Advertisement

ಕುಳಗೇರಿ ಕ್ರಾಸ್: ಚಿರತೆಯ ಹೆಜ್ಜೆ ಗುರುತು ಪತ್ತೆ, ಗ್ರಾಮಸ್ಥರಲ್ಲಿ ಆತಂಕ

10:12 PM Jul 09, 2022 | Team Udayavani |

ಕುಳಗೇರಿ ಕ್ರಾಸ್: ಜಿ.ಬಾಗಲಕೋಟೆ ಜಿಲ್ಲೆಯ ಗಡಿ ಭಾಗದಲ್ಲಿರುವ ಮಲಪ್ರಭಾ ನದಿ ದಡದಲ್ಲಿನ ಸುಳ್ಳ ಗ್ರಾಮದ ಜಮೀನೊಂದರಲ್ಲಿ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಸದ್ಯ ನದಿ ದಡದಲ್ಲಿರುವ ಗ್ರಾಮಗಳಲ್ಲಿ ದ್ವನಿವರ್ಧಕ ಮೂಲಕ ಗ್ರಾಪಂ ಯವರು ಜಾಗೃತಿ ಮೂಡಿಸುತ್ತಿದ್ದಾರೆ.

Advertisement

ಬಾದಾಮಿ ತಾಲೂಕಿನ ಸುಳ್ಳ ಗ್ರಾಮದ ಮಲಪ್ರಭಾ ನದಿಗೆ ತೆರಳುವ ಮಾರ್ಗದಲ್ಲಿ ಈ ಹೆಜ್ಜೆ ಗುರುತುಗಳು ಕಂಡು ಇದು ಚಿರತೆಯ ಗುರುತುಗಳು ಎಂದು ಭಾವಿಸಿದ ರೈತರು ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸದ್ಯ ಅರಣ್ಯ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿದ್ದು ಪರಿಶಿಲನೆ ನಡೆಸಿದರು.

ಮಲಪ್ರಭಾ ನದಿ ದಡದಲ್ಲಿರುವ ಸುಳ್ಳ, ಕಿತ್ತಲಿ, ಹೆಬ್ಬಳ್ಳಿ, ಗೋವನಕೊಪ್ಪ ಸೇರಿದಂತೆ ಬಾಗಲಕೋಟೆ ಹಾಗೂ ಗದಗ ಜಿಲ್ಲೆಯ ಹಲವಾರು ಗ್ರಾಮಗಳಲ್ಲಿನ ಜನರಿಗೆ ಎಚ್ಚರಿಕೆಯಿಂದಿರಲು ತಿಳಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳಾದ ವಿರೇಶ ಪತ್ರಿಕೆಗೆ ತಿಳಿಸಿದರು.

ತಾಲೂಕಿನ ಹಲವಾರು ಗ್ರಾಮಗಳಲ್ಲಿ ಚಿರತೆ ಇದೆ ಎಂದು ಮಾಹಿತಿ ಬಂದಿದ್ದು ಕೆಲವು ಕಡೆಗಳಲ್ಲಿ ಕ್ಯಾಮರಾ ಅಳವಡಿಸಿದ್ದೆವು. ಆದರೆ ಮಲಪ್ರಭಾ ನದಿ ದಡದಲ್ಲಿ ಇದೆ ಎಂಬ ಮಾಹಿತಿ ಬಂದಿದ್ದು ಅಲ್ಲಿಯೂ ಕ್ಯಾಮರಾ ಅಳವಡಿಸಿದ್ದು ಬೋನು ಇಟ್ಟು ಚಿರತೆಯನ್ನು ಆಕರ್ಶಿಸಲು ಬೋನಿನೊಳಗೆ ನಾಯಿಯನ್ನು ಬಿಟ್ಟು ಸಹ ವಿಕ್ಷಣೆ ಮಾಡಿದ್ದೆವೆ ಎಲ್ಲೂ ಅದರ ಸುಳಿವು ಸಿಗುತ್ತಿಲ್ಲ. ದಿನಕ್ಕೆ 70 ಕಿಮೀ ಸಂಚರಿಸುವ ಚಿರತೆ ಒಂದೆ ಕಡೆ ಇರಲು ಸಾದ್ಯವಿಲ್ಲ. ಸದ್ಯ ಕಚಿತ ಮಾಹಿತಿ ಇಲ್ಲದ ಕಾರಣ ರೈತರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ ಅರಣ್ಯ ಅಧಿಕಾರಿಗಳು.

ಇದನ್ನೂ ಓದಿ : ಕಲಬುರಗಿಯಲ್ಲಿ ಮುಂದುವರೆದ ಮಳೆ : ಹತ್ತಕ್ಮೂ ಹೆಚ್ಚು ಮನೆ ಕುಸಿತ : ಮಳೆಗೆ ಮೊದಲ ಬಲಿ

Advertisement

ನಾವು ಈಗಾಗಲೇ ಹೆಜ್ಜೆ ಗುರುತಿನ ಭಾವಚಿತ್ರವನ್ನ ನಮ್ಮ ಅಧಿಕಾರಿಗಳಿಗೆ ಕಳುಹಿಸಿದ್ದು ಅದು ಚಿರತೆಯ ಹೆಜ್ಜೆ ಗುರುತು ಅಲ್ಲ ಎಂಬ ಮಾಹಿತಿ ಬಂದಿದೆ.

ರೈತರಲ್ಲಿ ಸಾಕಷ್ಟು ನುಮಾನಗಳು ಇದ್ದುದರಿಂದ ಮಲಪ್ರಭಾ ನದಿ ಪಕ್ಕದಲ್ಲಿರುವ ರೈತರು ಗ್ರಾಮದಲ್ಲಿ ಹೊರಗೆ ಮಲಗುವುದಾಗಲಿ, ದನ-ಕರುಗಳನ್ನ ಹೊರಗೆ ಕಟ್ಟುವುದಾಗಲಿ, ಜಮಿನುಗಳಿಗೆ ಹೋಗುವಾಗಲೂ ಜಾಗೃತ ವಹಿಸುವಂತೆ ಮನವಿ ಮಾಡಲಾಗಿದೆ ಎಂದು ಬಾದಾಮಿ ವಲಯ ಅರಣ್ಯ ಅಧಿಕಾರಿ ವಿರೇಶ ಪತ್ರಿಕೆಗೆ ತಿಳಿಸಿದ ಅವರು ಸಾಮಾಜೀಕ ಜಾಲತಾನಗಳಲ್ಲಿ ಚಿರತೆಯ ಭಾವಚಿತ್ರಗಳನ್ನೊಳಗೊಂಡ ಸುಳ್ಳು ಮೆಸೆಜ್ ಹರಿ ಬಿಡುತ್ತಿದ್ದು ಇದರ ಬಗ್ಗೆ ರೈತರು ಆತಂಕ ಪಡಬಾರದು. ಗ್ರಾಮಗಳಲ್ಲಿ ಸಂಚರಿಸಿ ಇನ್ನೂ ಹೆಚ್ಚು ಜಾಗೃತಿ ವಹಿಸುವಂತೆ ಜನರಿಗೆ ಮನವಿ ಮಾಡಿಕೊಳ್ಳುತ್ತೆವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next