Advertisement

Video: ಆಹಾರ ಅರಸಿ ಬಂದು ಮಡಕೆಯೊಳಗೆ ತಲೆ ಹಾಕಿ ಐದು ಗಂಟೆಗಳ ಕಾಲ ಒದ್ದಾಡಿದ ಚಿರತೆ…

09:38 AM Mar 04, 2024 | Team Udayavani |

ಮಹಾರಾಷ್ಟ್ರ: ಇತ್ತೀಚಿನ ದಿನಗಳಲ್ಲಿ ಆಹಾರ ಅರಸಿ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿರುವುದು ಸಾಮಾನ್ಯವಾಗಿದೆ ಅದೇ ರೀತಿ ಇಲ್ಲೊಂದು ಚಿರತೆ ಆಹಾರ ಅರಸಿಕೊಂಡು ಬಂದು ಲೋಹದ ಮಡಕೆಯೊಳಗೆ ತಲೆ ಹಾಕಿ ತೆಗೆಯಲು ಬಾರದೆ ಒದ್ದಾಡಿದ ಘಟನೆಯೊಂದು ಮಹಾರಾಷ್ಟ್ರದ ಧುಲೆ ಜಿಲ್ಲೆಯ ಹಳ್ಳಿಯೊಂದರಲ್ಲಿ ಬೆಳಕಿಗೆ ಬಂದಿದೆ.

Advertisement

ಏನಿದು ಘಟನೆ:
ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿರುವ ಹಳ್ಳಿಯೊಂದಕ್ಕೆ ಗಂಡು ಚಿರತೆಯೊಂದು ಆಹಾರ ಅರಸಿಕೊಂಡು ಬಂದಿದೆ ಈ ವೇಳೆ ಅಲ್ಲಿದ್ದ ಮನೆಯೊಂದರ ಹೊರಭಾಗದಲ್ಲಿ ಇದ್ದ ಲೋಹದ ಮಡಕೆಯೊಳಗೆ ಏನೋ ಆಹಾರ ಇದೆ ಎಂದು ತಲೆ ಹಾಕಿದೆ ಇದಾದ ಬಳಿಕ ಚಿರತೆಯ ತಲೆ ಲೋಹದ ಮಡಕೆಯೊಳಗೆ ಸಿಕ್ಕಿಬಿದ್ದಿದೆ ಎಷ್ಟೇ ಪ್ರಯತ್ನ ಪಟ್ಟರೂ ತಲೆಯನ್ನು ಮಡಕೆ ಒಳಗಿಂದ ತೆಗೆಯಲು ಸಾಧ್ಯವಾಗಲಿಲ್ಲ ಈ ವೇಳೆ ಮನೆ ಮಂದಿ ಏನೋ ಸದ್ದು ಆಗುತ್ತಿದೆ ಎಂದು ಬಂದು ನೋಡಿದಾಗ ಚಿರತೆ ಮಡಕೆಯೊಳಗೆ ತಲೆ ಹಾಕಿ ಒದ್ದಾಡುತ್ತಿರುವುದು ಕಂಡುಬಂದಿದೆ. ಗಾಬರಿಗೊಂಡ ಮನೆಮಂದಿ ಅಕ್ಕಪಕ್ಕದ ಜನರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಗ್ರಾಮಸ್ಥರು ಮನೆಯ ಬಳಿ ಸೇರಿದ್ದು ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಅರವಳಿಕೆ ಮದ್ದು ನೀಡಿ ಕೆಲ ಗಂಟೆಗಳ ಕಾರ್ಯಾಚರಣೆ ಬಳಿಕ ಮಡಕೆಯಿಂದ ಚಿರತೆಯ ತಲೆಯನ್ನು ಹೊರತೆಗೆಯಲಾಯಿತು.

ಅರಣ್ಯ ಇಲಾಖೆ ಚಿರತೆಯನ್ನು ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ, ಇದರಿಂದ ಸುಮಾರು ಐದು ಗಂಟೆಗಳ ಕಾಲ ಮಡಕೆಯೊಳಗೆ ತಲೆ ಹಾಕಿ ಸಿಕ್ಕಿಬಿದ್ದು ಒದ್ದಾಡುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆ ರಕ್ಷಣೆ ಮಾಡಿದ್ದಾರೆ.

 

Advertisement

Advertisement

Udayavani is now on Telegram. Click here to join our channel and stay updated with the latest news.

Next