Advertisement

ಚಿರತೆ ಪ್ರತ್ಯಕ್ಷ : KRS ಬೃಂದಾವನಕ್ಕೆ ತೆರಳುವ ಪ್ರವಾಸಿಗರಿಗೆ ತಾತ್ಕಾಲಿಕ ನಿರ್ಬಂಧ

09:29 PM Feb 25, 2022 | Team Udayavani |

ಶ್ರೀರಂಗಪಟ್ಟಣ : ಪ್ರಸಿದ್ದ ಕೆಆರ್ ಎಸ್ ಬೃಂದಾವನದಲ್ಲಿ ಚಿರತೆಯೊಂದು ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ.

Advertisement

ಉತ್ತರ ಬೃಂದಾವನದಲ್ಲಿ ತೋಟದಲ್ಲಿ ಚಿರತೆ ಕಂಡುಬಂದಿದೆ ಆ ಹಿನ್ನಲೆಯಲ್ಲಿ, ಉತ್ತರ ಬೃಂದಾವನಕ್ಕೆ ತೆರಳಿದ್ದ ಪ್ರವಾಸಿಗರನ್ನು ಕೆ.ಎಸ್.ಐ.ಎಫ್ ಪೊಲೀಸ್ ಸಿಬ್ಬಂದಿಗಳು ವಾಪಸ್ಸು ಕಳುಹಿಸಿ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕ ನಿರ್ಭಂದಿಸಿದೆ.

ಗಸ್ತಿನಲ್ಲಿದ್ದ ಪೊಲೀಸರಿಗೆ ಚಿರತೆ ಕಂಡು ಬಂದಿದೆ, ಈ ವೇಳೆ ಅರಣ್ಯ ಇಲಾಖೆಗೆ ಕಾವೇರಿ ನೀರಾವರಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ , ತಕ್ಷಣ ಸ್ಥಳಕ್ಕೆ ಬಂದ ಅಧಿಕಾರಿಗಳು ಪ್ರವಾಸಿಗರ ರಕ್ಷಣೆಗೆ ಮುಂದಾಗಿದ್ದು, ಚಿರತೆ ಹಿಡಿಯುವ ಪ್ರಯತ್ನದಲ್ಲಿದ್ದಾರೆ.

ಇದನ್ನೂ ಓದಿ : ಉಕ್ರೇನ್‌ʼನಲ್ಲಿ ಸಿಲುಕಿರುವ ಕನ್ನಡಿಗರನ್ನು ಏರ್‌ಲಿಫ್ಟ್‌ ಮಾಡಿ : ಸರಕಾರಕ್ಕೆ HDK ಮನವಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next