Advertisement

ಧಾರವಾಡ:  ಕಬ್ಬೇನೂರು ತುಪ್ಪರಿ ಹಳ್ಳದ ಬಳಿಚಿರತೆಯ ಹೆಜ್ಜೆ ಗುರುತು ಪತ್ತೆ

02:02 PM Sep 23, 2021 | Team Udayavani |

ಧಾರವಾಡ: ಕವಲಗೇರಿ ಗ್ರಾಮದ ಸುತ್ತಮುತ್ತ ಕಾಣಿಸಿಕೊಂಡಿದ್ದ ಚಿರತೆ ಇದೀಗ ತಾಲೂಕಿನ ಹಾರೋಬೆಳವಡಿ ಗ್ರಾಪಂ ವ್ಯಾಪ್ತಿಯ ಕಬ್ಬೇನೂರು ಗ್ರಾಮದ ತುಪ್ಪರಿಹಳ್ಳದ ದಡದಲ್ಲಿ ಕಂಡು ಬಂದಿದ್ದು, ಅದರ ಹೆಜ್ಜೆ ಗುರುತು ಪತ್ತೆಯಾಗಿದೆ.

Advertisement

ತುಪ್ಪರಿ ಹಳ್ಳದ ಅಸುಪಾಸಿನ ಹೊಲದಲ್ಲಿ ಕೆಲವರಿಗೆ ಕಾಣಿಸಿಕೊಂಡಿದೆ. ಈ ಸುದ್ದಿ ಹಬ್ಬುತ್ತಿದ್ದಂತೆಯೇ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಹಾರೋಬೆಳವಡಿ ಗ್ರಾಪಂ ಪಿಡಿಒ ಎ.ಎಚ್‌. ಮನಿಯಾರ್‌ ಭೇಟಿ ನೀಡಿದ್ದು, ತಮ್ಮ ಸಿಬ್ಬಂದಿಗಳೊಂದಿಗೆ ಶೋಧನಾ ಕಾರ್ಯ ಕೈಗೊಂಡರು. ಸಂಜೆವರೆಗೂ ಚಿರತೆಯ ಹೆಜ್ಜೆ ಗುರುತು ಬಿಟ್ಟರೆ ಬೇರೆ ಯಾವ ಸುಳಿವೂ ಪತ್ತೆಯಾಗಿಲ್ಲ. ಆದರೆ ಚಿರತೆ ಕಾಣಿಸಿಕೊಂಡ ಸುದ್ದಿಯಿಂದ ಹಾರೋಬೆಳವಡಿ, ಕಲ್ಲೆ, ಕಬ್ಬೇನೂರು, ಉಪ್ಪಿನಬೆಟಗೇರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕ ಶುರುವಾಗಿದೆ. ತುಪ್ಪರಿ ಹಳ್ಳದ ಆಸುಪಾಸಿನಲ್ಲಿ ಚಿರತೆ ಓಡಾಡಿರುವ ಬಗ್ಗೆ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಕವಲಗೇರಿಯಲ್ಲಿ ಕಾರ್ಯಾಚರಣೆ: ಸಂಜೆ ವೇಳೆ ಮತ್ತೆ ಕವಲಗೇರಿ ಗ್ರಾಮದ ವ್ಯಾಪ್ತಿಗೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯ ಕಾರ್ಯಾಚರಣೆ ಆರಂಭಿಸಿದ್ದಾರೆ. ಗ್ರಾಮದ ಹೊರ ವಲಯದಲ್ಲಿ 20ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಕಬ್ಬೇನೂರು ಗ್ರಾಮದ ತುಪ್ಪರಿ ಹಳ್ಳದ ದಡದಲ್ಲಿ ಸಿಕ್ಕಿರುವ ಹೆಜ್ಜೆ ಗುರುತು ಸ್ಪಷ್ಟವಾಗಿಲ್ಲ. ಇದಲ್ಲದೇ ಇಡೀ ದಿನ ಕಾರ್ಯಾಚರಣೆ ಕೈಗೊಂಡರೂ ಬೇರೆ ಸುಳಿವು ಸಿಗಲಿಲ್ಲ. ಹೀಗಾಗಿ ಮತ್ತೆ ಕವಲಗೇರಿ ಗ್ರಾಮದ ಹೊರವಲಯದಲ್ಲಿಯೇ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಎಂ.ಎನ್‌.ಉಪ್ಪಾರ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next