Advertisement
ಶುಕ್ರವಾರ ರಾತ್ರಿ 11.20ರ ಸುಮಾರಿಗೆ ಮಣಿಪಾಲ ಉಪೇಂದ್ರ ಪೈ ಸರ್ಕಲ್ ಕೆಳಗಿನ ಮಾರ್ಗದಲ್ಲಿ ಸಿಗುವ ಶಾಂಭವಿ ಅಪಾರ್ಟ್‌ಮೆಂಟ್‌ನ ಬಲಬದಿಯ “ಅಮೂಲ್ಯ ನೆಸ್ಟ್’ ಮನೆಯ ನಾಯಿ ರಾತ್ರಿ ಬೊಗಳಿದರೂ ಮನೆ ಮಂದಿ ಗಂಭೀರವಾಗಿ ಪರಿಗಣಿಸಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ನಾಯಿಯ ಶಬ್ದ ನಿಂತಿತು. ಆದರೆ ಕ್ಲೈಮ್ಯಾಕ್ಸ್ ನಲ್ಲಿ “ರಾಣಿ’ ಚಿರತೆಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ರಾತ್ರಿಯಿಡೀ ಕಣ್ಮರೆಯಾಗಿದ್ದ ರಾಣಿ ಬೆಳಗ್ಗೆ ಮನೆ ಮುಂದೆ ಹಾಜರಿತ್ತು.
Related Articles
Advertisement
ಆತಂಕದ ಸ್ಥಿತಿಜಿಲ್ಲಾಧಿಕಾರಿ ಕಟ್ಟಡದ ಕೆಳಭಾಗ, ಪೆರಂಪಳ್ಳಿ ಸುತ್ತಮುತ್ತಲೂ ದಟ್ಟ ಅರಣ್ಯ ವಿದ್ದು, ಹಲವು ಮನೆಗಳಿವೆ. ಆಹಾರಕ್ಕೆ ಹೊಂಚುಹಾಕುತ್ತಾ ರಾತ್ರಿ ವೇಳೆ ಆಗಮಿಸುವ ಚಿರತೆಗೆ ಎದುರು ಸಿಕ್ಕಿದರೆ ಅವರ ಪಾಡೇನೂ ಎಂಬುದು ಪ್ರಶ್ನೆ. ಈ ಬಗ್ಗೆ ಅರಣ್ಯ ಇಲಾಖೆಗೂ ಮಾಹಿತಿ ಇದ್ದು, ಕೆಮರಾ ಹಾಗೂ ಬೋನುಗಳನ್ನು ಇರಿಸಿದರೆ ಉತ್ತಮ ಎಂಬುದು ಸಾರ್ವಜನಿಕರ ಅನಿಸಿಕೆ. ಚಿರತೆ ಎಲ್ಲಿ ಹೋಗಿರಬಹುದು?
ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡು ಬಂದಂತೆ ಹೆದ್ದಾರಿ ಮಾರ್ಗದ ಬದಿಯ ಪೊದೆಯಿಂದ ಚಿರತೆ ಆಗಮಿಸಿದೆ. ಬಳಿಕ ಮನೆಯಲ್ಲಿ ನಾಯಿ ಬೊಗಳುತ್ತಿದ್ದುದನ್ನು ಕಂಡು ಕಾಂಪೌಂಡ್‌ನೊಳಗೆ ಹಾರಿತು. ಯಾವಾಗಲೂ ಓಡಾಡಿಕೊಂಡಿರುತ್ತಿದ್ದ ರಾಣಿ ಶನಿವಾರ ಸಂಜೆವರೆಗೂ ಮನೆ ಎದುರು ಮಲಗಿದ್ದಳು. ಮತ್ತೂಂದು ನಾಯಿಯನ್ನು ಮನೆಯ ಒಳಭಾಗದ ಲ್ಲಿಯೇ ಮಲಗಿಸುವ ಮನೆಮಂದಿ ಶನಿ ವಾರದಿಂದ ರಾಣಿಗೂ ಮನೆಯ ಒಳಗೆ ಆಶ್ರಯ ಕಲ್ಪಿಸಿದರು. ಕೆಮರಾ ಅಳವಡಿಕೆ
ಮನೆಮಂದಿ ಅರಣ್ಯ ಇಲಾಖೆಗೆ ತಿಳಿಸಿದ್ದು, ಇಲಾಖೆಯ ಸಿಬಂದಿ ಆಗಮಿಸಿ 2 ಕಡೆ ಕೆಮರಾ ಅಳವಡಿಸಿದ್ದಾರೆ. ನಾಯಿ ಯನ್ನು ಬಿಟ್ಟುಹೋದ ಚಿರತೆ ಮತ್ತೆ ಬರಬಹುದು ಎಂಬ ಊಹೆ ಇಲಾಖೆಯದ್ದು. ಎರಡು ದಿನ ಕೆಮರಾ ಇರಲಿದೆ. ಚಿರತೆ ಪತ್ತೆಯಾದರೆ ಬೋನು ಇರಿಸುವುದಾಗಿ ಇಲಾಖೆ ಸಿಬಂದಿ ತಿಳಿಸಿದ್ದಾರೆ. ಚಿರತೆ ಪ್ರತ್ಯಕ್ಷವಾದ ಜಾಗ ದಲ್ಲಿ ಕೆಮರಾ ಅಳವಡಿ ಸಿದ್ದು, ಚಲನವಲನ ಗಮನಿಸ ಲಾಗು ವುದು. ಅದು ಸ್ಥಳೀಯ ಪರಿಸರದ್ದೇ ಅಥವಾ ಬೇರೆ ಕಡೆಯದ್ದೇ ಎಂದು ತಿಳಿಯುವುದು ಮುಖ್ಯ. ಸ್ಥಳೀಯ ವಾಗಿದ್ದರೆ ಅದು ಮತ್ತೆ ಮತ್ತೆ ಬರುವ ಸಾಧ್ಯತೆಗಳೇ ಹೆಚ್ಚು. ಅದನ್ನು ಗಮನಿಸಿ ಕ್ರಮ ಕೈಗೊಳ್ಳಲಾಗುವುದು.
-ಗಣಪತಿ, ಡಿಎಫ್ಒ, ಅರಣ್ಯ ಇಲಾಖೆ, ಕುಂದಾಪುರ ವಿಭಾಗ