Advertisement
ರವಿವಾರ ಸಂಜೆ ಮಕ್ಕಳು ಆಡುತ್ತಿ ದ್ದಾಗ ಚಿರತೆಯನ್ನು ಹೋಲುವ ಪ್ರಾಣಿ ಯೊಂದನ್ನು ದೂರದಿಂದ ನೋಡಿದ್ದರು. ನಿಧಿ ಶೆಟ್ಟಿ ಎಂಬ ಬಾಲಕಿ ಮೊಬೈಲ್‌ನಲ್ಲಿ ವೀಡಿಯೋ ಸೆರೆಹಿಡಿದಿದ್ದು, ಅದು ಅಸ್ಪಷ್ಟವಾಗಿ ಕಾಣಿಸುತ್ತಿತ್ತು. ಈ ಬಗ್ಗೆ ಸ್ಥಳೀಯರುಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿ ಹೋಗಿದ್ದರು. ಸೋಮವಾರ ಬೆಳಗ್ಗೆ ಮತ್ತೆ ಪರಿಶೀಲನೆನಡೆಸಿದ್ದು, ಹೆಜ್ಜೆ ಗುರುತು ಆಧಾರದಲ್ಲಿ ಅದು ಚಿರತೆಯೇ ಎಂದು ಖಚಿತಪಡಿಸಿದ್ದರು. ಆದರೆ ದಿನವಿಡೀ ಕಾರ್ಯಾಚರಣೆ ನಡೆಸಿದರೂ ಸುಳಿವು ಸಿಕ್ಕಿರಲಿಲ್ಲ.
Related Articles
Advertisement
ಬಜಪೆಯಿಂದ ಬಂತೇ?ಕಳೆದ ಕೆಲವು ಸಮಯದಿಂದ ಬಜಪೆ, ಕೆಂಜಾರು ಪ್ರದೇಶದಲ್ಲಿ ಮೂರು ಚಿರತೆಗಳು ಕಾಣಿಸುತ್ತಿವೆ. ಕೆಲವು ಮನೆ ಗಳಲ್ಲಿದ್ದ ನಾಯಿ, ಕೋಣ, ದನವನ್ನು ಬೇಟೆ ಯಾಡಿವೆ. ಅರಣ್ಯ ಇಲಾಖೆ ಅಧಿ ಕಾರಿಗಳು ಮೂರ್‍ನಾಲ್ಕು ಕಡೆಗಳಲ್ಲಿ ಬೋನು ಇಟ್ಟರೂ ಬೋನಿಗೆ ಬಿದ್ದಿಲ್ಲ. ಕೆಲವು ದಿನಗಳ ಹಿಂದೆ ಪಚ್ಚನಾಡಿ ಪರಿಸರದಲ್ಲಿ ಚಿರತೆ ಕಂಡುಬಂದ ಬಗ್ಗೆ ಸ್ಥಳೀಯರು ಇಲಾಖೆಗೆ ಮಾಹಿತಿ ನೀಡಿದ್ದರು. ಪಚ್ಚನಾಡಿ ಕಡೆಯಿಂದ ಗುಡ್ಡ ಪ್ರದೇಶ ಮೂಲಕ ಮರೋಳಿಗೆ ಬಂದಿರುವ ಶಂಕೆ ಇದೆ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು. ಈ ಹಿಂದೆಯೂ ಬಂದಿತ್ತು
2005ರಲ್ಲಿ ನಗರದ ಬಾವುಟ ಗುಡ್ಡೆ ಯಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಅರಣ್ಯ ಅಧಿಕಾರಿಗಳು 4 ಗಂಟೆಗಳ ಕಾರ್ಯಾ ಚರಣೆ ನಡೆಸಿ ಚಿರತೆಯನ್ನು ಸೆರೆಹಿಡಿದ್ದರು. ಕಳೆದ ವರ್ಷ ಸುರತ್ಕಲ್ ಬಳಿ ಎಂಆರ್‌ಪಿಎಲ್ ಪರಿಸರದಲ್ಲಿ ಚಿರತೆ ಯೊಂದು ಆತಂಕ ಸೃಷ್ಟಿಸಿತ್ತು. ಅರಣ್ಯ ಇಲಾಖೆ ಹಾಗೂ ಪಿಲಿಕುಳದ ತಂಡ ಕುತ್ತೆತ್ತೂರು ಸಮೀಪ ಸೆರೆಹಿಡಿದಿತ್ತು. ಕಳೆದ ಮೇ 5ರಂದು ಮಂಗಳೂರು ನಗರದ ಕುದ್ರೋಳಿ, ಮಣ್ಣಗುಡ್ಡ ವ್ಯಾಪ್ತಿಯ ಜನನಿಬಿಡ ರಸ್ತೆಯಲ್ಲಿ ಕಾಡುಕೋಣ ದಿಢೀರ್ ಕಾಣಿಸಿಕೊಂಡು ಅಚ್ಚರಿ ಮೂಡಿಸಿತ್ತು.