Advertisement

ಗಾಲ್ಪ್ ಕೋರ್ಸ್ ನಲ್ಲಿ ಕಾಮರಾ ಕಣ್ಣಿಗೆ ಬಿತ್ತು ಚಿರತೆ: ಅರಣ್ಯ ಇಲಾಖೆಯಿಂದ ಫೋಟೊ ಬಿಡುಗಡೆ

12:34 PM Aug 09, 2022 | Team Udayavani |

ಬೆಳಗಾವಿ: ಕಳೆದ ನಾಲ್ಕು ದಿನಗಳಿಂದ ನಗರದಲ್ಲಿ ಕಣ್ಣಾಮುಚ್ಚಾಲೆ ಆಡುತ್ತಿರುವ ಚಿರತೆ ಸೋಮವಾರ ರಾತ್ರಿ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು, ಗಾಲ್ಫ್ ಕೋರ್ಸ್ ನಲ್ಲಿಯೇ ಈ ಚಿರತೆ ಇರುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Advertisement

ನಗರದ ಗಾಲ್ಫ್ ಮೈದಾನದ ಮರಗಳ ಪೊದರಿನಲ್ಲಿ ಶುಕ್ರವಾರದಿಂದ ಅವಿತು ಕುಳಿತಿರುವ ಚಿರತೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಗಾಲ್ಫ್ ಕೋರ್ಸ್ ನ ಸುತ್ತಲ ಪ್ರದೇಶದಲ್ಲಿಯೇ ಚಿರತೆಯಿದೆ. ಚಿರತೆ ಸಿಗುವವರೆಗೂ ಸಾರ್ವಜನಿಕರು ಈ ಪ್ರದೇಶದಲ್ಲಿ ಓಡಾಡಬಾರದು ಎಂದು ಡಿಎಫ್‌ಒ ಎಚ್.ಎಸ್. ಆಂಥೋನಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಮಹಿಳೆ ಜತೆ ಅಸಭ್ಯ ವರ್ತನೆ: ಪರಾರಿಯಾಗಿದ್ದ ಸ್ವಯಂಘೋಷಿತ ಬಿಜೆಪಿ ಮುಖಂಡ ತ್ಯಾಗಿ ಬಂಧನ

ಶುಕ್ರವಾರದಿಂದ ಅರಣ್ಯ ಇಲಾಖೆಯ 50ಕ್ಕೂ ಹೆಚ್ಚು ಸಿಬ್ಬಂದಿ ಚಿರತೆ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಆರು ಬೋನುಗಳನ್ನು ಅಳವಡಿಸಲಾಗಿದೆ. ಚಿರತೆಯ ಚಲನವಲನಗಳನ್ನು ಗಮನಿಸಲು ಗಾಲ್ಫ್ ಮೈದಾನದ ಮರಗಳ ಮೇಲೆ 16 ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಚಿರತೆಯನ್ನು ಆದಷ್ಟು ಬೇಗ ಸೆರೆ ಹಿಡಿಯುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next