Advertisement

ಹುಣಸೂರು: ಕಾಡಿನಿಂದ ನಾಡಿಗೆ ಬಂದು ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

11:52 AM Dec 01, 2020 | Mithun PG |

ಹುಣಸೂರು: ಕಾಡಿನಿಂದ ನಾಡಿಗೆ ಬಂದ ಚಿರತೆಯೊಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಘಟನೆ ಚಿಕ್ಕಾಡಿಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ಹುಣಸೂರು ತಾಲ್ಲೂಕಿನ ಚಿಕ್ಕಾಡಿಗನ ಹಳ್ಳಿ ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ಈ ಚಿರತೆ, ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ಕೊಂದು ಹಾಕುತ್ತಿತ್ತು ಎನ್ನಲಾಗುತ್ತಿತ್ತು.

ಈ ಹಿನ್ನಲೆಯಲ್ಲಿ ಗ್ರಾಮದ ರೈತ ಚಂದ್ರಶೇಖರ ಅವರ ಜಮೀನಿನಲ್ಲಿ ಬೋನು ಇರಿಸಲಾಗಿತ್ತು. ಈ ವೇಳೆ ನಾಯಿ ತಿನ್ನಲು ಬಂದ ಸುಮಾರು 3 ವರ್ಷದ ಹೆಣ್ಣು  ಚಿರತೆ ಬೋನಿಗೆ ಸಿಲುಕಿದ್ದು. ಚಿರತೆಯನ್ನು ಮತ್ತೆ ನಾಗರಹೊಳೆ ಅರಣ್ಯಕ್ಕೆ ಕೊಂಡೊಯ್ದು ಬಿಡಲಾಗಿದೆ ಆರ್.ಎಫ್.ಓ. ಸಂದೀಪ್ ತಿಳಿಸಿದ್ದಾರೆ.

ಇದನ್ನೂ ಓದಿ: ತಳ್ಳಾಟದಿಂದ ಪುರಸಭೆ ಸದಸ್ಯೆಗೆ ಗರ್ಭಪಾತ: ಏಳು ವರ್ಷದ ಬಳಿಕ ಗರ್ಭಿಣಿಯಾಗಿದ್ದ ಸದಸ್ಯೆ

Advertisement

ಚಿಕ್ಕಾಡಿಗನಹಳ್ಳಿ ಗ್ರಾಮದ ಸುತ್ತ ಮುತ್ತ ಸಾಕಷ್ಟು ಚಿರತೆಗಳು ಇರುವ ಆತಂಕ ವ್ಯಕ್ತವಾಗಿದ್ದು, ಮತ್ತೆ ಬೋನು ಇರಿಸುವಂತೆ  ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕೋವಿಡ್‌ ಔಷಧ ನಿಧಿಗಾಗಿ ಯುವಕರ ಬೈಕ್‌ ಯಾತ್ರೆ : 3 ಕೋಟಿ ರೂ. ಸಂಗ್ರಹದ ಗುರಿ

Advertisement

Udayavani is now on Telegram. Click here to join our channel and stay updated with the latest news.

Next