Advertisement

ಕುಷ್ಠರೋಗ ಮಾಹಿತಿ, ಮತದಾನ ಜಾಗೃತಿ

10:16 PM Mar 29, 2019 | sudhir |

ಶಿರ್ವ: ಶಿರ್ವ ಸಮುದಾಯ ಆರೋಗ್ಯ ಕೇಂದ್ರ ಮತ್ತು ಶಿರ್ವ ಗ್ರಾ. ಪಂ. ಸಹಯೋಗದೊಂದಿಗೆ ಕುಷ್ಠ ರೋಗದ ಬಗ್ಗೆ ಮಾಹಿತಿ ಮತ್ತು ಮತದಾನ ಜಾಗೃತಿ ಅಭಿಯಾನವು ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ| ಸಂತೋಷ್‌ ಕುಮಾರ್‌ ಬೈಲೂರು ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯಿತು.

Advertisement

ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿ ಕಾರಿ ಸುರೇಂದ್ರ ಚಿಂಬಳ್ಕರ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕುಷ್ಠರೋಗ ಸುಮಾರು 25 ತಲೆಮಾರಿನ ಹಿಂದಿನ ಕಾಯಿಲೆಯಾಗಿದ್ದು ಒಂದು ಸಲ ರೋಗ ಬಂದು ಸೂಕ್ತ ಚಿಕಿತ್ಸೆ ದೊರೆಯಲಿದ್ದರೆ ದೇಹದ ನರಗಳನ್ನು ನಾಶ ಮಾಡಿ ಅಂಗವಿಕಲತೆ ಉಂಟಾಗುತ್ತದೆ. ಇದಕ್ಕೆ ಸಕಾಲದಲ್ಲಿ ವೈದ್ಯರ ಚಿಕಿತ್ಸೆ ಪಡೆದುಕೊಂಡಲ್ಲಿ ಅಂಗವಿಕಲತೆಯಿಲ್ಲದೆ ರೋಗ ಗುಣಮುಖವಾಗುತ್ತದೆ ಎಂದರು.

ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ| ಸಂತೋಷ್‌ ಕುಮಾರ್‌ ಬೈಲೂರು ಕಾಯಿಲೆ ಸಂಪೂರ್ಣ ಗುಣಪಡಿಸುವ, ನಿಯಂತ್ರಿಸುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ಕೈಗೊಂಡು ಬೇರೆಯವರಿಗೆ ಮನವರಿಕೆ ಮಾಡಬೇಕಾಗಿದೆ ಎಂದರು. ಮತದಾನದ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಿ ಅವರು ಪ್ರಜ್ಞಾವಂತ ನಾಗರಿಕರು ಸದೃಢ ಸಮಾಜ ನಿರ್ಮಿಸಲು ಮತ ಚಲಾಯಿಸಿ ಅರ್ಹ ಅಭ್ಯರ್ಥಿಯನ್ನು ಆರಿಸಲು ಪ್ರೇರೇಪಿಸಬೇಕಾಗಿದೆ ಎಂದರು.

ಶಿರ್ವ ಗ್ರಾ.ಪಂ. ಕಾರ್ಯದರ್ಶಿ ಮಂಗಳಾ, ಅರಿವಳಿಕೆ ತಜ್ಞ ಡಾ| ಗಣಪತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮುದಾಯ ಆರೋಗ್ಯ ಕೇಂದ್ರದ ಸಿಬಂದಿ, ಶಿರ್ವ ಗ್ರಾ.ಪಂ. ಸಿಬಂದಿ, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ದಿನೇಶ್‌ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next