Advertisement

ದೇಶದ ಪೂರ್ವದಲ್ಲಿ ಮಳೆ ಕೊರತೆ

10:12 AM Jul 23, 2018 | |

ಹೊಸದಿಲ್ಲಿ: ನಾಲ್ಕು ತಿಂಗಳ ಮಳೆ ದೇಶದ ಹಲವು ಭಾಗಗಳಲ್ಲಿ ಪ್ರವಾಹ ಸನ್ನಿವೇಶವನ್ನು ನಿರ್ಮಿಸಿದ್ದರೂ ಬಿಹಾರ ಮತ್ತು ಝಾರ್ಖಂಡ್‌ ಸೇರಿದಂತೆ ಪೂರ್ವ ಭಾರತದಲ್ಲಿ ಶೇ. 40ರಷ್ಟು ಮಳೆ ಕೊರತೆ ಉಂಟಾಗಿದೆ. ಒಟ್ಟಾರೆಯಾಗಿ ದೇಶದ ಕಾಲು ಭಾಗದಷ್ಟು ಭೂಪ್ರದೇಶಕ್ಕೆ ಮಳೆ ಕೊರತೆಯಾಗಿದೆ ಎಂದು ಹವಾಮಾನ ಇಲಾಖೆಯ ದತ್ತಾಂಶದಿಂದ ತಿಳಿದುಬಂದಿದೆ. ಬಿಹಾರದಲ್ಲಿ ಶೇ. 48ರಷ್ಟು ಮಳೆ ಕೊರತೆಯಾಗಿದ್ದರೆ ಉತ್ತರ ಪ್ರದೇಶ ಹಾಗೂ ಝಾರ್ಖಂಡ್‌ನ‌ಲ್ಲಿ ಶೇ. 46 ಮತ್ತು ಶೇ. 42ರಷ್ಟು ಕೊರತೆಯಾಗಿದೆ. ದೇಶದ ಒಟ್ಟಾರೆ ಮಳೆ ಕೊರತೆ ಶೇ. 3 ಆಗಿದೆ.

Advertisement

ಉತ್ತರ ಮತ್ತು ಈಶಾನ್ಯ ಭಾರತದಲ್ಲಿ ಒಟ್ಟಾರೆ ಶೇ. 34ರಷ್ಟು ಹಾಗೂ ವಾಯವ್ಯ ಭಾಗದಲ್ಲಿ ಶೇ.9ರಷ್ಟು ಮಳೆ ಕೊರತೆಯಾಗಿದೆ. ಇನ್ನೊಂದೆಡೆ ದಕ್ಷಿಣ ಹಾಗೂ ಕೇಂದ್ರ ಭಾರತದಲ್ಲಿ ಶೇ. 15 ಮತ್ತು ಶೇ.16ರಷ್ಟು ಹೆಚ್ಚು ಮಳೆ ಕಂಡುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next