ಹುಣಸೂರು : ಜನ ಜಾನುವಾರುಗಳನ್ನು ಕಾಡುತ್ತಿದ್ದ ಸುಮಾರು 3 ವರ್ಷದ ಹೆಣ್ಣು ಚಿರತೆ ಕೊನೆಗೂ ಬೋನಿನಲ್ಲಿ ಬಂಧಿಯಾಗಿದೆ.
ಹುಣಸೂರು ತಾಲೂಕಿನ ವಡ್ಡಂಬಾಳು ಗ್ರಾಮದ ಸಿದ್ದರಾಜು ಅವರ ಜಮೀನಿನಲ್ಲಿ ಚಿರತೆ ಬೋನಿಗೆ ಬಿದ್ದಿದೆ.
ನಾಗರಹೊಳೆ ಉದ್ಯಾನವನದಂಚಿನ ಲಕ್ಷ್ಮಣ ತೀರ್ಥ ನದಿ ದಾಟಿ ಗ್ರಾಮದತ್ತ ಬರುತ್ತಿದ್ದ ಚಿರತೆಯು ಕೆಲವು ದಿನಗಳಿಂದ ಬೀದಿನಾಯಿ, ಕೋಳಿ, ಜಾನುವಾರುಗಳನ್ನು ಕೊಂದು ಹಾಕುತ್ತಿತ್ತು.
ಈ ಬಗ್ಗೆ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಸ್ಥಳ ಪರಿಶೀಲನೆ ನಡೆಸಿದ ಅರಣ್ಯಾಧಿಕಾರಿಗಳು ಸಿದ್ದರಾಜುರವರ ಜಮೀನಿನಲ್ಲಿ ಬೋನ್
ಇರಿಸಿ ನಾಯಿ ಕಟ್ಟಿ ಹಾಕಿದ್ದರು.
Related Articles
ಶನಿವಾರ ರಾತ್ರಿ ನಾಯಿ ಬೇಟೆಯಾಡುವ ಆಸೆಯಿಂದ ಬೋನ್ ಹೊಕ್ಕಿದ ಚಿರತೆಯು ಬೋನಿನಲ್ಲಿ ಬಂಧಿಯಾಗಿದೆ.
ಚಿರತೆ ಸೆರೆಯಾಗಿರುವ ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಸಿಕ್ಕ ಚಿರತೆಯನ್ನು ನಾಗರಹೊಳೆ ಉದ್ಯಾನವನದ ಮೇಟಿಕುಪ್ಪೆ ವಲಯಕ್ಕೆ ಸಾಗಿಸಿ ಬಂಧಮುಕ್ತಗೊಳಿಸಿದ್ದಾರೆ.
ಹುಣಸೂರು :ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಢಿಕ್ಕಿ: ಡಿಎಸ್‌ಎಸ್ ಮುಖಂಡ ಸೇರಿ ಇಬ್ಬರು ಸಾವು