Advertisement

ಮಕ್ಕಳಿಗೆ ದೇವಸ್ಥಾನ-ಮನೆಯಂಗಳದಲ್ಲಿ ಪಾಠ

11:52 AM Aug 10, 2020 | Suhan S |

ಲಕ್ಷ್ಮೇಶ್ವರ: ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳು ಪ್ರಾರಂಭವಾಗಿದ್ದರಿಂದ ಮಕ್ಕಳು ಶಿಕ್ಷಣದಿಂದ ದೂರ ಉಳಿದು ಕಲಿಕೆಯ ನಿರಂತರತೆಗೆ ಅಡ್ಡಿಯಾಗಬಾರದು. ಶಿಕ್ಷಕ-ಮಕ್ಕಳ ಸಂಬಂಧ, ಪಾಲಕರಲ್ಲಿನ ಆತಂಕ ದೂರ ಮಾಡುವ ಎಂಬ ಉದ್ದೇಶದಿಂದ ತಾಲೂಕಿನಲ್ಲಿ ಮಕ್ಕಳಿಗೆ “ಖುಷಿಯಿಂದ ಖುಷಿಗಾಗಿ’ ಎಂಬ ಶೈಕ್ಷಣಿಕ ಸಪ್ತಾಹ ವಿಶೇಷ ಕಾರ್ಯಕ್ರಮವನ್ನು ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕಿನ ಕ್ಷೇತ್ರ ಶಿಕ್ಷಣ ಇಲಾಖೆ ಹಮ್ಮಿಕೊಂಡಿದೆ.

Advertisement

ಇದು ರಾಜ್ಯ ಶಿಕ್ಷಣ ಇಲಾಖೆಯ ಆದೇಶ-ಸೂಚನೆಯಾಗಿರದೆ ಕೇವಲ ತಾಲೂಕಾಧಿಕಾರಿಗಳ ಆಸಕ್ತಿಯಿಂದ ಹಮ್ಮಿಕೊಂಡಿರುವ ವಿನೂತನ ಕಾರ್ಯಕ್ರಮವಾಗಿದೆ. ಕೋವಿಡ್ ಹಾವಳಿ ಕಡಿಮೆಯಾಗುತ್ತಿಲ್ಲವಾದ್ದರಿಂದ ಶಾಲೆಗಳ ಪುನಾರಂಭದ ಬಗ್ಗೆ ಶಿಕ್ಷಣ ಇಲಾಖೆ ಆ. 31ರವರೆಗೆ ಕಾಯುವಂತೆ ಆದೇಶಿಸಿದೆ. ಕೋವಿಡ್‌ ಹಿನ್ನೆಲೆ ಶಾಲೆಗಳು ಬಂದ್‌ ಆಗಿ 5 ತಿಂಗಳು ಕಳೆದಿವೆ. ಹೈಸ್ಕೂಲ್‌ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣ ಮತ್ತು ಚಂದನ ವಾಹಿನಿ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಜೂನ್‌ ತಿಂಗಳಲ್ಲಿ ಶಿಕ್ಷಕರು ಮಕ್ಕಳ ಮನೆ ಭೇಟಿ, ವಾಟ್ಸ್‌ ಆ್ಯಪ್‌ ಮೂಲಕ ಮಕ್ಕಳಿಗೆ ಶೈಕ್ಷಣಿಕ ಸಂದೇಶ ನೀಡಿದ್ದಾರೆ. ಈಗ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಆನ್‌ಲೈನ್‌ ಪಾಠ ಇಲ್ಲದ್ದರಿಂದ ಮಕ್ಕಳು ತರಗತಿ ಪಾಠದಿಂದ ದೂರ ಉಳಿಯುತ್ತಾರೆ. ಇದರಿಂದ ಶಾಲೆ ಪ್ರಾರಂಭಗೊಂಡ ಬಳಿಕ ಈ ಮಕ್ಕಳಿಗೆ ಒತ್ತಡ ಉಂಟಾಗಬಹುದು. ಆದ್ದರಿಂದ ಶಾಲಾ ಪ್ರಾರಂಭದ ಮೊದಲೇ ಮಕ್ಕಳನ್ನು ಈ ನಿಟ್ಟಿನಲ್ಲಿ ಸಿದ್ಧತೆಗೊಳಿಸುವುದು ಜತೆಗೆ ಅವರನ್ನು ಶೈಕ್ಷಣಿಕ ಚಟುವಟಿಕೆಯತ್ತ ಕೇಂದ್ರೀಕರಿಸುವ ಉದ್ದೇಶವಾಗಿದೆ.

ಅಲ್ಲದೇ ಮಕ್ಕಳು ಕೇವಲ ಟಿವಿ, ಮೊಬೈಲ್‌, ಆಟದಲ್ಲಿ ಕಾಲ ಕಳೆಯುವುದನ್ನು ತಪ್ಪಿಸುವ ಈ ನಿಟ್ಟಿನಲ್ಲಿ ಆ. 3ರಿಂದ ಶಿಕ್ಷಕರು ಸ್ವಯಂ ಪ್ರೇರಣೆಯಿಂದ ಪಾಲಕರ, ಸಮುದಾಯದ ಸಹಕಾರದಿಂದ ಮಕ್ಕಳನ್ನು ಅವರ ವಾಸಸ್ಥಳದ ಹತ್ತಿರದ ದೇವಸ್ಥಾನ, ಸಮುದಾಯಭವನ, ಅಂಗನವಾಡಿ ಇತರೇ ಸೂಕ್ತ ಸ್ಥಳದಲ್ಲಿ ಅಷ್ಟಷ್ಟೇ ಮಕ್ಕಳನ್ನು ಸೇರಿಸಿ ಸುರಕ್ಷತೆಯಿಂದ “ಖುಷಿಯಿಂದ ಖುಷಿಗಾಗಿ’ ಪರಿಕಲ್ಪನೆಯಡಿ ಪಾಠ ಮಾಡಲು ಸೂಚಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾ ಕಾರಿ ಆರ್‌.ಎಸ್‌. ಬುರಡಿ ಹೇಳಿದರು.

ಹರದಗಟ್ಟಿ ತಾಂಡಾದಲ್ಲಿ ಮುಖ್ಯ ಶಿಕ್ಷಕರಾದ ಎಚ್‌.ವಿ. ಹಿರೇಮಠ ನೇತೃತ್ವದಲ್ಲಿ ಶಿಕ್ಷಕರಾದ ಸಿ.ಎಸ್‌. ಮರಿದೇವರಮಠ, ಎಸ್ .ಆರ್‌. ನದಾಫ್‌, ಸಿ.ಎಸ್‌. ನೇಕಾರ ಅವರು ಮಕ್ಕಳಿಗೆ ಕೊರೊನಾ ಜಾಗೃತಿ, ಪರಿಸರ, ಸಾಮಾನ್ಯಜ್ಞಾನ, ಕಥೆ ಹೇಳ್ಳೋಣ-ಕೇಳ್ಳೋಣ ಹೀಗೆ ಹಲವಾರು ಆಯಾಮಗಳಲ್ಲಿ ಮಕ್ಕಳಿಗೆ ಪಾಠ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next