ನೀರನ್ನು ಮನೆ ಬಾಗಿಲಿಗೆ ತಲುಪಿಸಿದ ತೃಪ್ತಿ ನನಗಿದೆ ಎಂದು ಸಚಿವ, ಬೀಳಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ಹೇಳಿದರು.
Advertisement
ಬೀಳಗಿ ಕ್ಷೇತ್ರದ ಕಂದಗಲ್ ಹಾಗೂ ಹೊನ್ನಿಹಾಳ ಎಲ್.ಟಿ.ಯಲ್ಲಿ ನಡೆದ ರೋಡ್ ಶೋ ಹಾಗೂ ಪ್ರಚಾರ ಸಭೆಯಲ್ಲಿ ಮತಯಾಚನೆ ಮಾಡಿ ಮಾತನಾಡಿದರು. 2008-13ರಲ್ಲಿಯೇ ಐದು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೆ ತಂದಿದ್ದೆ. ಮೊದಲನೆಯ ಹಂತದಲ್ಲಿ ನದಿಯಿಂದ ನೀರನ್ನು ತಂದು ಗ್ರಾಮಗಳಿಗೆ ತಲುಪಿಸಿದ್ದೇವು. ಈಗ ಎರಡನೆಯ ಹಂತದಲ್ಲಿ ಜಲ-ಜೀವನ್ ಮಿಷನ್ ಯೋಜನೆಯಡಿ ಮತಕ್ಷೇತ್ರದ ಎಲ್ಲ ಗ್ರಾಮಗಳ ಪ್ರತಿ ಮನೆಯ ಬಾಗಿಲವರೆಗೂ ಪೈಪ್‌ಲೈನ್ ಅಳವಡಿಸಿ ನೀರು ಪೂರೈಸುವ ಎರಡನೆಯ ಹಂತದಯೋಜನೆ ಜಾರಿಗೊಳಿಸಿದ್ದೇವೆ. ಇದು ಇಷ್ಟಕ್ಕೇ ನಿಲ್ಲಲಾರದು. ಮೂರನೇ ಹಂತದಲ್ಲಿ ಮತಕ್ಷೇತ್ರದ ಪ್ರತಿ ಮನೆಯ ಅಡುಗೆ ಮನೆಗೆ ಶುದ್ಧ ನೀರನ್ನು ದಿನದ 24 ಗಂಟೆ ತಲುಪಿಸುವ ಗುರಿ ಇದೆ ಎಂದರು.
ಕಾಂಗ್ರೇಸ್ ಅಸ್ತಿತ್ವ ಕಳೆದುಕೊಳ್ಳುತ್ತಿರುವುದು ಹಾಗೂ ಬೀಳಗಿ ಕಾಂಗ್ರೆಸ್ ಬಸ್ ಚಾಲಕ ಜೆ.ಟಿ. ಪಾಟೀಲ ಜನರ ವಿಶ್ವಾಸವನ್ನು ಕಳೆದುಕೊಂಡಿರುವುದು ಈ ಬಾರಿ ಬೀಳಗಿಯಲ್ಲಿ ಕಾಂಗ್ರೆಸ್‌ನಿಂದ ಕಾರ್ಯಕರ್ತರು ಬಿಜೆಪಿ ಕಡೆ
ಮುಖ ಮಾಡುತ್ತಿರುವುದನ್ನು ಪ್ರತಿಬಿಂಬಿಸುತ್ತದೆ. ಯಾರೇ ಪಕ್ಷದ ಸಿದ್ಧಾಂತ ಒಪ್ಪಿ, ಅಭಿವೃದ್ಧಿ ಚಿಂತನೆಗೆ ಮಹತ್ವ ಕೊಟ್ಟು ಬಿಜೆಪಿಗೆ ತುಂಬು ಮನಸ್ಸಿನಿಂದ ಬಂದರೂ ಸ್ವಾಗತಿಸುತ್ತೇನೆ ಎಂದು ಅವರು ಹೇಳಿದರು.
Related Articles
Advertisement
ಮುಖಂಡರಾದ ಮಲ್ಲಿಕಾರ್ಜುನ ಅಂಗಡಿ,ರಾಮಣ್ಣ ಕಾಳಪ್ಪಗೋಳ, ಬಮ್ಮಯ್ಯ ಹಿರೇಮಠ, ಸಿದ್ದಪ್ಪ ಮಳೆನ್ನವರ, ಮಳಿಯಪ್ಪ ಮಳೆಯನ್ನವರ,ರಾಮನಗೌಡ ಪಾಟೀಲ, ದಾûಾಯಣಿ ಜಂಬಗಿ,ಸುಶೀಲಾಬಾಯಿ ಲಮಾಣಿ ಮುಂತಾದವರು ಉಪಸ್ಥಿತರಿದ್ದರು.
ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಬೀಳಗಿ ಕ್ಷೇತ್ರದ ಯಂಡಿಗೇರಿ ಗ್ರಾಮದ ಎಸ್.ಸಿ. ಸಮುದಾಯದ ಪ್ರಮುಖ ಮುಖಂಡರಾದ ಹಣಮಂತ ಮಾದರ, ಫಕೀರಪ್ಪ ಮಾದರ, ಮುತ್ತೆಪ್ಪ ಮಾದರ, ಬಸವರಾಜ ಮಾದರ, ತಿಪ್ಪಣ್ಣ ಮಾದರ, ಯಲ್ಲಪ್ಪ ಮಾದರ, ಲಕ್ಕವ್ವ ಮಾದರ ಹಾಗೂ ಜಕನವ್ವ ಮಾದರ ಸೇರಿ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಮುರುಗೇಶ ನಿರಾಣಿಯವರ ಅಭಿವೃದ್ದಿ ಕಾರ್ಯಕ್ರಮಗಳನ್ನು ಮೆಚ್ಚಿ ಲಕ್ಷ್ಮಣ ನಿರಾಣಿ, ಕಲ್ಮೇಶ ಗೊಸಾರ, ಹೂವಪ್ಪ ರಾಠೊಡ, ಸತೀಶ ಮಾದರ ಹಾಗೂ ಮಹೇಶ ಮಾದರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾದರು. ನಾಳೆ ಪ್ರಧಾನಿ ಮೋದಿ
ಚುನಾವಣಾ ಪ್ರಚಾರದ ಅಂಗವಾಗಿ ಬಾದಾಮಿಯಲ್ಲಿ ನಿಗದಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಬಹಿರಂಗ ಪ್ರಚಾರ ಸಭೆಯ ದಿನ ಬದಲಾವಣೆಯಾಗಿದ್ದು, ಮೇ 7ರ ಬದಲಾಗಿ ಮೇ 6ರಂದು ಆಗಮಿಸಲಿದ್ದಾರೆ. ಮೇ 6ರಂದು ಸಂಜೆ 4ಕ್ಕೆ ಬಾದಾಮಿ-ಬನಶಂಕರಿ ರಸ್ತೆಯಲ್ಲಿರುವ ಬನಶಂಕರಿ ಲೇಔಟ್‌ನಲ್ಲಿ ಬಹಿರಂಗ ಸಭೆ ನಡೆಯಲಿದೆ. ಬಸ್ ಕಂಡಿಶನ್ ಹಾಗೂ ಚಾಲಕ ಚೆನ್ನಾಗಿದ್ದರೆ ಮಾತ್ರ ಜನ ಹತ್ತುತ್ತಾರೆ. ಹೀಗಾಗಿ ಬೀಳಗಿ ಕಾಂಗ್ರೆಸ್‌ನ ಬಸ್‌ಗೆ ಹೊಸದಾಗಿ ಜನ ಹತ್ತುವುದಿರಲಿ, ಹಳಬರು ಕೂಡ ಬಸ್ ಬಿಟ್ಟು ಕೆಳಗೆ ಇಳಿಯುತ್ತಿದ್ದಾರೆ. ರಾಜ್ಯ ಹಾಗೂ ದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಬೀಳಗಿ ಕಾಂಗ್ರೆಸ್‌ನ ಬಸ್ ಚಾಲಕ ಜೆ.ಟಿ. ಪಾಟೀಲರು, ಜನರ ವಿಶ್ವಾಸ
ಕಳೆದುಕೊಂಡಿದ್ದಾರೆ. ಹೀಗಾಗಿ ಈ ಬಾರಿ ಬೀಳಗಿಯಲ್ಲಿ ಕಾಂಗ್ರೆಸ್‌ನಿಂದ ಕಾರ್ಯಕರ್ತರು ಬಿಜೆಪಿ ಕಡೆ
ಮುಖ ಮಾಡುತ್ತಿರುವುದನ್ನು ಪ್ರತಿಬಿಂಬಿಸುತ್ತದೆ.
-ಮುರುಗೇಶ ನಿರಾಣಿ
ಬೀಳಗಿ ಬಿಜೆಪಿ ಅಭ್ಯರ್ಥಿ