Advertisement
ಅವರ ಪಕ್ಕದಲ್ಲಿಯೇ ಪುಟ್ಟ ಮಕ್ಕಳಿಬ್ಬರು ಆಟವಾಡುತ್ತಿದ್ದ ಸೊಗಸನ್ನು ತಲ್ಲೀನತೆಯಿಂದ ನೋಡುತ್ತಿದ್ದೆ. ಒಂದೈದು ನಿಮಿಷ ಕಳೆದಿರಲಿಕ್ಕಿಲ್ಲ, ಮಕ್ಕಳಿಬ್ಬರಲ್ಲಿ ಕಿತ್ತಾಟ ಆರಂಭವಾಯಿತು ಎನ್ನಿಸುತ್ತದೆ. ಆ ಪುಟ್ಟ ಹುಡುಗ, ತನಗಿಂತ ಎರಡ್ಮೂರು ವರ್ಷ ದೊಡ್ಡವಳಿರಬಹುದಾದ ಹೆಣ್ಣು ಮಗುವಿನ ಕೂದಲೆಳೆದು ಬಗ್ಗಿಸಿ ಬೆನ್ನಿಗೆ ಒಂದೆರಡು ಗುದ್ದಿದ. ಒಂದೇ ಸಮಾ ಚೀರಿಕೊಂಡ ಆ ಹುಡುಗಿ ಹತ್ತಿರದಲ್ಲೇ ಮಾತಾಡುತ್ತಾ ನಿಂತಿದ್ದ ತಾಯಿಯ ಬಳಿ ದೂರು ಒಯ್ದಳು. ಇವಳ ಅಳು ನೋಡಿ ಆಕೆ ಶ್ಮ್. ಬಾಯಿ ಮುಚ್ಚು.. ಎಂದು ಗದರಿ, ಆತಂಕದಿಂದ ನಿಂತಿದ್ದ ಮಗನನ್ನು ನೋಡಿ ಈ ಗಂಡು ಮಕ್ಕಳೇ ಹೀಗೆ ಕಣ್ರೀ..ಎಂದು ಹೆಮ್ಮೆಯಿಂದ ನಕ್ಕಳು!
Related Articles
Advertisement
ಆಕೆಯನ್ನು ಹೀಗಳೆಯುವುದು, ಏನೇ ಮಾಡಿದರೂ ತಪ್ಪು ಹುಡುಕು ವುದು,ಮಾನಸಿಕವಾಗಿ ದೌರ್ಜನ್ಯ ನಡೆಸುವುದು,ಹೆಂಡತಿ ಎಂದರೆ ದೈಹಿಕ ಸುಖ ಕೊಡುತ್ತ,ಮಕ್ಕಳನ್ನು ಹೆರುತ್ತ ಅಡುಗೆ ಮನೆಯಲ್ಲಿಬಿದ್ದಿರಬೇಕಾದ ಜೀವಿ ಎಂಬ ವಿಚಾರಕ್ಕೆ ಪಕ್ಕಾಗಿ ಬಿಡಬಹುದು. ಇನ್ನು ಇಬ್ಬರೂ ಉದ್ಯೋಗಸ್ಥರಾದರೆ ಸರಿಯೇ ಸರಿ. ಸಂಗಾತಿಯ ಬಗ್ಗೆ ಅನಗತ್ಯವಾಗಿ ಗುಮಾನಿಗೊಳ್ಳುತ್ತ, ಎಲ್ಲ ವಿಚಾರಕ್ಕೂ ತಾನೇ ಸರಿ ಎಂದು ಕಿತ್ತಾಡುತ್ತಾ, ಅವಳ ಯಶಸ್ಸನ್ನು ಒಂದು ಬಗೆಯ ಹೊಟ್ಟೆ ಉರಿಯಲ್ಲಿಯೇ ನೋಡುತ್ತಾ ಕೊನೆಗೆ ಸಂಸಾರವನ್ನೇ ಮೂರಾಬಟ್ಟೆ ಮಾಡಿಕೊಳ್ಳುವುದುಂಟು! ಈ ಎಲ್ಲಾ ಸಾಧ್ಯತೆಗಳಿಗೆ ಕಾರಣವಾಗುವುದು ಮತ್ತದೇ ಗಂಡೆಂಬ ಅಹಂಕಾರ!.
ಹುಡುಗರಿಗೂ ಶಿಸ್ತಿನ ಪಾಠ ಅಗತ್ಯ: ಹೆಣ್ಣು ಮಗಳಿಗೆ ಬೇಗ ಮನೆಸೇರುವಂತೆ, ಹೊರಗೆ ಕಳಿಸುವಾಗಅಣ್ಣ- ತಮ್ಮಂದಿರ ಜೊತೆಮಾಡುವಂತೆ, ಮಾತುಮಾತಿಗೆ ಹೆಣ್ಣುಮಗಳು,ಹೆಣ್ಣು ಮಗಳ ಥರಾಇರು. ಆ ಬಟ್ಟೆ ಹಾಕಬೇಡ, ಅದು ಮಾಡಬೇಡ, ಇದು ಬೇಡ…. ಮುಂತಾಗಿ ಬೋಧಿಸುವುದರಜೊತೆಗೆ ಗಂಡು ಮಕ್ಕಳಿಗೆ ಬಾಲ್ಯದಿಂದಲೇಮನೆಯಲ್ಲಿರುವ ಸಹೋದರಿಯರ ಜೊತೆಗೆ,ಶಾಲೆಯ ಸ್ನೇಹಿತೆಯರ ಜೊತೆಗೆ, ಹಿರಿಯರ ಜೊತೆಗೆ ಗೌರವಯುತವಾಗಿ ನಡೆದುಕೊಳ್ಳುವಂತೆ ಮಾಡಲು ಸಾಧ್ಯವಿಲ್ಲವೇಕೆ?
ಹೆಣ್ಣಿನ ಬಗೆಗೆ ಕರುಣೆ ಇರುವಂತೆ ಬೆಳೆಸುವುದು ಬೇಡ. ಅವಳಿಗೂ ಒಂದು ವ್ಯಕ್ತಿತ್ವವಿದೆ,ಅವಳಿಗೂ ಅವಳದೇ ಆದ ಕನಸುಗಳಿವೆ, ಗಂಡು ಮತ್ತು ಹೆಣ್ಣು ಮಕ್ಕಳಿಗೆ ದೈಹಿಕ ವ್ಯತ್ಯಾಸದಹೊರತು ಮಿಕ್ಕೆಲ್ಲ ಸಾಮರ್ಥ್ಯವೂ ಇವೆ ಎಂಬಸಮಾನತೆಯನ್ನು ಚಿಗುರುವಾಗಲೇ ಬಿತ್ತಿದರೆ ಆಗಂಡು ಮಕ್ಕಳು ಹೆಣ್ಣಿನ ಜೀವನಕ್ಕೆ ಮಾತ್ರವಲ್ಲ;ಇಡೀ ಸಮಾಜಕ್ಕೇ ತಂಪಾಗಿರುತ್ತಾರೆ. ಮಕ್ಕಳನ್ನುಬೆಳೆಸುವಲ್ಲಿ ಗಂಡು ಹೆತ್ತವರು ಅಗತ್ಯವಾಗಿ ಮಾಡಬೇಕಿರೋದು ಇದನ್ನೇ. ಹೆಣ್ಣಿನ ಬಗ್ಗೆಪೂಜ್ಯ ಭಾವ ಬೆಳೆಸುವುದರಲ್ಲಿ ಹೆತ್ತವರ ಪಾಲು ತುಂಬಾ ದೊಡ್ಡದು.
– ಅಮೃತಾ