Advertisement

ಊರಿನ ಜನರನ್ನು ಭಯ ಹುಟ್ಟಿಸಿದ್ದ ಚಿರತೆ : ಡ್ರೋನ್‌ ಕ್ಯಾಮರಾ ಕಣ್ಣಿಗೂ ಸೆರೆಯಾಗಿಲ್ಲ

05:58 PM Jun 03, 2021 | Team Udayavani |

ಜಮಖಂಡಿ: ಕಳೆದ 6 ದಿನಗಳಿಂದ ತಾಲೂಕಿನ ಕುಂಬಾರಹಳ್ಳ ಗ್ರಾಮಸ್ಥರಲ್ಲಿ, ತಾಲೂಕಿನ ಜನತೆಯಲ್ಲಿ ಭಯ ವಾತಾವರಣ
ಮೂಡಿಸಿರುವ ಚಿರತೆಯೊಂದು ಜನರ ಕಣ್ಣು ತಪ್ಪಿಸಿ ಓಡಾಡುತ್ತಿದೆ.

Advertisement

ಚಿರತೆ ಸೆರೆಗೆ ಬೆಳಗಾವಿ ಜಿಲ್ಲೆಯಿಂದ ವಿಶೇಷ ಸುಸಜ್ಜಿತ ಅಸ್ತ್ರಗಳೊಂದಿಗೆ ಅರಣ್ಯ ಇಲಾಖೆ ರಕ್ಷಕರ ತಂಡವೊಂದು ಬುಧವಾರ
ತಾಲೂಕಿನ ಕುಂಬಾರಹಳ್ಳ ಗ್ರಾಮದ ಕಬ್ಬಿನ ಗದ್ದೆಗಳಲ್ಲಿ ಕಾರ್ಯಾಚರಣೆ ನಡೆಸಿದರೂ ಪ್ರಯೋಜನವಾಗಿಲ್ಲ. ತಾಲೂಕಿನ ಕುಂಬಾರಹಳ್ಳ ಗ್ರಾಮದ ನಿಂಗಪ್ಪ ಹೆಗಡೆ ಅವರ ತೋಟದಲ್ಲಿ ನಡೆದ ಗ್ರಾಮಸ್ಥರ ಸಭೆಯಲ್ಲಿ ಚಿರತೆಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.

ಚಿರತೆ ಸೆರೆಗೆ ಅರಣ್ಯ ಇಲಾಖೆ ರಕ್ಷಕರು ಕಳೆದ 5 ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿದೆ. ಡ್ರೋನ್‌ ಕ್ಯಾಮೆರಾ ಸಹಿತ 7 ಸ್ವಯಂ ಚಾಲಿತ ಬೋನ್‌, 13 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಚಾಣಾಕ್ಷ ಚಿರತೆ ಮಾತ್ರ ಯಾವ ಕ್ಯಾಮೆರಾದಲ್ಲಿ ಸೆರೆಯಾಗಿಲ್ಲ. ಜೊತೆಗೆ ಬೋನಿಗೆ ಬೀಳುತ್ತಿಲ್ಲ. ಕಬ್ಬಿನ ಗದ್ದೆಯಲ್ಲಿ ಚಿರತೆ ವಾಸವಾಗಿದೆ ಎಂದು ಗ್ರಾಮಸ್ಥರ ಅನುಮಾನಗಳು ಹೆಚ್ಚಾಗುತ್ತಿರುವ
ಹಿನ್ನೆಲೆಯಲ್ಲಿ ಗುರುವಾರ ಗದ್ದೆಯಲ್ಲಿ ಬೆಳೆದಿರುವ ಕಬ್ಬು ಕಟಾವು ನಡೆಯಲಿದೆ.

ಇದನ್ನೂ ಓದಿ :ಭಾರತ ಬಿಟ್ಟು ಅಮೆರಿಕ ಪರ ಆಡಲಿರುವ ಸ್ಮಿತ್‌ ಪಟೇಲ್‌

ಬೆಳಗಾವಿ ಅರಣ್ಯ ಇಲಾಖೆ ರಕ್ಷಕರ ತಂಡವೊಂದು ಶಸ್ತ್ರ ಸಜ್ಜಿತವಾಗಿ ಚಿರತೆ ಸಂಚರಿಸುವ ಬಹುತೇಕ ರಸ್ತೆಗಳಲ್ಲಿ ಹೆಚ್ಚಿನ ನಿಗಾ
ವಹಿಸಿದೆ. ಚಿರತೆ ಕಂಡು ಬಂದರೇ ಅರಳಿಕೆ ಅಸ್ತ್ರ ಪ್ರಯೋಗಿಸುವ ಸಿದ್ಧತೆ ನಡೆದಿದೆ. ಬುಧವಾರ ರಾತ್ರಿ ನಡೆಯಲಿರುವ ಕಾರ್ಯಾಚರಣೆಯಲ್ಲಿ ಚಿರತೆ ಸೆರೆ ಹಿಡಿಯುವ ಲೆಕ್ಕಾಚಾರದಲ್ಲಿ ಅಧಿಕಾರಿಗಳು ಮಗ್ನರಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next