Advertisement

ಕಾಗೆಯಿಂದ ಕಲಿಯಬೇಕಾದದ್ದು ಸಾಕಷ್ಟಿದೆ!

06:40 PM Sep 15, 2020 | Suhan S |

ಹಕ್ಕಿಗಳು, ಅವುಗಳ ಕಿಚಿಪಿಚಿ ಸ್ವರ ಎಲ್ಲರಿಗೂ ಪ್ರಿಯ. ಆದರೆ, ಇದೇ ಪಕ್ಷಿಪ್ರಪಂಚಕ್ಕೆ ಸೇರಿದ ಕಾಗೆಯ ಬಗ್ಗೆ ಯಾರಿಗೂ ಅಂಥ ಮಮಕಾರವಿಲ್ಲ, ಯಾಕೆ? ಕಾಗೆಗೆ ಬಹುಶಃ ಹಾಡುವ ಆಸೆ ಅನಿಸುತ್ತದೆ. ಆ ಕಾರಣದಿಂದಲೇ ಅದು ಸದಾ ಕಾ ಕಾ ಎಂದು ಕೂಗುತ್ತಲೇ ಇರುತ್ತದೆ ಅನಿಸುವುದುಂಟು. ಅದೆಷ್ಟೇ ಪ್ರಯತ್ನ ಮಾಡಿದರೂ ಹಾಡು ಇಂಪಾಗಿ ಕೇಳಿಸುತ್ತಿಲ್ಲ ಅನ್ನುವುದೇ ಆ ಪಕ್ಷಿಯ ಚಿಂತೆ… ಆದರೂ ಪ್ರಯತ್ನ ನಿಲ್ಲುತ್ತಿಲ್ಲ…

Advertisement

ಆಗಲೇ ಅನಿಸಿದ್ದು: ಹೇಗಾದರೂ ಸರಿ, ಧ್ವನಿ ಬದಲಿಸಿಕೊಳ್ಳಬೇಕು ಎಂದೇ ಪ್ರಯತ್ನಿಸಿ ಅದರಲ್ಲಿ ಯಶ ಕಂಡಿಲ್ಲ ಅಂತಿಟ್ಟುಕೊಳ್ಳೋಣ; ಅದರಿಂದ ಈ ಕಾಗೆಯ ಮನಸ್ಸಿಗೆ ಅದೆಷ್ಟು ನೋವಾಗಿರಬೇಡ? ಅದೆಷ್ಟು ಅವಮಾನ ಅನುಭವಿಸಿರಬೇಡ? ಇಷ್ಟಾದರೂ ಅದು ಉತ್ಸಾಹಕಳೆದುಕೊಂಡಿಲ್ಲ. ಈಗಲೂ ದಿನವೂಕೂಗುತ್ತದೆ. ಮೇಲಿಂದ ಮೇಲೆ ಅವಮಾನಗಳನ್ನು ಎದುರಿಸಿದ್ದರಿಂದ, ಅದರ ಹುಮ್ಮಸ್ಸು ಎಂದಿಗೂ ಕಡಿಮೆ ಆಗುವುದಿಲ್ಲವೋ ಏನೋ… ಬದುಕಿನಲ್ಲಿ ಬಂದೆರಗುವ ಸಣ್ಣ ಅವಮಾನಗಳಿಗೂ ತತ್ತರಿಸಿಹೋಗುವ ನಾವು, ಈಕಾಗೆಯಿಂದ ಕಲಿಯುವುದು ಬಹಳಷ್ಟಿದೆ. ಮುಖ್ಯವಾಗಿ, ನಾವು ಈ ಬದುಕನ್ನು ನೋಡುವ ರೀತಿ ಬದಲಾಗಬೇಕು.

ಅವಮಾನ, ನಿಂದನೆ ಎಂದಿಗೂ ಶಾಶ್ವತವಲ್ಲ. ಅದನ್ನು ಮೀರಿ ಬೆಳೆಯುವ ಪ್ರಯತ್ನವನ್ನು ಮಾಡುತ್ತಲೇ ಇರಬೇಕು ಎಂಬುದನ್ನು ಆ ಕಾಗೆ ಪರೋಕ್ಷವಾಗಿ ಹೇಳುತ್ತಿದೆಯೇನೋ ಅನಿಸುತ್ತದೆ. ಹೌದು, ನಾವೆಲ್ಲರೂ ಕಾಗೆಯಿಂದಕಲಿಯಬೇಕಾದ್ದು ಬಹಳಷ್ಟಿದೆ.

 

-ಸ್ವಾತಂತ್ರ ಎ.ಎನ್

Advertisement
Advertisement

Udayavani is now on Telegram. Click here to join our channel and stay updated with the latest news.

Next