ಸುಬ್ರಹ್ಮಣ್ಯ: ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಮೂಲೆಮನೆ ಎಂಬಲ್ಲಿ ನಾಯಿಯನ್ನು ಓಡಿಸಿಕೊಂಡು ಬಂದು ಶೌಚಾಲಯದಲ್ಲಿ ಬಂಧಿಯಾಗಿದ್ದ ಚಿರತೆಯು ಅರಣ್ಯ ಇಲಾಖೆಯ ಕಾರ್ಯಚರಣೆ ಸಂದರ್ಭದಲ್ಲಿ ತಪ್ಪಿಸಿಕೊಂಡು ಪರಾರಿಯಾಗಿದೆ.
ಬಿಳಿನೆಲೆ ಕೈಕಂಬ ಬಳಿಯ ಮೂಲೆಮನೆ ಜಯಲಕ್ಷ್ಮಿ ಎಂಬವರ ಮನೆಯ ಶೌಚಾಲಯದಲ್ಲಿ ಚಿರತೆ ಬಂಧಿಯಾಗಿತ್ತು. ಕಾರ್ಯಚರಣೆ ಆರಂಭಿಸಿದ ಅರಣ್ಯ ಇಲೆಖೆಯವರು ವಿವಿಧ ರೀತಿ ಪ್ರಯತ್ನ ನಡೆಸಿ ಸೆರೆ ಹಿಡಿಯಲು ಕ್ರಮ ಕೈಗೊಂಡಿದ್ದರು.
ಇದನ್ನೂ ಓದಿ:ಸುಬ್ರಹ್ಮಣ್ಯ: ನಾಯಿಯನ್ನು ಓಡಿಸಿಕೊಂಡು ನಾಡಿಗೆ ಬಂದ ಚಿರತೆ ಶೌಚಾಲಯದಲ್ಲಿ ಬಂಧಿ!
ಸುಮಾರು ಐದು ಗಂಟೆಯ ಕಾರ್ಯಚರಣೆಯಲ್ಲಿ ಬಂದೂಕು ಮೂಲಕ ಅರೆವಳಿಕೆ ನೀಡುವ ಸಂದರ್ಭದಲ್ಲಿ ಶೌಚಾಲಯದ ಮಾಡು ಒಡೆದು ಹಾರಿದ ಚಿರತೆಯು ತಪ್ಪಿಸಿಕೊಂಡಿತು. ಸುತ್ತಲೂ ಬಲೆ ಹಾಕಿ ಹಿಡಿದುಕೊಂಡರೂ ತಪ್ಪಿಸಿಕೊಂಡ ಚಿರತೆ ತೋಟದ ಕಡೆ ಓಡಿ ಪರಾರಿಯಾಯಿತು.
ಚಿರತೆಯೊಂದಿಗೆ ಸುಮಾರು ಐದಾರು ಗಂಟೆಗಳ ಕಾಲ ಬಂಧಿಯಾಗಿದ್ದ ಸಾಕು ನಾಯಿ ಯಾವುದೇ ಅಪಾಯವಿಲ್ಲದೇ ರಕ್ಷಣೆ ಮಾಡಲಾಗಿದೆ. ಕಾರ್ಯಚಣೆಯಲ್ಲಿ ಅರಣ್ಯ ಅಧಿಕಾರಿಗಳು, ಪಶು ವೈದ್ಯಾಧಿಕಾರಿಗಳು, ಪೊಲೀಸರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಅಡುಗೆ ಮನೆಯಲ್ಲಿ ಅನಿಲ ಸೋರಿಕೆ: ಸ್ಫೋಟಗೊಂಡ ಫ್ರಿಡ್ಜ್, ಐವರಿಗೆ ಗಾಯ