Advertisement
ಸ್ಥಳೀಯರಾದ ಸುನೀತಾ ಅವರ ಮನೆ ಬಳಿ ಚಿರತೆ ಕಂಡುಬಂದಿದ್ದು, ಅವರು ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ. ಕೆಲವು ಸಮಯ ಕಾರ್ಯಾಚರಣೆ ನಡೆಸಿದರೂ ಚಿರತೆ ಮತ್ತೆ ಪತ್ತೆಯಾಗಿಲ್ಲ. ಚಿರತೆ ಕಾಣಿಸಿಕೊಂಡ ಪ್ರದೇಶದ ಬಳಿ ಸದ್ಯ ಬೋನು ಇಡಲಾಗಿದೆ.
Related Articles
Advertisement
ಚಿರತೆ ನೋಡಿ ಭಯ ಆಯ್ತು !ಸ್ಥಳೀಯರಾದ ಸುನೀತಾ “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ಬುಧವಾರ ಅಪರಾಹ್ನ ಮಕ್ಕಳು ಮನೆ ಕೊಠಡಿಯಲ್ಲಿ ಆಟವಾಡುತ್ತಿದ್ದರು. ಆ ವೇಳೆ ದೊಡ್ಡ ಶಬ್ದ ಕೇಳಿಸಿತು. ಕೂಡಲೇ ಮಕ್ಕಳು ನನ್ನನ್ನು ಕರೆದರು. ಮನೆಯ ಹೊರಗಡೆ ನೋಡುವಾಗ ರಬ್ಬರ್ ತೋಟದ ಕಡೆಗೆ ಚಿರತೆ ಹೋಗುತ್ತಿತ್ತು. ಚಿರತೆಯ ಹಿಂಬದಿ ನನಗೆ ಕಾಣಿಸಿದ್ದು, ಕೂಡಲೇ 112 ನಂಬರ್‌ಗೆ ಕರೆ ಮಾಡಿದೆ. ತತ್‌ಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು. ರಬ್ಬರ್ ತೋಟದ ಬಳಿ ಪೊದೆ-ಗಿಡ ಗಂಟಿಗಳು ಬೆಳೆದಿದ್ದು, ಆ ಕಡೆ ಹೋಗಿರಬಹುದು ಎಂಬ ಸಂಶಯ ಇದೆ’ ಎನ್ನುತ್ತಾರೆ.