Advertisement
ಸಿಎಂ ಮನೆ ಮುತ್ತಿಗೆ ವೇಳೆ ಅವರು ಮಾತನಾಡಿ, ಇದು ಸಿಎಂ, ಸಚಿವರ ಬುಡಕ್ಕೆ ಬರಲಿದೆ. ಮುಖ್ಯಮಂತ್ರಿಗಳ ಮುಖವಾಡವೂ ಕಳಚಿಬಿದ್ದಿದ್ದು, ಮುಖ್ಯಮಂತ್ರಿಗಳೂ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ವಿಧಾನಸಭಾ ಚುನಾವಣೆ ವೇಳೆ ಭ್ರಷ್ಟಾಚಾರರಹಿತ ಆಡಳಿತ ಕೊಡುವುದಾಗಿ ಭಾಷಣ ಮಾಡಿದ್ದರು. ಮತ್ತೂಂದೆಡೆ ವಿನಯ್ ಕುಲಕರ್ಣಿ ಅವರೂ ಸಚಿವರ ಮೇಲೆ ಆರೋಪ ಮಾಡಿದ್ದಾರೆ. ಈಗ ಹಲವಾರು ಹಗರಣಗಳು ನಡೆದಿವೆ. ಒಂದೆಡೆ ಬೆಲೆ ಏರಿಕೆ, ಇನ್ನೊಂದೆಡೆ ಹಗಲು ದರೋಡೆಯಲ್ಲಿ ರಾಜ್ಯ ಸರಕಾರ ನಿರತವಾಗಿದೆ ಎಂದು ಟೀಕಿಸಿದರು.
ಶೇ. 50:50ರ ಅನುಪಾತದಲ್ಲಿ ಮುಖ್ಯಮಂತ್ರಿಗಳ ಪತ್ನಿಗೆ 15 ನಿವೇಶನಗಳನ್ನು ಕೊಟ್ಟಿ¨ªಾರೆ. ಸಚಿವ ಬೈರತಿ ಸುರೇಶ್ ಅವರು ಮೈಸೂರಿಗೆ ಹೋಗಿ ಅಧಿಕಾರಿಗಳ ವರ್ಗಾವಣೆ ಮಾಡಿ, ಹಗರಣಕ್ಕೆ ಸಂಬಂಧಿಸಿದ ಕಡತಗಳನ್ನು ಬೆಂಗಳೂರಿಗೆ ತೆಗೆದುಕೊಂಡು ಬಂದಿದ್ದಾರೆ. ಈ ಹಗರಣ ಮುಚ್ಚಿ ಹಾಕುವ ಸಂಪೂರ್ಣ ಪ್ರಯತ್ನ ನಡೆದಿದೆ. ಸುರೇಶ್ ಅವರು ಕಡತಗಳ ಜತೆ ಬಂದಿದ್ದು, ಅವುಗಳನ್ನು ತಿದ್ದುವ ಕೆಲಸ ಆಗಲಿದೆ ಎಂದು ಆರೋಪಿಸಿದರು. ತನಿಖೆ ಆಗುವವರೆಗೆ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು. ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿಲ್ಲವೇಕೆ?
ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ 4 ಸಾವಿರ ಕೋಟಿಗೂ ಹೆಚ್ಚು ಮೊತ್ತದ ಹಗರಣ ಬಯಲಿಗೆ ಬಂದಿದೆ. ಸಚಿವ ಬೈರತಿ ಸುರೇಶ್ ಅವರು ಅಧಿಕಾರಿಗಳನ್ನು ಅಮಾನತು ಮಾಡದೆ, ವರ್ಗಾವಣೆ ಮಾಡಿ, ಕಡತಗಳನ್ನು ಒಯ್ದಿದ್ದಾರೆ. ಸಾವಿರಾರು ಕೋಟಿ ಹಗರಣದ ಕುರಿತು ಜಿಲ್ಲಾಧಿಕಾರಿಗಳು ಆರೇಳು ತಿಂಗಳ ಹಿಂದೆ ವರದಿ ನೀಡಿದ್ದರು. ಹಗರಣದ ವಿಚಾರ ಗೊತ್ತಿದ್ದರೂ ಇದನ್ನು ಮುಚ್ಚಿಟ್ಟಿದ್ದರು ಎಂದ ವಿಜಯೇಂದ್ರ, ನಿಮಗೆ ತಾಕತ್ತಿದ್ದರೆ ಅಧಿಕಾರಿಗಳನ್ನು ಅಮಾನತು ಮಾಡಬೇಕಿತ್ತು ಎಂದು ಸವಾಲು ಹಾಕಿದರು.