ಕೋಲಾರ : ಮಾಲೂರು ತಾಲೂಕಿನ ವೀರಕಪುತ್ರ ಎಂಬಲ್ಲಿ ಚಿರತೆ ದಾಳಿಗೆ ವ್ಯಕ್ತಿಯೊಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ಶನಿವಾರ ರಾತ್ರಿ ನಡೆದಿದ್ದು, ವ್ಯಕ್ತಿಯ ಅರ್ಧ ದೇಹವನ್ನೇ ತಿಂದು ಹಾಕಿದೆ.
ವೆಂಕಟೇಶಪ್ಪ(45) ಎನ್ನುವವರು ರಾತ್ರಿ ಮನೆಗೆ ಮರಳುತ್ತಿದ್ದ ವೇಳೆ ಚಿರತೆ ದಾಳಿ ನಡೆದಿದ್ದು, ಭಾನುವಾರ ಬೆಳಗ್ಗೆ ರಕ್ತ ಸಿಕ್ತ ಶವ ಪತ್ತೆಯಾಗಿದೆ.
ಸ್ಥಳಕ್ಕೆ ಅರಣ್ಯ ಅಧಿಕಾರಿಗಳು , ಪೊಲೀಸರು ಭೇಟಿ ನೀಡಿದ್ದಾರೆ. ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿರತೆಯನ್ನು ಬಡಿದು ಕೊಂದರು!
ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಿದ್ದ ಚಿರತೆಯನ್ನು ಗ್ರಾಮಸ್ಥರು ಬಡಿದು ಕೊಂದು ಹಾಕಿರುವ ಘಟನೆ ದಾವಣಗೆರೆಯ ಹರಪ್ಪನಹಳ್ಳಿಯ ನಂದಿಬೇವೂರು ಎಂಬಲ್ಲಿ ನಡೆದಿದೆ.
ತೋಟದಲ್ಲಿ ಅಡಗಿದ್ದ ಚಿರತೆಯನ್ನು ನೂರಾರು ಗ್ರಾಮಸ್ಥರು ಬಡಗೆ ದೊಣ್ಣೆಗಳಿಂದ ಬಡಿದುಕೊಂದಿದ್ದಾರೆ. ಚಿರತೆಯ ಮೃತದೇಹವನ್ನು ಅರಣ್ಯ ಇಲಾಖೆ ಸಿಬಂದಿ ವಶಕ್ಕೆ ಪಡೆದಿದ್ದಾರೆ.