Advertisement

ಕುಷ್ಠ ರೋಗ ಅರಿವು ಆಂದೋಲನ

03:18 PM Feb 01, 2020 | Suhan S |

ಭಟ್ಕಳ: ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಕಿತ್ತೂರು ಚೆನ್ನಮ್ಮ ವಸತಿ ಶಾಲೆ ಪುರವರ್ಗದಲ್ಲಿ ಸ್ಪರ್ಶ ಕುಷ್ಠ ರೋಗ ಅರಿವು ಆಂದೋಲನ ನಡೆಯಿತು.

Advertisement

ಕಾರ್ಯಕ್ರಮ ಉದ್ಘಾಟಿಸಿದ ತಾಪಂ ಸದಸ್ಯ ಹನುಮಂತ ನಾಯ್ಕ ಕುಷ್ಠ ರೋಗದಂತಹ ಸಾಂಕ್ರಾಮಿಕ ರೋಗ ಗಳನ್ನು ತಡೆಯುವಲ್ಲಿ ವಿದ್ಯಾರ್ಥಿಗಳಪಾತ್ರ ಅತಿ ಮುಖ್ಯವಾಗಿದೆ ಎಂದರು. ಮುಖ್ಯ ಅತಿಥಿ ತಹಶಿಲ್ದಾರ್‌ ವಿ.ಪಿ. ಕೊಟ್ರಳ್ಳಿ ಮಾತನಾಡಿ ಪ್ರಸ್ತುತ ವೈದ್ಯಕೀಯ ಕ್ಷೇತ್ರ ಸಾಕಷ್ಟು ಮುಂದುವರೆದಿದ್ದು ಕುಷ್ಠ ರೋಗದಂತ ಮಾರಣಾಂತಿಕ ಕಾಯಿಲೆಗಳಿಗೂ ಕೂಡ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧೋಪಚಾರ ಲಭ್ಯವಿದೆ.  ಅಂತಹ ರೋಗಗಳು ಕಾಣಿಸಿಕೊಂಡಲ್ಲಿ ಭಯ ಪಡದೆ ಲಭ್ಯವಿರುವ ಔಷಧದ ಸದುಪಯೋಗ ಪಡೆದುಕೊಳ್ಳಲು ವಿದ್ಯಾರ್ಥಿಗಳು ಸಾರ್ವಜನಿಕರಿಗೆ ತಿಳಿವಳಿಕೆ ನೀಡಬೇಕು ಎಂದರು.

ಜಿಲ್ಲಾರೋಗ ವಾಹಕ, ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕ್ಯಾಪ್ಟನ್‌ ಡಾ| ರಮೇಶರಾವ್‌ ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಕುರಿತುಮಾತನಾಡಿದರು. ಟಿಎಚ್‌ಒ ಡಾ| ಮೂರ್ತಿರಾಜ್‌ ಭಟ್‌ ಕುಷ್ಠರೋಗ ಉಪನ್ಯಾಸ ನೀಡಿದರು. ಹಿರಿಯ ಆರೋಗ್ಯ ಸಹಾಯಕ ಈರಯ್ಯ ದೇವಾಡಿಗ ಪ್ರಾಸ್ತಾವಿಕ ಮಾತನಾಡಿದರು. ಪ್ರಾಂಶುಪಾಲ ರಮೇಶ ನಾಯ್ಕ ಸ್ವಾಗತಿಸಿದರು. ವಿಜಯ ಮೊಗೇರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next