Advertisement

ಮಧ್ಯಾಹ್ನದ ಬಳಿಕ ಜನದಟ್ಟಣೆ ಕಡಿಮೆ

09:34 PM May 06, 2020 | Sriram |

ಕುಂದಾಪುರ: ಲಾಕ್‌ಡೌನ್‌ನಲ್ಲಿ ಸಡಿಲಿಕೆ ಮಾಡಲಾಗಿದ್ದು, ಬೆಳಗ್ಗೆ 7 ರಿಂದ ಸಂಜೆ 7 ಗಂಟೆಯವರೆಗೆ ಖರೀದಿ, ಕೆಲಸಗಳ ಸಲುವಾಗಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದರೂ, ಕುಂದಾಪುರದ ಗ್ರಾಮೀಣ ಭಾಗದಲ್ಲಿ ಮಧ್ಯಾಹ್ನದ ಬಳಿಕ ವಾಹನ ದಟ್ಟಣೆ ಕಡಿಮೆಯಿದ್ದು, ಜನ ಸಂಚಾರವೂ ವಿರಳವಾಗಿದೆ.

Advertisement

ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 7 ರಿಂದ 1 ಗಂಟೆಯವರೆಗೆ ಇದ್ದ ಸಮಯ ಮಿತಿಯನ್ನು ಈಗ ಸಂಜೆ 7 ಗಂಟೆಯವರೆಗೆ ವಿಸ್ತರಣೆ ಮಾಡಲಾಗಿದ್ದರೂ, ಹೆಚ್ಚಿನ ಜನ ಮೊದಲು ನಿಗದಿಯಾಗಿದ್ದ 11 ಗಂಟೆಯವರೆಗಿನ ಸಮಯ ಮಿತಿಗೆ ಒಗ್ಗಿಕೊಂಡಿದ್ದಾರೆ. ಹಾಗಾಗಿ ಗ್ರಾಮೀಣ ಭಾಗಗಳಾದ ಗಂಗೊಳ್ಳಿ, ಹೆಮ್ಮಾಡಿ, ತಲ್ಲೂರು, ಶಂಕರನಾರಾಯಣ, ಆಜ್ರಿ, ಹಾಲಾಡಿ, ಗೋಳಿ ಯಂಗಡಿ, ಬೆಳ್ವೆ, ಮರವಂತೆ, ತ್ರಾಸಿ, ನೇರಳ ಕಟ್ಟೆ, ಹಟ್ಟಿಯಂಗಡಿ, ಕೆರಾಡಿ, ಸೇರಿದಂತೆ ಎಲ್ಲ ಕಡೆ 11 ಗಂಟೆ ಬಳಿಕ ಜನಸಂಚಾರ ಇಳಿಮುಖಗೊಂಡಿದೆ.

ಬೆಳಗ್ಗೆ ಬಹುತೇಕ ಎಲ್ಲ ಅಂಗಡಿ, ಎಲೆಕ್ಟ್ರಾನಿಕ್ಸ್‌, ಚಿನ್ನಾಭರಣ ಮಳಿಗೆಗಳು, ಬಟ್ಟೆ ಅಂಗಡಿಗಳು, ಹೊಟೇಲ್‌ಗ‌ಳು ತೆರೆದುಕೊಂಡಿದ್ದು, ಜನ ಸಂಚಾರ ಕಡಿಮೆ ಇರುವುದರಿಂದ ವ್ಯಾಪಾರ – ವಹಿವಾಟು ಕೂಡ ಕಡಿಮೆ ಇರುತ್ತದೆಯೆಂದು ಕೆಲವರು ಅಂಗಡಿಗಳನ್ನು ಮಧ್ಯಾಹ್ನವೇ ಮುಚ್ಚುತ್ತಿರುವುದು ಕಂಡು ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next