಲ್ಲೆಯ ಎಲ್ಲಾ ಮಸೀದಿಗಳಲ್ಲಿಯೂಥರ್ಮಲ್‌ ಸ್ಕ್ರೀನಿಂಗ್‌ ವ್ಯವಸ್ಥೆಗೆ ಅವಕಾಶಮಾಡಿಕೊಡಬೇಕು. ಇದರಿಂದ ಕೋವಿಡ್‌ನಿಯಂತ್ರಣ ಸಾಧ್ಯವಾಗಲಿದೆ ಎಂದರು.ಡಾ.ಅಸ್ಕರ್‌ ಖಲೀನ್‌ ಮಾತನಾಡಿ, ರಂಜಾನ್‌ಸಮಯದಲ್ಲಿ ಉಪವಾಸ ಇಲ್ಲದವರು ಲಸಿಕೆಪಡೆದು ಕೊಳ್ಳಬಹುದು. ಉಳಿದವರಿಗೆಹಬ್ಬದ ಬಳಿಕ ಲಸಿಕೆ ಹಾಕಿಸಲು ಕ್ರಮಕೈಗೊಳ್ಳಬೇಕು ಎಂದರು.

ಸ್ಕ್ರೀನಿಂಗ್‌ ವ್ಯವಸ್ಥೆ ಮಾಡಿ: ಮುಖಂಡರಸಲಹೆಗಳನ್ನು ಆಲಿಸಿದ ಬಳಿಕ ಮಾತನಾಡಿದಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ, ಎಲ್ಲಮಸೀದಿಗಳಲ್ಲಿಯೂ ಸ್ಕ್ರೀನಿಂಗ್‌ ವ್ಯವಸ್ಥೆಮಾಡಬೇಕು. ಸುಳ್ಳು ಸುದ್ದಿ ಹರಡುವವರವಿರುದ್ಧ ದೂರು ನೀಡಿದರೆ ಕ್ರಮಕೈಗೊಳ್ಳಲಾಗುವುದು. ಲಸಿಕೆ ಹಾಕಿಸಲು ಹೆಚ್ಚುಒತ್ತು ಕೊಡಬೇಕು. 100 ಜನ ಒಂದೆಡೆ ಸೇರಿಲಸಿಕೆ ಹಾಕಿಸಿಕೊಳ್ಳಲು ಬಯಸಿದರೆ, ಆ ಸ್ಥಳಕ್ಕೆಆರೋಗ್ಯ ಸಿಬ್ಬಂದಿ ತೆರಳಿ ಲಸಿಕೆ ಹಾಕುವರು.

ಲಸಿಕೆ ಬಗ್ಗೆ ಯಾರೂ ಆತಂಕ ಪಡುವಅಗತ್ಯವಿಲ್ಲ ಎಂದು ತಿಳಿಸಿದರು.ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಡಾ. ನಾಗೇಂದ್ರಪ್ಪ, ಆರ್‌ಸಿಎಚ್‌ ಅಧಿಕಾರಿಡಾ. ಕೇಶವ್‌ರಾಜ್‌, ಜಿಲ್ಲಾ ಸರ್ವೇಲೆನ್ಸ್‌ಅಧಿಕಾರಿ ಡಾ. ಮೋಹನ್‌ದಾಸ್‌, ಪಾಲಿಕೆಆಯುಕ್ತೆ ರೇಣುಕಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next