Advertisement

ಕೇಜ್ರಿವಾಲ್‌ ಕಟಕಟೆಗೆ ಕರೆಸಿ: ದಿಲ್ಲಿ ಹೈಕೋರ್ಟ್‌!

11:34 AM May 19, 2017 | Team Udayavani |

ಹೊಸದಿಲ್ಲಿ: ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ವಿರುದ್ಧ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ವಿಚಾರಣೆ ಇದೀಗ ಕೇಜ್ರಿವಾಲ್‌ ಪರ ವಕೀಲ ರಾಂ ಜೇಠ್ಮಲಾನಿ ಅವರಿಗೂ ಪೀಕಲಾಟಕ್ಕಿಟ್ಟುಕೊಂಡಿದೆ. 

Advertisement

ಪಾಟಿ ಸವಾಲಿನ ವೇಳೆ ಜೇಠ್ಮಲಾನಿ ಅವರು ಜೇಟ್ಲಿ ವಿರುದ್ಧ ಬಳಸಿದ ಪದಗಳ ಬಗ್ಗೆ ಹೈಕೋರ್ಟ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಜೇಠ್ಮಲಾನಿ ಬಳಸಿದ ಪದಗಳು “ನಾಚಿಕೆ ಗೇಡು’ ಎಂದು ಕೋರ್ಟ್‌ ವ್ಯಾಖ್ಯಾನಿಸಿದೆ. ವಿಚಾರಣೆ ವೇಳೆ ಈ ಬಗ್ಗೆ ನ್ಯಾ| ಮನಮೋಹನ್‌ ಅವರು, ಜೇಠ್ಮಲಾನಿ ಅವರನ್ನು ಉದ್ದೇಶಿಸಿ “ಇಂತಹ ಪದಗಳನ್ನು ಪ್ರತಿವಾದಿ 1 (ಕೇಜ್ರಿವಾಲ್‌) ಅವರ ಸೂಚನೆ ಮೇರೆಗೆ ಬಳಸಿದ್ದೇ? ಹಾಗೆ ಬಳಸಿದ್ದೇ ಹೌದಾ ದಲ್ಲಿ ಮೊದಲು ಅವರು ಕಟಕಟೆಗೆ ಬರಲಿ, ಬಳಿಕ ಅವರು ತಮ್ಮನ್ನು ಸಮರ್ಥಿಸಿಕೊಳ್ಳಲಿ’ ಎಂದಿದ್ದಾರೆ. ಜೊತೆಗೆ ಮುಂದು ವರಿದು, ಇದೇ ರೀತಿ ಅವರು ಹೇಳಿದ್ದಾರೆ ಎಂದರೆ, ಮತ್ತೆ ಪಾಟಿ ಸವಾಲಿನ ಅಗತ್ಯವೇ ಇಲ್ಲ. ದೂರುದಾರ (ಜೇಟ್ಲಿ) ಅವರನ್ನು ವಿಚಾರಣೆ ನಡೆಸುವ ಅಗತ್ಯವೂ ಇಲ್ಲ ಎಂದರು. 

ಬುಧವಾರ ಪಾಟಿ ಸವಾಲಿನ ವೇಳೆ ಜೇಠ್ಮಲಾನಿ ಬಳಸಿದ ಪದಗಳು ಜೇಟಿÉ ಅವರನ್ನು ಕೆರಳಿಸಿದ್ದವು. ಇಂಥ ಪದ ಪ್ರಯೋಗ ಮುಂದುವರಿಸಿದರೆ, ಇನ್ನೂ ದೊಡ್ಡ ಮಟ್ಟದಲ್ಲಿ ಮಾನನಷ್ಟ ಮೊಕದ್ದಮೆ ಹೂಡಬೇಕಾದೀತು ಎಂದು ಎಚ್ಚರಿಸಿದ್ದರು. 
 

Advertisement

Udayavani is now on Telegram. Click here to join our channel and stay updated with the latest news.

Next