Advertisement

ಬೆಳಗಾವಿಯಲ್ಲಿ ಬೆಳ್ಳಂಬೆಳಗ್ಗೆ ಮತ್ತೆ ಪ್ರತ್ಯಕ್ಷವಾದ ಚಿರತೆ ; ಇಂದು ಶಾಲೆಗಳಿಗೆ ರಜೆ

09:25 AM Aug 22, 2022 | Team Udayavani |

ಬೆಳಗಾವಿ: ನಗರದಲ್ಲಿ 20 ದಿನಗಳಿಂದ ಕಣ್ಣಾಮುಚ್ಚಾಲೆ ಆಟ ಆಡುತ್ತಿರುವ ಚಿರತೆ ಸೋಮವಾರ ಬೆಳಗ್ಗೆ 6:15ರ ಸುಮಾರಿಗೆ ಹಿಂಡಲಗಾಕ್ಕೆ‌ ತೆರಳುವ ಡಬಲ್ ರಸ್ತೆಯಲ್ಲಿ ಪ್ರತ್ಯಕ್ಷವಾಗಿದ್ದಯ, ನಗರದಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ.

Advertisement

ಬಸ್ ಚಾಲಕನೋರ್ವ ತಮ್ಮ ಮೊಬೈಲ್‌ನಲ್ಲಿ ಚಿರತೆ ಓಡಿ ಹೋಗುತ್ತಿರುವುದನ್ನು ಸೆರೆ ಹಿಡಿದಿದ್ದಾರೆ. ಗಾಲ್ಫ್ ಮೈದಾನದ ತಂತಿ ಕಂಪೌಂಡ್ ಕಡೆಯಿಂದ‌ ಕ್ಯಾಂಪ್‌ ಪ್ರದೇಶದ ಕಡೆಗೆ ಚಿರತೆ ಓಡಿ ಹೋಗಿದೆ. ವನಿತಾ ವಿದ್ಯಾಲಯ ಬಳಿಯ ಡಬಲ್‌ ರಸ್ತೆ ದಾಟಿ ಚಿರತೆ‌ ಓಡಿ ಹೋಗಿದೆ. ಕ್ಯಾಂಪ್‌ ಪ್ರದೇಶದ ಪೊದರಿನಲ್ಲಿ ಅವಿತುಕೊಂಡಿರುವ ಸಾಧ್ಯತೆ ಇದೆ.

ಕ್ಯಾಂಪ್ ಪ್ರದೇಶದಲ್ಲಿ ಶಾಲೆಗಳಿಗೆ ಇಂದು ರಜೆ:
ಚಿರತೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಇಂದು ಸೋಮವಾರ ಆ. 22ರಂದು ಬೆಳಗಾವಿ ನಗರ ಮತ್ತು ಗ್ರಾಮೀಣ ವಲಯ ವ್ಯಾಪ್ತಿಯಲ್ಲಿನ 22 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವರಾಜ ನಾಲತವಾಡ ತಿಳಿಸಿದ್ದಾರೆ.

ಇದನ್ನೂ ಓದಿ : ಶಿವಮೊಗ್ಗ : ಕೈದಿಗೆ ನೀಡಲು ತಂದಿದ್ದ ಬಟ್ಟೆಯಲ್ಲಿ ಗಾಂಜಾ ಪತ್ತೆ : ಮೂವರ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next